Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಾ.ಶಿವಮೂರ್ತಿ ಸ್ವಾಮೀಜಿ ನೈತಿಕ ಹೊಣೆ ಹೊತ್ತು ಪೀಠ ತ್ಯಾಗ ಮಾಡದಿದ್ದರೆ ಪದಚ್ಯುತಿಗೆ ಕಾನೂನು ಹೋರಾಟ : ಮಾಜಿ ಸಚಿವ ಹೆಚ್.ಏಕಾಂತಯ್ಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜೂ.,19) : ಸಬ್‍ರಿಜಿಸ್ಟಾರ್ ಕಚೇರಿಯ ಮಾರ್ಗಸೂಚಿ ಬೆಲೆಗಿಂತ ಕಡಿಮೆ ಬೆಲೆಗೆ ಮುರುಘಾಮಠದ ಆಸ್ತಿಗಳನ್ನು ಮಾರಾಟ ಮಾಡಿರುವ ನೀತಿ ಭ್ರಷ್ಟ ಡಾ.ಶಿವಮೂರ್ತಿ ಸ್ವಾಮೀಜಿ ನೈತಿಕ ಹೊಣೆ ಹೊತ್ತು ಪೀಠ ತ್ಯಾಗ ಮಾಡಲಿ. ಇಲ್ಲವಾದಲ್ಲಿ ಕೊನೆಯುಸಿರಿರುವತನಕ ಕಾನೂನು ಹೋರಾಟ ಮಾಡಲಾಗುವುದು ಎಂದು ಎಸ್.ಜೆ.ಎಂ.ವಿದ್ಯಾಪೀಠದ ಗೌರ್ವಿನಿಂಗ್ ಕೌನ್ಸಿಲ್ ಮೆಂಬರ್, ಮಾಜಿ ಸಚಿವ ಹೆಚ್.ಏಕಾಂತಯ್ಯ ಹೇಳಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಏಕಾಂತಯ್ಯ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಎಸಗಿರುವ ಆರೋಪದ ಮೇಲೆ ಡಾ.ಶಿವಮೂರ್ತಿ ಶರಣರು ಜೈಲು ಸೇರಿರುವುದರಿಂದ ದಿನಾಂಕ : 13-12-2022 ರಂದು ಸರ್ಕಾರ ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಕೆಲವರು ರಿಟ್ ಅರ್ಜಿ ಸಲ್ಲಿಸಿದ್ದರಿಂದ 22-5-2023 ರಂದು ಆಡಳಿತಾಧಿಕಾರಿ ನೇಮಕ ವಜಾಗೊಳಿಸಿ ತೀರ್ಪು ನೀಡಿತು. ಇದಕ್ಕೆ ಮೇಲ್ಮನಿ ಸಲ್ಲಿಸಿರುವುದರಿಂದ 28-6-2023 ಕ್ಕೆ ವಿಚಾರಣೆ ನಿಗಧಿಯಾಗಿದೆ. ನಾನು ಸ್ವಾಮೀಜಿ ವಿರೋಧಿಯಲ್ಲ. ಮಠದ ಗೌರವ ಉಳಿಸಬೇಕೆಂಬುದು ನನ್ನ ಹಾಗೂ ಕೆಲವು ಭಕ್ತರ ಉದ್ದೇಶ ಎಂದು ಸ್ಪಷ್ಠಪಡಿಸಿದರು.

ಆರೋಪ ಬಂದಾಗಲೆ ಪೀಠ ತ್ಯಾಗ ಮಾಡಿ ಎಂದು ಶರಣರನ್ನು ಒತ್ತಾಯಿಸಿದೆ. ಅದಕ್ಕೆ ಮಣಿಯದ ಕಾರಣ ಇಂತಹ ದುರ್ಗತಿ ಅನುಭವಿಸುವಂತಾಗಿದೆ. ಗುರುತರ ಆರೋಪದಿಂದ ಹೊರಬರಬೇಕಾದರೆ ಸ್ವಾಮೀಜಿ ಪೀಠ ತ್ಯಜಿಸುವುದೊಂದೆ ದಾರಿ. ಇನ್ನು ಕೆಲವು ಫಲಾನುಭವಿಗಳು ಪೀಠಕ್ಕಿಂತ ಹೆಚ್ಚಾಗಿ ಶರಣರನ್ನು ಉಳಿಸಲು ಹೊರಟಿದ್ದಾರೆ. ಸನ್ಯಾಸಿಗೂ ಸಂಸಾರಿಗೂ ವ್ಯತ್ಯಾಸವಿದೆ. ಸಂಸಾರಿಗೆ ಹೆಣ್ಣು, ಹೊನ್ನು, ಮಣ್ಣು, ಅಧಿಕಾರದ ವ್ಯಾಮೋಹವಿರುವುದು ಸಹಜ. ಆದರೆ ಸನ್ಯಾಸಿ ಎಲ್ಲವನ್ನು ತ್ಯಾಗ ಮಾಡಿರಬೇಕೆಂದರು.

