ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಅವಾರ್ಡ್ ಸಿಗುತ್ತದೆಂಬ ಆಸೆಯಿಂದ ಎಂದಿಗೂ ನಾನು ಕೆಲಸ ಮಾಡಿದವನಲ್ಲ. ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತೇನೆಂದು ಗೌರವ ಡಾಕ್ಟರೇಟ್ ಪದವಿ ಪುರಸ್ಕøತ ಡಾ.ಜಿ.ಎಂ.ಲವಕುಮಾರ್ ತಮ್ಮ ಇಂಗಿತ ವ್ಯಕ್ತಪಡಿಸಿದರು.
ಏಷ್ಯ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿರ್ವಸಿಟಿ ಪಾಂಡಿಚೇರಿಯಿಂದ ಡಾಕ್ಟರೇಟ್ ಪದವಿ ಪಡದಿರುವ ಡಾ.ಜಿ.ಎಂ.ಲವಕುಮಾರ್ ದೇವಾಲಯ ಸಂವರ್ಧನಾ ಸಮಿತಿ, ಪತಂಜಲಿ ಯೋಗ ಸಮಿತಿ ಹಾಗೂ ದವಳಗಿರಿ ಬಡಾವಣೆ ನಿವಾಸಿಗಳ ವತಿಯಿಂದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಾಗ ನನಗಿಂತ ದವಳಗಿರಿ ಬಡಾವಣೆಯ ನಿವಾಸಿಗಳು, ಹಿತೈಷಿಗಳು ಹೆಚ್ಚು ಖುಷಿ ಪಟ್ಟಿದ್ದಾರೆ. ಚಿತ್ರಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಕಾನ್ವೆಂಟ್ ರೀತಿ ಆಧುನಿಕರಣಗೊಳಿಸಿದ್ದೇನೆ. ನೀವುಗಳು ನನಗೆ ಸನ್ಮಾನಿಸಿರುವುದು ಜವಾಬ್ದಾರಿಯನ್ನು ಅಧಿಕಗೊಳಿಸಿದೆ. ಚಿತ್ರಹಳ್ಳಿ ಸಮೀಪ ಅನಾಥಾಶ್ರಮ ಹಾಗೂ ಗೋಶಾಲೆಯನ್ನು ತೆರೆಯಬೇಕೆಂದುಕೊಂಡಿದ್ದೇನೆ. ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಕು ಎಂದು ಕೋರಿದರು.
ದವಳಗಿರಿ ಬಡಾವಣೆಯ ಹಿರಿಯರಾದ ಶಾಂತಸ್ವಾಮಿ ಮಾತನಾಡಿ ಚಿತ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿ.ಎಂ.ಲವಕುಮಾರ್ ದತ್ತು ತೆಗೆದುಕೊಂಡು ಖಾಸಗಿ ಶಾಲೆಯನ್ನು ಮೀರಿಸುವ ರೀತಿ ಅಭಿವೃದ್ದಿಪಡಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಅನಾಥಾಶ್ರಮ ಗೋಶಾಲೆ ತೆರೆಯಲು ಹೊರಟಿರುವ ಇವರ ಸಾಹಸ ನಿಜಕ್ಕೂ ಮೆಚ್ಚುಂತದ್ದು, ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಕೂಡ ಏರ್ಪಡಿಸಿ ಬಡವರಿಗೆ ನೆರವಾಗಿದ್ದಾರೆ. ಇಷ್ಟೆಲ್ಲಾ ಇವರ ಸಮಾಜ ಸೇವೆ ಗೌರವ ಡಾಕ್ಟರೇಟ್ ಪದವಿಗೆ ಕಾರಣವಾಗಿರಬಹುದೆಂದು ಪ್ರಶಂಶಿಸಿದರು.
