Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿನ್ನೆ ಮೋದಿ ಅವರಿಗೆ ನಾನು ಸ್ವಾಗತ ಕೂಡ ಮಾಡೋದಕ್ಕೆ ಆಗ್ಲಿಲ್ಲ : ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ನಿನ್ನೆ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದು ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಯನ್ನು ಮಾಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಇದ್ದರು. ಆದರೆ ಪ್ರಧಾನಿ ಮೋದಿ ಅವರು ಬಂದಾಗ ಸ್ವಾಗತ ಕೋರುವುದಕ್ಕೆ ಸಾಧ್ಯವಾಗಲಿಲ್ಲವಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಾನು ಪತ್ರ ನೀಡಿಲ್ಲ ಮನವಿಯೊಂದನ್ನ ಮಾಡಿದ್ದೀನಿ. ಆಕ್ಚುಲಿ ನಿನ್ನೆ ನನಗೆ ಎರಡು ಪ್ರೋಗ್ರಾಂ ಇತ್ತು. ನಾನು ವೆಲ್ಕಂ ಮಾಡಬೇಕಿತ್ತು. ಹೀಗಾಗಿ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದೆ. ರೈಲ್ವೆ ಮಿನಿಸ್ಟರ್ಸ್ ವೆಲ್ಕಂ ಮಾಡ್ತೀವಿ ಅಂದ್ರು. ಆಯ್ತು ಮಾಡಿ ಸಮಸ್ಯೆ ಇಲ್ಲ ಅಂದ್ವಿ. ಹೀಗಾಗಿ ನನ್ನ ವೆಲ್ಕಂ ಹೋಯ್ತು, ನನ್ನ ಡಿಪಾರ್ಟ್ಮೆಂಟ್ ಸಂಬಂಧಿಸಿದಂತೆ ಮಾತಾಡ್ಬೇಕಿತ್ತು ಅದು ಹೋಯ್ತು.

ನಾನು ಬೆಂಗಳೂರು ಮಿನಿಸ್ಟರ್, ಬೆಂಗಳೂರಲ್ಲಿ ಪ್ರೋಗ್ರಾಂ ಇತ್ತು. ನಾನೇ ನನ್ನ ರೆಪ್ರೆಸೆಂಟೇಷನ್ ಏನ್ ಹೇಳಬೇಕು ಅಂತ ಇತ್ತೋ ಅಷ್ಟನ್ನ ಹೇಳಿ ಅವರಿಗೆ ಹೇಳಿದ್ದೀನಿ. ಅವರು ನೋಡಿದ್ದಾರೆ. ಬೆಂಗಳೂರು ವಿಚಾರ ಏನು, ಬೆಂಗಳೂರು‌ ಎಷ್ಟು ಮುಖ್ಯ..? ಇಡೀ ಪ್ರಪಂಚವನ್ನ, ಭಾರತವನ್ನ ಬೆಂಗಳೂರು ಮುಖಾಂತರ ನೋಡಬೇಕು ಅಂತ ಪ್ರತಿಪಾದನೆ ಮಾಡಿ ಅವರೇ ಒಪ್ಪಿಕೊಂಡಿದ್ದಾರೆ. ಅಂದ್ರೆ ನಾನು ಒಬ್ಬನೆ ಮಾಡಿದ್ದೀನಿ ಅಂತ ಅಲ್ಲ ಸರ್ಕಾರಗಳು ಮಾಡಿಕೊಂಡು ಬಂದಿದೆ.

ಬಿಜೆಪಿಯ ಕೆಲವು ಖಾಲಿ ಟ್ರಂಕ್ ಗಳು ಇದಾವೆ. ಅವರ ಹೆಸರನ್ನ ನಾನು ಹೇಳೋದಕ್ಕೆ ಇಷ್ಟಪಡಲ್ಲ. ಅವೆಲ್ಲ ಜಾಸ್ತಿ ಶಬ್ಧ ಮಾಡ್ತಾ ಇದೆ. ಅದಕ್ಕೆ ಅವ್ರಿಗೆಲ್ಲಾ ನಾನು ಕಳುಹಿಸಿಕೊಡ್ತಾ ಇದ್ದೀನಿ. ಪಾರ್ಲಿಮೆಂಟ್ ನಲ್ಲಿ ಮಾತಾಡಿ, ಹತ್ ರೂಪಾಯಿ ದುಡ್ ತಗೊಂಡ್ ಬನ್ನಿ ಸಾಕು ಅಂತ. ಒಬ್ಬರು ಒಂದು ರೂಪಾಯಿ ದುಡ್ಡು ತರೋಕೆ ಆಸಕ್ತಿ ತೋರಿಸಿಲ್ಲ, ಪ್ರೈಮ್ ಮಿನಿಸ್ಟರ್ ಭೇಟಿ ಮಾಡಿಲ್ಲ. ಅದಕ್ಕೆ ಪ್ರೈಮ್ ಮಿನಿಸ್ಟರ್ ಇದನ್ನ ನೋಡಲೇಬೇಕು ಅಂತ ಕೇಳಿದ್ದೀನಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment