ಬೆಂಗಳೂರು: ನಿನ್ನೆ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದು ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಯನ್ನು ಮಾಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಇದ್ದರು. ಆದರೆ ಪ್ರಧಾನಿ ಮೋದಿ ಅವರು ಬಂದಾಗ ಸ್ವಾಗತ ಕೋರುವುದಕ್ಕೆ ಸಾಧ್ಯವಾಗಲಿಲ್ಲವಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಾನು ಪತ್ರ ನೀಡಿಲ್ಲ ಮನವಿಯೊಂದನ್ನ ಮಾಡಿದ್ದೀನಿ. ಆಕ್ಚುಲಿ ನಿನ್ನೆ ನನಗೆ ಎರಡು ಪ್ರೋಗ್ರಾಂ ಇತ್ತು. ನಾನು ವೆಲ್ಕಂ ಮಾಡಬೇಕಿತ್ತು. ಹೀಗಾಗಿ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದೆ. ರೈಲ್ವೆ ಮಿನಿಸ್ಟರ್ಸ್ ವೆಲ್ಕಂ ಮಾಡ್ತೀವಿ ಅಂದ್ರು. ಆಯ್ತು ಮಾಡಿ ಸಮಸ್ಯೆ ಇಲ್ಲ ಅಂದ್ವಿ. ಹೀಗಾಗಿ ನನ್ನ ವೆಲ್ಕಂ ಹೋಯ್ತು, ನನ್ನ ಡಿಪಾರ್ಟ್ಮೆಂಟ್ ಸಂಬಂಧಿಸಿದಂತೆ ಮಾತಾಡ್ಬೇಕಿತ್ತು ಅದು ಹೋಯ್ತು.
ನಾನು ಬೆಂಗಳೂರು ಮಿನಿಸ್ಟರ್, ಬೆಂಗಳೂರಲ್ಲಿ ಪ್ರೋಗ್ರಾಂ ಇತ್ತು. ನಾನೇ ನನ್ನ ರೆಪ್ರೆಸೆಂಟೇಷನ್ ಏನ್ ಹೇಳಬೇಕು ಅಂತ ಇತ್ತೋ ಅಷ್ಟನ್ನ ಹೇಳಿ ಅವರಿಗೆ ಹೇಳಿದ್ದೀನಿ. ಅವರು ನೋಡಿದ್ದಾರೆ. ಬೆಂಗಳೂರು ವಿಚಾರ ಏನು, ಬೆಂಗಳೂರು ಎಷ್ಟು ಮುಖ್ಯ..? ಇಡೀ ಪ್ರಪಂಚವನ್ನ, ಭಾರತವನ್ನ ಬೆಂಗಳೂರು ಮುಖಾಂತರ ನೋಡಬೇಕು ಅಂತ ಪ್ರತಿಪಾದನೆ ಮಾಡಿ ಅವರೇ ಒಪ್ಪಿಕೊಂಡಿದ್ದಾರೆ. ಅಂದ್ರೆ ನಾನು ಒಬ್ಬನೆ ಮಾಡಿದ್ದೀನಿ ಅಂತ ಅಲ್ಲ ಸರ್ಕಾರಗಳು ಮಾಡಿಕೊಂಡು ಬಂದಿದೆ.
ಬಿಜೆಪಿಯ ಕೆಲವು ಖಾಲಿ ಟ್ರಂಕ್ ಗಳು ಇದಾವೆ. ಅವರ ಹೆಸರನ್ನ ನಾನು ಹೇಳೋದಕ್ಕೆ ಇಷ್ಟಪಡಲ್ಲ. ಅವೆಲ್ಲ ಜಾಸ್ತಿ ಶಬ್ಧ ಮಾಡ್ತಾ ಇದೆ. ಅದಕ್ಕೆ ಅವ್ರಿಗೆಲ್ಲಾ ನಾನು ಕಳುಹಿಸಿಕೊಡ್ತಾ ಇದ್ದೀನಿ. ಪಾರ್ಲಿಮೆಂಟ್ ನಲ್ಲಿ ಮಾತಾಡಿ, ಹತ್ ರೂಪಾಯಿ ದುಡ್ ತಗೊಂಡ್ ಬನ್ನಿ ಸಾಕು ಅಂತ. ಒಬ್ಬರು ಒಂದು ರೂಪಾಯಿ ದುಡ್ಡು ತರೋಕೆ ಆಸಕ್ತಿ ತೋರಿಸಿಲ್ಲ, ಪ್ರೈಮ್ ಮಿನಿಸ್ಟರ್ ಭೇಟಿ ಮಾಡಿಲ್ಲ. ಅದಕ್ಕೆ ಪ್ರೈಮ್ ಮಿನಿಸ್ಟರ್ ಇದನ್ನ ನೋಡಲೇಬೇಕು ಅಂತ ಕೇಳಿದ್ದೀನಿ ಎಂದಿದ್ದಾರೆ.