ಚಿತ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಲೇಶ್ ಮಾತನಾಡುತ್ತ ಹಳೆಯ ಶಾಲಾ ಕಟ್ಟಡದಲ್ಲಿ ಮೂರು ಕೊಠಡಿಗಳಲ್ಲಿ 64 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಸೆ.30, 2022 ರಂದು ಜಿ.ಎಂ.ಲವಕುಮಾರ್ ನಮ್ಮ ಶಾಲೆಯನ್ನು ದತ್ತು ತೆಗೆದುಕೊಂಡ ನಂತರ ಸಿ.ಸಿ. ಟಿ.ವಿ.ಅಳವಡಿಸಲಾಗಿದೆ. ಮಕ್ಕಳ ಕಲಿಕೆ ಮೇಲೆ ಅವರಿಗೆ ಕಾಳಜಿಯಿದೆ. ಪ್ರತಿನಿತ್ಯವು ಸ್ಮಾರ್ಟ್ ಕ್ಲಾಸ್ಗಳು ನಡೆಯುತ್ತಿವೆ. ಹದಿನೆಂಟು ಡೆಸ್ಕ್ಗಳನ್ನು ತಂದಿದ್ದಾರೆಂದು ಅವರ ಉದಾರತೆಯನ್ನು ಗುಣಗಾನ ಮಾಡಿದರು.
ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಿಟರ್ ಗಂಗಣ್ಣ ಮಾತನಾಡಿ ಸುಸಂಸ್ಕøತ ಕುಟುಂಬದವರಾದ ಡಾ.ಜಿ.ಎಂ.ಲವಕುಮಾರ್ ಬಡ ಮಕ್ಕಳ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಡುವುದಕ್ಕಾಗಿ ಚಿತ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಕೃಷಿ ಕಡೆಯೂ ಅವರಲ್ಲಿ ಒಲವಿದೆ. ಹಿರಿಯರ ಆಶೀರ್ವಾದ ದೇವರ ಕೃಪೆ ಸದಾ ಅವರ ಮೇಲಿರಲಿ. ಮುಂದಿನ ದಿನಗಳಲ್ಲಿ ಇನ್ನು ಅನೇಕ ಯೋಜನೆಗಳು ಅವರಿಂದ ಬಡ ಮಕ್ಕಳಿಗೆ ದೊರಕಲಿ ಎಂದು ಆಶಿಸಿದರು.
ರೈತ ಮುಖಂಡ ಕಬ್ಬಿಗೆರೆ ನಾಗರಾಜ್ ಮಾತನಾಡುತ್ತ ಜಿ.ಎಂ.ಲವಕುಮಾರ್ರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ವ್ಯಾಪಾರಸ್ಥರಾಗಿರುವ ಇವರಿಗೆ ಚಿಕ್ಕವಯಸ್ಸಿಗೆ ಡಾಕ್ಟರೇಟ್ ಪದವಿ ಸಿಕ್ಕಿರುವುದು ನಿಜಕ್ಕೂ ಅವರ ಪರಿಶ್ರಮಕ್ಕೆ ದೊರೆತ ಫಲ. ಮುಂದೆ ಇನ್ನು ಹೆಚ್ಚಿನ ಅವಕಾಶಗಳು ಲಭಿಸಲಿ ಎಂದು ಹಾರೈಸಿದರು.
ದೇವಾಲಯ ಸಂವರ್ಧನಾ ಸಮಿತಿ ಅಧ್ಯಕ್ಷ ದೇವೇಂದ್ರನಾಯ್ಕ, ಜಿ.ಎಸ್.ಗುರುಮೂರ್ತಿ, ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸಿ.ಜಿ.ಶ್ರೀನಿವಾಸ್, ಕಮಲಮ್ಮ ಇವರುಗಳು ವೇದಿಕೆಯಲ್ಲಿದ್ದರು.
ಶ್ರೀಕಾಂತ್ ಪ್ರಾರ್ಥಿಸಿದರು. ಡಾ.ಚನ್ನಕೇಶವ ಸ್ವಾಗತಿಸಿದರು. ಶಿವಲಿಂಗಪ್ಪ ವಂದಿಸಿದರು. ಶಶಿಕಿರಣ್ ನಿರೂಪಿಸಿದರು.
ಡಾ.ಜಿ.ಎಂ.ಲವಕುಮಾರ್ರವರ ಹಿತೈಷಿಗಳು, ಅಭಿಮಾನಿಗಳು ಹಾಗೂ ಕುಟುಂಬದವರು ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.













