ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಆತ ಕೈ ಮುಗಿದಿದ್ದು ವಿಗ್ರಹವನ್ನೇ ಎಸ್ಕೇಪ್ ಮಾಡೋಕೆ..!

suddionenews
1 Min Read

 


ಬೆಳಗಾವಿ: ಇತ್ತೀಚೆಗೆ ಕಳ್ಳರು ದೇವರಿಗೂ ಹೆದರದೇ ದೇವರನ್ನೇ ಟಾರ್ಗೆಟ್ ಮಾಡ್ತಿರುವ ಘಟನೆಗಳು ನಡೆಯುತ್ತಿವೆ. ದೇವರ ಹುಂಡಿ ಕದ್ದರೆ ದೇವರ ಶಿಕ್ಷೆಗೆ ಗುರಿಯಾಗ್ತೀವೇನೋ ಎಂಬ ಭಯ ಕಳ್ಳರಲ್ಲಿತ್ತು. ಆದ್ರೆ ಅದೇಕೋ ಏನೋ ದೇವರನ್ನೇ ಎಸ್ಕೇಪ್ ಮಾಡುವ ಬುದ್ದಿ ಬಂದಿದೆ. ಈ ಹಿಂದೆ ಕೂಡ ದೇವರ ವಿಗ್ರಹದಲ್ಲಿದ್ದ ಮಾಂಗಲ್ಯವನ್ನ ಕದ್ದಿದ್ದನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಕಳ್ಳ ಅದಕ್ಕೂ ಒಂದೆಜ್ಜೆ ಮುಂದೆ ಹೋಗಿ ದೇವರನ್ನೇ ಎಸ್ಕೇಪ್ ಮಾಡಿ ಹೋಗಿದ್ದಾನೆ.

ಈ ಘಟನೆ ನಡೆದಿರೋದು ನಗರದ ಪಾಂಗೋಳ ಗಲ್ಲಿಯಲ್ಲಿ. ಈ ದೇವಾಸ್ಥಾನ ದೇಶದ ಏಕೈಕ ಅಶ್ವತ್ಥಾಮ ದೇವಾಲಯ ಎಂಬ ಖ್ಯಾತಿಗೆ ಒಳಗಾಗಿದೆ. ಈಗ ಆ ಕಳ್ಳ ಈ ದೇವಾಲಯದ ಮೂರ್ತಿಯನ್ನೇ ಕದ್ದು ಪರಾರಿಯಾಗಿದ್ದಾನೆ.

ದೇವರ ಮೂರ್ತಿ ಕದಿಯುವುದಕ್ಕೂ ಮುನ್ನ ಆತ ದೇವರಿಗೆ ಭಕ್ತಿಯಿಂದಲೇ ಕೈ ಮುಗಿದು ನಮಸ್ಕರಿಸಿದ್ದಾನೆ. ಆಗಲೇ ಬೇಡಿಕೊಂಡಿದ್ದನೋ ಏನೋ ನಿನ್ನನ್ನೇ ಕದಿಯುತ್ತಿದ್ದೇನೆ ಕ್ಷಮಿಸು ಅಂತ. ಕೈ ಮುಗುದ ಬಳಿಕ ಮೂರ್ತಿಯನ್ನೇ ಕಳ್ಳತನ ಮಾಡಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಟಿ ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ, ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ಮಾಡಿದ್ದಾರೆ. ಕಳ್ಳನನ್ನ ಹುಡುಕಲು ಆರಂಭಿಸಿದ್ದಾರೆ.

ಇನ್ನು ನಗರದಲ್ಲಿ ಈಗಾಗಲೇ ಸಾಕಷ್ಟು ಕಳ್ಳತನ ಪ್ರಕರಣಗಳು ದಾಖಲಾಗಿವೆ. ತಾಳಿ ಸರ, ಬೈಕ್ ಸೇರಿದಂತೆ ಅನೇಕ ವಸ್ತುಗಳು ಸರಣಿ‌ ಕಳ್ಳತನವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *