ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಹಿಂದೂ ಘರ್ಜನೆ ಸೇನಾ ಸಂಸ್ಥಾನ ವತಿಯಿಂದ ನಗರದ ಆನೆಬಾಗಿಲು ಬಳಿ ದುರ್ಗಾದೇವಿ ದುರ್ಗೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಅ.11 ರಿಂದ ದುರ್ಗಾದೇವಿ ದುರ್ಗೋತ್ಸವ ಆರಂಭಗೊಂಡಿದ್ದು, 21 ರವರೆಗೆ 11 ದಿನಗಳ ಕಾಲ ದಿನನಿತ್ಯವೂ ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ಏಳರತನಕ ಶ್ರದ್ದಾಭಕ್ತಿಯಿಂದ ಪೂಜೆ ಸಮರ್ಪಿಸಲಾಗುವುದು. ಗಣಹೋಮ, ನವಗ್ರಹ ಹೋಮ, ಧನ್ವಂತರಿ ಹೋಮ, ನರಸಿಂಹ ಹೋಮ, ಲಲಿತ ಹೋಮ, ನವದುರ್ಗಾ ಹೋಮವಿರುತ್ತದೆ.
18 ರಂದು ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅ.21 ರಂದು ಸಂಜೆ ದೇವಿಯ ಬನ್ನಿಮುಡಿ ಉತ್ಸವದ ನಂತರ ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಗುವುದು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹಿಂದೂ ಘರ್ಜನೆ ಸೇನಾ ಸಂಸ್ಥಾನದ ಅಧ್ಯಕ್ಷ ಸಾಗರ್ ಮನವಿ ಮಾಡಿದ್ದಾರೆ. ಸ್ವಾಮಿ, ರಾಜು, ಪಾಂಡು, ಆನಂದ್, ಅಜಯ್, ತೇಜ ಇವರುಗಳು ದುರ್ಗಾದೇವಿ ದುರ್ಗೋತ್ಸವದಲ್ಲಿ ಪಾಲ್ಗೊಂಡಿದ್ದರು.











