Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣ : ಸಿಎಂ ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ನಿನ್ನೆ ಹುಬ್ಬಳ್ಳಿ ಕಾಲೇಜಿನಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನೇ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದನ್ನು ಲವ್ ಜಿಹಾದ್ ಎಂದೇ ಬಿಂಬಿಸುತ್ತಿದ್ದಾರೆ. ಈ ಸಂಬಂಧ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಬಗ್ಗೆ ಮಾತನಾಡಿದ್ದಾರೆ.

ಈ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಯಾವುದೇ ಮರ್ಡರ್ ವೈಯಕ್ತಿಕ ಕಾರಣಕ್ಕೆ ಆಗಿರತ್ತೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರ ಕೆಲಸ ಅದನ್ನ ಮಾಡ್ತಿದ್ದೇವೆ. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ. ಮೃತ ಯುವತಿಯ ಕುಟುಂಬಕ್ಕೆ ನನ್ನ ಸಂತಾಪಗಳು. ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಕಟ್ಟುನಿಟ್ಟಿನ ತನಿಖೆ ನಡೆಸಿ, ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ.

ಘಟನೆ ಸಂಬಂಧ ಯಾರೊಬ್ಬರೂ ಉದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆತ್ತಿಕೊಳ್ಳುವುದಾಗಲೀ ಅಥವಾ ಸಮಾಜದ ಶಾಂತಿ ಕದಡುವ ಪ್ರಯತ್ನಕ್ಕೆ ಮುಂದಾಗಬಾರದು.
ಯುವತಿಯ ಸಾವಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ‌ ಕರ್ತವ್ಯ, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶಕ್ತಿಮೀರಿ ಶ್ರಮಿಸಲಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!