ಬೆಂಗಳೂರಿನ ಸೂಲಿಕೆರೆ ಗ್ರಾಮದಲ್ಲಿ ಸ.ನಂ.34 ರಲ್ಲಿ ಏಳು ಎಕರೆ ಹದಿನೆಂಟು ಗುಂಟೆ ಜಮೀನನ್ನು ಆನಂದ್‍ಕುಮಾರ್ ಎಂಬುವರಿಗೆ 79 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಇದು ಸಬ್‍ರಿಜಿಸ್ಟಾರ್ ಕಚೇರಿ ಮಾರ್ಗಸೂಚಿಯಂತೆ ಮೂರು ಕೋಟಿ, 59 ಲಕ್ಷ, ಐವತ್ತು ಸಾವಿರ ರೂ. ಬೆಲೆಬಾಳುತ್ತದೆ. ಹಣ ಪಡೆದಿರುವುದು ಕೇವಲ 49 ಲಕ್ಷ ರೂ.ಗಳು ಮಾತ್ರ. ಹಾವೇರಿಯಲ್ಲಿ ಸ.ನಂ. 229 ರಲ್ಲಿ 21 ಎಕರೆ 12 ಗುಂಟೆ ಜಮೀನನ್ನು ಮೂರು ಎಕರೆ 25 ಗುಂಟೆಯಂತೆ ಒಂದೊಂದು ಬ್ಲಾಕ್‍ಗಳನ್ನಾಗಿ ವಿಂಗಡಿಸಿ ನಾಲ್ಕು ಲಕ್ಷದ 75 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿದೆ.

ಆದರೆ ಇದರ ನಿಜವಾದ ಬೆಲೆ ಹತ್ತು ಲಕ್ಷದ 65 ಸಾವಿರ ರೂ.ಗಳು. ದಾವಣಗೆರೆಯ ಹುಲೆಗುಂದಿ ಗ್ರಾಮದಲ್ಲಿ 27-8-2008 ರಲ್ಲಿ ಒಂದು ನಿವೇಶನವನ್ನು ನಾಲ್ಕು ಜನರಿಗೆ ಮಾರಾಟ ಮಾಡಲಾಗಿದೆ. 1940 ರಲ್ಲಿ ಜಯದೇವ ಜಗದ್ಗುರುಗಳಿಗೆ ಬೆಳ್ಳುಳ್ಳಿ ಮುರುಗೆಪ್ಪನವರ ವಂಶಸ್ಥರು ದಾನವಾಗಿ ಕೊಟ್ಟ ನಿವೇಶನವನ್ನು ಮಾರ್ಗಸೂಚಿ ಬೆಲೆಗಿಂತ ಕಡಿಮೆ ಬೆಲೆಗೆ ಶರಣರು ಬೇಕಾಬಿಟ್ಟಿಯಾಗಿ ಮಾರಾಟ ಮಾಡಿರುವ ಸಂಗತಿಗಳು ಈಗ ಒಂದೊಂದೆ ಬೆಳಕಿಗೆ ಬರುತ್ತಿದೆ. ಹಾಗಾಗಿ ಕಾನೂನು ಹೋರಾಟಕ್ಕೆ ಸಿದ್ದನಾಗಿದ್ದೇನೆಂದು ಹೆಚ್.ಏಕಾಂತಯ್ಯ ಹೇಳಿದರು.

ಎಸ್.ಜೆ.ಎಂ.ಕಾಲೇಜು ಪಕ್ಕ ಸ.ನಂ. 9 ರಲ್ಲಿ ಆರು ಎಕರೆ 20 ಗುಂಟೆ ಜಮೀನನ್ನು 1990 ರಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮತ್ತು ಆಟದ ಮೈದಾನಕ್ಕಾಗಿ ಅಲಿನೇಷನ್ ಮಾಡಿಸಿಕೊಂಡ ಡಾ.ಶಿವಮೂರ್ತಿ ಶರಣರು 10-10-1990 ರಲ್ಲಿ ಒಂದು ಎಕರೆ 22 ಗುಂಟೆ ಆಟದ ಮೈದಾನವನ್ನು 21 ಸೈಟ್‍ಗಳಾಗಿ ವಿಂಗಡಿಸಿ ಮಾರಾಟ ಮಾಡಿದ್ದಾರೆ.

