ಮೈಸೂರು: ಜಿಟಿ ದೇವೇವೇಗೌಡ ಅವರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗಾಗಲೇ ಜೆಡೊಎಸ್ ನ ಎಲ್ಲಾ ಸಭೆಗಳಿಗೂ ಜಿಟಿಡಿ ಅವರು ಗೈರಾಗುತ್ತಿದ್ದಾರೆ. ಜೆಡಿಎಸ್ ವರಿಷ್ಠರು ಕೂಡ ಜಿಟಿಡಿ ಬಿಟ್ಟು ಮುಂದೆ ಹೋಗುವಮಾತುಗಳನ್ನೇ ಆಡಿದ್ದಾರೆ. ಪಕ್ಷದ ಎಲ್ಲಾ ಸಭೆ, ಸಮಾರಂಭ, ಫ್ಲೆಕ್ಸ್ ಗಳಲ್ಲೂ ಜಿಟಿಡಿ ಫೋಟೋಗೆ ಕೋಕ್ ನೀಡಲಾಗಿದೆ. ಈ ಸಂಬಂಧ ಈಗಾಗಲೇ ಕುಮಾರಸ್ವಾಮಿ ಅವರು ಕೂಡ ಪರೋಕ್ಷವಾಗಿ ಮಾತನ್ನಾಡಿದ್ದರು. ಆದರೆ ಈಗ ಜಿಟಿ ದೇವೇಗೌಡ ಅವರು ತಮ್ಮ ಕ್ಷೇತ್ರದಲ್ಲಿ ನಿಂತು ಭಾವನಾತ್ಮಕ ಮಾತುಗಳನ್ನ ಆಡಿದ್ದಾರೆ. ಅದರಲ್ಲೂ ನಾನು ಜೆಡಿಎಸ್ ನಲ್ಲಿಯೇ ಇರ್ತೇನೆ ಎಂದಿದ್ದಾರೆ.
ಇಂದು ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಈ ಬಗ್ಗೆ ಮಾತನ್ನಾಡಿದ್ದಾರೆ. ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡದಿದ್ದರೆ ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಾನೇ ನನ್ನ ಸ್ಪರ್ಧೆ ಎಂಬ ಮಾತನ್ನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ತಿಳಿಸಿದ್ದಾರೆ.
ಇನ್ನು ನಾನು ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ, ಮುಂದೆಯೂ ಇರುತ್ತೇನೆ. ಟಿಕೆಟ್ ಕೊಡದಿದ್ದರೆ ಮತದಾರರು ನೀವೂ ಏನು ಹೇಳುತ್ತೀರಾ ಅದಕ್ಕೆ ನಾನು ಬದ್ಧ. ಅರ್ಜಿ ಹಾಕು ಅಂದ್ರೆ ಹಾಕುತ್ತೇನೆ. ನಿಮ್ಮ ಪ್ರೀತಿ ಆಶೀರ್ವಾದವೇ ನನಗೆ ದೈವ. ನನ್ನ ಬಳಿ ಏನು ಸಹಾಯ ಮಾಡಿಸಿಕೊಳ್ಳದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಆದರೆ ನಾನು ಬೆಳೆಸಿದವರು, ದುಡ್ಡು ಮಾಡಿದವರು ನನ್ನ ವಿರುದ್ಧವೆ ನಿಂತಿದ್ದಾರೆ. ಇದು ಇವತ್ತಿನದ್ದಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಬೇಸರ ಹೊರ ಹಾಕಿದ್ದಾರೆ.







