ಸಿಎಂ ಆಗೋದಕ್ಕೆ ನಂಗೆ ಆತುರವೇನು ಇಲ್ಲ : ಡಿಕೆ ಶಿವಕುಮಾರ್

1 Min Read

ಬೆಂಗಳೂರು: ಸಿಎಂ ಸ್ಥಾನದ ರೇಸ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮೊದಲ ಸಾಲಿನಲ್ಲಿ ಇದ್ದಾರೆ. ಇದೇ ಅವಧಿಯಲ್ಲಿಯೇ ನಾನು ಕೂಡ ಸಿಎಂ ಆಗ್ತೀನಿ ಎಂಬ ಆಸೆಯನ್ನ ಇಟ್ಟುಕೊಂಡಿದ್ದಾರೆ. ಆದ್ರೆ ಕೆಲವೊಂದು ಪರಿಸ್ಥಿತಿ ಸಿಎಂ ಹುದ್ದೆ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಡಿಕೆ ಶಿವಕುಮಾರ್ ಅವರು ನನಗೆ ಸಿಎಂ ಆಗುವ ಆತುರವೇನು ಇಲ್ಲ ಎಂದಿದ್ದಾರೆ.

ಅದರಲ್ಲೂ ಸೆಪ್ಟೆಂಬರ್ ಕ್ರಾಂತಿ ಸೈಲೆಂಟ್ ಆದ್ಮೇಲೆ ನವೆಂಬರ್ ಕ್ರಾಂತಿ ಬಗ್ಗೆ ಚರ್ಚೆ ಶುರುವಾಗಿದೆ. ಈ ಸಂಬಂಧ ವಿಪಕ್ಷಗಳಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗುವುದಕ್ಕೆ ನನಗೆ ಆತುರವಿಲ್ಲ. ಯಾರೋ ಪಬ್ಲಿಕ್ ನೀವೂ ಸಿಎಂ ಆಗುವ ಸಮಯ ಹತ್ತಿರ ಬರಲಿ ಎಂದರು. ನಾನು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಆಗ್ತಿದೆ. ಯಾರೋ ನಾಗರಿಕರು ಮುಖ್ಯಮಂತ್ರಿ ಆಗುವ ಸಮಯ ಹತ್ತಿರ ಬಂತಾ ಅಂತ ಕೇಳಿದ್ರು. ಅದಕ್ಕೆ ನಾನು ಉತ್ತರಿಸಿಲ್ಲ. ನನ್ನ ಮಾತು ಹತ್ರ ಬರ್ತಿದೆ ಅಂತ ತಿರುಚಲಾಗಿದೆ. ಆ ರೀತಿ ತೋರಿಸಬೇಡಿ. ಸುಳ್ಳು ನ್ಯೂಸ್ ಕ್ರಿಯೇಟ್ ಮಾಡ್ತೀರಾ..? ಮೀಡಿಯಾದವರು ರಾಜಕಾರಣ ಮಾಡಬೇಡಿ.

ನಾನು ಮುಖ್ಯಮಂತ್ರಿ ಆಗೋ ಟೈಂ ಹತ್ತಿರ ಬಂದಿದೆ ಅಂತ ಹೇಳಿಲ್ಲ. ನನ್ನ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಸುಳ್ಳು ಸುದ್ದಿ ಹಾಕಿದ್ರೆ ಮಾನನಷ್ಟ ಕೇಸ್ ಹಾಕ್ತೀನಿ ಎಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತ ಸಿಎಂ ಆಗ್ತೀನಿ ಎಂಬ ಭರವಸೆಯನ್ನ ಡಿಸಿಎಂ ಡಿಕೆ ಶಿವಕುಮಾರ್ ಇಟ್ಟುಕೊಂಡಿದ್ದಾರೆ.

 

Share This Article