ಪ್ರತಿಯೊಂದು ವ್ಯವಹಾರವನ್ನು ಯಾರ ಗಮನಕ್ಕೂ ತಾರದೆ ಶರಣರು ಗೌಪ್ಯವಾಗಿ ನಡೆಸುತ್ತಿದ್ದರು. ಈಗ ಸ್ವಾಮಿಯ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಬಹುತೇಕ ಫಲಾನುಭವಿಗಳು ಸ್ವಾಮಿಜಿ ಶಿಷ್ಯರು ಎಂದು ಆಪಾದಿಸಿದ ಹೆಚ್.ಏಕಾಂತಯ್ಯನವರು ಅನ್ಯಾಯದ ವಿರುದ್ದ ಹೋರಾಟಕ್ಕೆ ಇಳಿದಿದ್ದೇನೆಂದು ನುಡಿದರು.

ತುಂಬೆ ಎವಿಲೇಷನ್ ಪ್ರೈವೇಟ್ ಕಂಪನಿ ಲಿಮಿಟೆಡ್ ಜೊತೆ 2-10-2020 ರಂದು ಶರಣರು ಬಸವೇಶ್ವರ ಮೆಡಿಕಲ್ ಕಾಲೇಜು ಪರವಾಗಿ ಹೆಲಿಕ್ಯಾಪ್ಟರ್ ಪಡೆಯಲು ಒಪ್ಪಂದ ಮಾಡಿಕೊಂಡು ಮೂರು ಕೋಟಿ ರೂ.ಗಳನ್ನು 12-10-2020 ಮುಂಗಡವಾಗಿ ನೀಡಿದ್ದಾರೆ. ತುರ್ತು ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆಯಿಂದ ರೋಗಿಯನ್ನು ಬೇರೆ ಕಡೆ ಕರೆದೊಯ್ಯುವುದು ಇದರ ಉದ್ದೇಶವಾಗಿತ್ತು. ಆದರೆ ಇಲ್ಲಿಯತನಕ ಯಾವೊಬ್ಬ ರೋಗಿಯನ್ನು ಬೇರೆ ಕಡೆ ಸಾಗಿಸಲು ಹೆಲಿಕ್ಯಾಪ್ಟರನ್ನು ಒಮ್ಮೆಯೂ ಬಳಸಿಲ್ಲ. ಆದರೆ ಶರಣರು ಮಾತ್ರ ತಮ್ಮ ಸ್ವಂತಕ್ಕೆ 92 ಗಂಟೆ, ಹದಿನೇಳು ನಿಮಿಷಗಳ ಕಾಲ ಹೆಲಿಕ್ಯಾಪ್ಟರ್‍ನಲ್ಲಿ ಸುತ್ತಾಡಿರುವುದಕ್ಕೆ ಒಂದು ಕೋಟಿ ಒಂದು ಲಕ್ಷ 71 ಸಾವಿರ ರೂ.ಗಳನ್ನು ಖರ್ಚು ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಖಾರವಾಗಿ ಪ್ರಶ್ನಿಸಿದರು ?

ಈಗ ಮಠಕ್ಕೆ ಉಸ್ತುವಾರಿಯಾಗಿ ನೇಮಕಗೊಂಡಿರುವ ಬಸವಪ್ರಭು ಸ್ವಾಮಿಗಳ ಅಧಿಕಾರ ವ್ಯಾಪ್ತಿ ಏನು ಎನ್ನುವುದು ಇದುವೆರವಿಗೂ ಗೊತ್ತಾಗಿಲ್ಲ. 30-11-2022 ರಲ್ಲಿ ಕೊಡಗು ಸಮೀಪದ ಅಡಗೂರು ಮಠಕ್ಕೆ ಹೋಗಿ ಅಲ್ಲಿನ ಮ್ಯಾನೇಜರ್ ಕಡೆಯಿಂದ ಆರು ಲಕ್ಷ ರೂ.ಗಳನ್ನು ತಂದು ಇಲ್ಲಿಯವರೆಗೂ ಮಠಕ್ಕೆ ಜಮ ಮಾಡದೆ ದುರುಪಯೋಗ ಪಡಿಸಿಕೊಂಡಿದ್ದಾರೆ. ದಾವಣಗೆರೆ ವಿರಕ್ತ ಮಠದಲ್ಲಿ ಎರಡು ಟ್ರಸ್ಟ್‍ಗಳನ್ನು ರಚಿಸಿಕೊಂಡು ಅಲ್ಲಿಯೂ ಹಣದ ಅವ್ಯವಹಾರವಾಗಿರುವ ಆರೋಪವಿದೆ ಎಂದು ಮಠದಲ್ಲಿ ನಡೆದಿರುವ ಒಂದೊಂದೆ ಅಕ್ರಮಗಳನ್ನು ಸಾಕ್ಷಿ ಸಮೇತ ಬಹಿರಂಗಪಡಿಸಿದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!