Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಾನೇ ರಾಜ್ಯಾಧ್ಯಕ್ಷನಾಗಿ ಇರ್ತೇನೆ : ವಿಜಯೇಂದ್ರ

---Advertisement---

 

ಮೈಸೂರು: ಕಳೆದ ಕೆಲವು ದಿನಗಳಿಂದ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗಿಳಿಸಲಾಗುತ್ತದೆ ಎಂದು ಬಿಜೆಒಇ ನಾಯಕರೇ ಹೇಳುತ್ತಿದ್ದಾರೆ. ಈ ಸಂಬಂಧ ಇದೀಗ ವಿಜಯೇಂದ್ರ ಅವರೇ ಮಾತನಾಡಿದ್ದು, ನಾನೇ ಅಧ್ಯಕ್ಷರಾಗಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಮೈಸೂರಿನಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ ಅವರು, ರಾಜ್ಯದ ಅಧ್ಯಕ್ಷನಾಗಿ, ಒಂದು ವರ್ಷ ನಿರಂತರವಾಗಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ ಭಾರತೀಯ ಜನತಾ ಪಾರ್ಟಿ. ಇದೇ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವಾಗ ಇದೇ ಸಿದ್ದರಾಮಯ್ಯ ಅವರು ಎಷ್ಟು ಆತಂಕದಲ್ಲಿದ್ದರು ಅಂತ ನಾನು ಹೇಳಬೇಕಿಲ್ಲ, ನಿಮಗೂ ಕೂಡ ಗೊತ್ತಿದೆ. ನಮ್ಮ ಕಾರ್ಯಕರ್ತರು, ಕಾರ್ಯವೈಖರಿಯ ಬಗ್ಗೆ ಖುಷಿಯಾಗಿದ್ದಾರೆ, ಸಂತಸವಾಗಿದ್ದಾರೆ. ನನ್ನ ಮುಂದೆ ಒಂದು ದೊಡ್ಡ ಸವಾಲಿದೆ.

ಭಾರತೀಯ ಜನತಾ ಪಾರ್ಟಿಯನ್ನು ಇನ್ನು ಸದೃಢಗೊಳಿಸಿ, ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಆ ನಿಟ್ಟಿನಲ್ಲಿ ನಾವೂ ಹೋರಾಟವನ್ನು ಮಾಡ್ತಾ ಇದ್ದೇವೆ. ಮುಂದೆ ಕೂಡ ಮಾಡ್ತೇನೆ. ಪಕ್ಷವನ್ನು ಗಟ್ಟಿಗೊಳಿಸುತ್ತೇನೆ. ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತರುತ್ತೇನೆಂದು ಹೇಳಿ ರಾಜ್ಯಾದ ಅಧ್ಯಕ್ಷನಾಗಿ ಇಂದು ಮತ್ತೆ ಹೇಳ್ತಿದ್ದೀನಿ ಅಂದ್ರೆ ನಾನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತೇನೆ ಎಂದೇ ಅರ್ಥ. ಪಕ್ಷವನ್ನು ಬಲಪಡಿಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುತ್ತೇನೆ.

ಭಿನ್ನಮತೀಯರ ಮಾತಿಗೆ ಯಾವಾಗ ಫುಲ್ ಸ್ಟಾಪ್ ಬೀಳುತ್ತೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಅವರು, ಸದ್ಯದಲ್ಲಿಯೇ ಅದೆಲ್ಲದಕ್ಕೂ ಫುಲ್ ಸ್ಟಾಪ್ ಬೀಳುತ್ತದೆ. ಮೊನ್ನೆ ದಿನ ಕೊಪ್ಪಳದಲ್ಲಿ ರಮೇಶ್ ಜಾರಕಿಹೊಳಿ ಬಗ್ಗೆ ಹೇಳುವಾಗ ಆ ಮಾತನ್ನೇ ಹೇಳಿರುವುದು. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ಇರಬೇಕು, ಯಡಿಯೂರಪ್ಪ ಅವರು ಹೋರಾಟಗಾರರು. ಭಾರತೀಯ ಜನತಾ ಪಾರ್ಟಿ ನಗರಕ್ಕೆ ಸೀಮಿತವಾಗಿದ್ದ ಪಾರ್ಟಿಯನ್ನು ಹಳ್ಳಿ ಹಳ್ಳಿಗು ತಲುಪಿಸಿರೋದು ಯಡಿಯೂರಪ್ಪ ಅವರು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...