ಬೆಂಗಳೂರು: ರಾಜ್ಯದಲ್ಲಿ ಜಾತಿ ಗಣತಿ ನಡೆಯುತ್ತಿದೆ. ಜಾತಿ ಕಾಲಂನಲ್ಲಿ ಬರೆಸುವ ಜಾತಿಯ ಬಗ್ಗೆಯೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ನಡುವೆ ಲಿಂಗಾಯತರೆಲ್ಲ ಲಿಂಗಾಯತ ಧರ್ಮ ಎಂದೇ ಬರೆಸಿ ಎನ್ನುತ್ತಿದ್ದರೆ ಒಕ್ಕಲಿಗರೆಲ್ಲ ಒಕ್ಕಲಿಗ ಎಂದೇ ಬರೆಸಿ ಎನ್ನುತ್ತಿದ್ದಾರೆ. ಇದೀಗ ಇದರ ನಡುವೆ ಎಂಬಿ ಪಾಟೀಲ್ ನಾನು ಲಿಂಗಾಯತ ಎಂದೇ ಬರೆಸುತ್ತೇನೆ ಎಂದಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಧರ್ಮ ಸಂಘರ್ಷ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ನಾನು ಬಸವ ಧರ್ಮದ ಪರ ಇರುವವನು. ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ ಅಂತಾನೇ ಬರೆಸುತ್ತೇನೆ. ಲಿಂಗಾಯತ ಧರ್ಮ ಆದ್ರೆ ವೀರಶೈವ ಅದರ ಒಂದು ಭಾಗ ಎಂದರು. ಜಾತಿ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸುವುದಕ್ಕೆ ಹಲವರು ಸಲಹೆ ನೀಡಿದ್ದಾರೆ. ಜಾತಿ ಸಂಖ್ಯೆಯಲ್ಲಿ ಯಾವುದೇ ಗೊಂದಲವಾಗುವುದು ಬೇಡ ಎಂಬ ಕಾರಣಕ್ಕೆ ಎಲ್ಲರು ಒಗ್ಗಟ್ಟಾಗಿ ಒಂದೇ ರೀತಿಯಲ್ಲಿ ಬರೆಸುವಂತೆ ಸೂಚನೆ ನೀಡಿದ್ದಾರೆ.

ಇನ್ನು ಜಾತಿ ಗಣತಿ ಸಮೀಕ್ಷೆಯ ವೇಳೆ ವೇಗ ಕಡಿಮೆ ಆಗ್ತಾ ಇರುವುದು, ಸರ್ವರ್ ಸಮಸ್ಯೆ ಆಗ್ತಾ ಇರುವುದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಗೊಂದಲಗಳು ಬಗೆಹರಿಯಲಿವೆ. ಸರ್ವರ್ ಸಮಸ್ಯೆ, ಆ್ಯಪ್ ಸಮಸ್ಯೆ, ಶಿಕ್ಷಕರ ವಿಚಾರ ಎಲ್ಲವೂ ಸರಿ ಹೋಗಲಿದೆ. ಅಗತ್ಯ ಬಿದ್ದರೆ ಸಮಯ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ಮಾಡ್ತೇವೆ. ಆದ್ರೆ ಗಡುವಿನೊಳಗೆ ಸಮೀಕ್ಷೆ ಮುಗಿಸಲು ಪ್ರಯತ್ನ ಪಡ್ತೇವೆ ಎಂದರಲ್ಲದೇ, ಜನ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡ್ತೇವೆ, ಕೋರ್ಟ್ ಕಡ್ಡಾಯ ಅಲ್ಲ ಅಂತ ಹೇಳಿದೆ. ಅದರ ಬಗ್ಗೆ ನಾನು ಮಾತಾಡಲ್ಲ. ಆದ್ರೆ ಜನ ಸಮೀಕ್ಷೆಗೆ ಸಹಕಾರ ಕೊಡಬೇಕು ಎಂದು ಕೋರಿದರು.















