Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ನಾನು ಯಾವುದೇ ಅವ್ಯವಹಾರ ಮಾಡಿಲ್ಲ : ವಚನಾನಂದ ಸ್ವಾಮೀಜಿ ಸ್ಪಷ್ಟನೆ

---Advertisement---

ದಾವಣಗೆರೆ: ನನ್ನ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳಬೇಕಾದರೆ ವಿಜಯಮಹಾಂತೇಶ ಗುರು ಮಠದ ಸ್ವಾಮಿಗಳನ್ನ ಕೇಳಿ. ಇವತ್ತು ಅವರು ಜೀವಂತ ಇದ್ದಾರೆ. ಕರ್ನಾಟಕದಿಂದ ಹಿಮಾಲಯದವರೆಗೆ ಸಾಕಷ್ಟು ಪ್ತವಾಸ ಮಾಡಿ, ಯೋಗ ಸಾಧನೆಯಲ್ಲಿ ಉತ್ತುಂಗಕ್ಕೆ ಬಂದಾಗ, ನಾನೇನು ಪೀಠವನ್ನು ಬೇಡಿ ಬಂದಿರೋದಲ್ಲ. ಪೀಠವೇ ನನ್ನ ಹರಸಿ ಬಂತು. ಈ ಸಮಾಜದ ನೊಗವನ್ನು ಯಾರೊಬ್ಬರು ಹೊರದೆ ಇದ್ದಾಗ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅನಾಥ ಪ್ರಜ್ಞೆ ಕಾಡುತ್ತಿದ್ದಾಗ, ಈ ಸಮಾಜದ ನೊಗವನ್ನು ಅತ್ಯಂತ ಜವಾಬ್ದಾರಿಯಿಂದ ಹೊತ್ತಿದ್ದೇನೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ನನ್ನ ಎಲ್ಲಾ ಶಕ್ತಿ, ಸಾಮರ್ಥ್ಯವನ್ನು ಸಮಾಜಕ್ಕೆ‌ ಸಮರ್ಪಿಸಿದ್ದೇನೆ. ಯಾವತ್ತು ಯಾರೊಬ್ಬರ ಅಡಿಯಾಗದೆ ಸಮಾಜದ ಅಡಿಗೆ ಎಡೆಯಾಗಿದ್ದೇನೆ. ಸಮಾಜ ಸುತ್ತು ಕಟ್ಟುವನ್ನೆಂಬ ತತ್ವದ ಮೇಲೆ‌ ಸಮರ್ಪಣೆ ಮಾಡಿಕೊಂಡಿದ್ದೇನೆ. ಪಂಚಮಸಾಲಿ ಸಮಾಜವೇ ನನ್ನ ಸರ್ವಸ್ವ. ಈ ಕ್ಷಣದಿಂದ ಇಡೀ ಸಮಾಜದ ಅತ್ಯಂತ ಕಡು ಬಡವನ ಮನೆಗೆ ಪಾದರ್ಪಣೆ ಮಾಡ್ತೇನೆ. ಈ ಸಮಾಜದ ಕಡು ಬಡವರ ಗುಡಿಸಲಿರಲಿ, ಮನೆಯಿರಲಿ ಈ ಸಮಾಜವನ್ನು ಉದ್ಧಾರರ ಹಾದಿಯಲ್ಲಿ ತೆಗೆದುಕೊಂಡು ಹೋಗುತ್ತೇನೆ.

ನಾವೂ ಯಾವುದೇ ಹಣಕಾಸಿನ ವ್ಯವಹಾರದಲ್ಲಿಲ್ಲ. ನಾನು ಬಹಳ ಸ್ವಚ್ಛವಾಗಿದ್ದೇನೆ. ನಮ್ಮ ಹೆಸರಿನ ಮೇಲೆ ಒಂದಿಂಚು ಭೂಮಿಯೂ ಇಲ್ಲ. ನಾನು ಹಣವನ್ನು ಮಾಡುವುದಕ್ಕೆ ಇಲ್ಲಿಗೆ ಬಂದಿಲ್ಲ. ಜಗತ್ತನ್ನು ಸುತ್ತಿದವನಿಗೆ, ಆದರೆ ಜನ ಮಾಡಿದ್ದೇನೆ. ಬಡವನಿರಲಿ, ಬಲ್ಲಿಗನಿರಲಿ. ತಾಯಿ ಗರ್ಭದಲ್ಲಿದ್ದಾಗಲೇ ಗುರುವಿನಿಂದ ದೀಕ್ಷೆ ಪಡೆದುಕೊಂಡವನು ನಾನು. ಯಾವುದೇ ಅವ್ಯವಹಾರವನ್ನು ನಾನು ಮಾಡಿಲ್ಲ. ನನ್ನ ಒಂದೇ ಉದ್ದೇಶ ಈ ಸಮಾಜವನ್ನು ಸರ್ವತೋಮುಖವಾಗಿ ಬೆಳೆಸಬೇಕು ಎಂಬುದೇ ಆಗಿದೆ ಎಂದಿದ್ದಾರೆ.

Join WhatsApp

Join Now

Join Telegram

Join Now