Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿನ್ನ–ಬೆಳ್ಳಿ ದರದಲ್ಲಿ ಭಾರಿ ಕುಸಿತ : ಗ್ರಾಹಕರಿಗೆ ಸಿಕ್ಕಿತು ದೊಡ್ಡ ರಿಲೀಫ್

---Advertisement---

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿದಾರರಿಗೆ ಇಂದು ಭಾರೀ ನಿರಾಳತೆ ಸಿಕ್ಕಿದೆ. ಕಳೆದ ಹಲವು ದಿನಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಹಳದಿ ಲೋಹದ ದರದಲ್ಲಿ ಇದೀಗ ದಿಢೀರ್ ಕುಸಿತ ದಾಖಲಾಗಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳು ಹಾಗೂ ಆರ್ಥಿಕ ಬದಲಾವಣೆಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ವಿದೇಶಗಳಿಂದ ಆಮದು ಆಗುವ ಚಿನ್ನ ಮತ್ತು ಬೆಳ್ಳಿಯ ಮೇಲಿನ ಸುಂಕ ಹೆಚ್ಚಿಸಿದ್ದರಿಂದ ದರಗಳು ಗಗನಕ್ಕೇರಿದ್ದವು. ಆದರೆ ಇದೀಗ ಮಾರುಕಟ್ಟೆ ತಣ್ಣಗಾಗುತ್ತಿದ್ದು, ಬೆಲೆಗಳು ಇಳಿಮುಖವಾಗಿವೆ.

ಇಂದಿನ ಚಿನ್ನದ ದರ
ಶನಿವಾರ ಬೆಳಿಗ್ಗೆ 6 ಗಂಟೆ ವೇಳೆಗೆ ದೇಶೀಯ ಮಾರುಕಟ್ಟೆಯಲ್ಲಿ:
24 ಕ್ಯಾರೆಟ್ ಚಿನ್ನ (10 ಗ್ರಾಂ) : ₹1,57,900
22 ಕ್ಯಾರೆಟ್ ಚಿನ್ನ (10 ಗ್ರಾಂ) : ₹1,44,740
ಬೆಲೆಯಲ್ಲಿ ಎಷ್ಟು ಇಳಿಕೆ?
ನಿನ್ನೆಗಿನ ದರಕ್ಕೆ ಹೋಲಿಸಿದರೆ:
24 ಕ್ಯಾರೆಟ್ ಚಿನ್ನದ ದರದಲ್ಲಿ ₹4,420 ಇಳಿಕೆ
22 ಕ್ಯಾರೆಟ್ ಚಿನ್ನದ ದರದಲ್ಲಿ ₹4,050 ಕುಸಿತ
ಬೆಳ್ಳಿ ದರದಲ್ಲೂ ಭಾರೀ ಇಳಿಕೆ
ಚಿನ್ನದ ಬೆನ್ನಲ್ಲೇ ಬೆಳ್ಳಿಯ ದರವೂ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ ₹10,000 ತನಕ ಕಡಿತವಾಗಿದೆ.
ಪ್ರಮುಖ ನಗರಗಳ ಬೆಳ್ಳಿ ದರ
ಹೈದರಾಬಾದ್, ವಿಜಯವಾಡ, ಚೆನ್ನೈ, ಕೇರಳ : ₹3,04,900 / ಕೆಜಿ
ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ : ₹2,89,900 / ಕೆಜಿ
ಪ್ರಮುಖ ನಗರಗಳ ಚಿನ್ನದ ದರ (10 ಗ್ರಾಂಗೆ)
ನಗರ24 ಕ್ಯಾರೆಟ್22 ಕ್ಯಾರೆಟ್

ಬೆಂಗಳೂರು
₹1,57,900
₹1,44,740
ಹೈದರಾಬಾದ್
₹1,57,900
₹1,44,740
ವಿಜಯವಾಡ
₹1,57,900
₹1,44,740
ಮುಂಬೈ
₹1,57,900
₹1,44,740
ಕೋಲ್ಕತಾ
₹1,57,900
₹1,44,740
ದೆಹಲಿ
₹1,58,050
₹1,44,890
ಚೆನ್ನೈ
₹1,61,070
₹1,47,640

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now