Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

4ನೇ ಸ್ಥಾನಕ್ಕೆ ಬಂದ ಕಾವ್ಯಾಗೆ ಸಿಕ್ಕ ಹಣವೆಷ್ಟು..?

---Advertisement---

ಬೆಂಗಳೂರು: ಬಿಗ್ ಬಾಸ್ ಸೀಸನ್ 12 ಇಂದು ಮುಕ್ತಾಯಗೊಂಡಿದೆ. ಸೀಸನ್ 12ರಲ್ಲಿ ಕಾವ್ಯಾ ಶೈವ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಾವ್ಯಾ ಕೂಡ ಸುದೀಪ್ ಅವರ ಮತ್ತೊಂದು ಕೈನಲ್ಲಿ ಇರ್ತಾರೆ, ಫಿನಾಲೆ ಗೆದ್ದು ಬರ್ತಾರೆ ಅಂತ ಅವರ ಕುಟುಂಬಸ್ಥರು ಅಂದುಕೊಂಡಿದ್ದರು. ಆದರೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನಕ್ಕೆ ಬಂದ ಕಾವ್ಯಾಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ..?

ಸದ್ಯಕ್ಕೆ ಕಲರ್ಸ್ ಕನ್ನಡದವರೇ ಅಧಿಕೃತವಾಗಿ ಅನೌನ್ಸ್ ಮಾಡಿದಂತೆ ಕಾವ್ಯಾಗೆ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಕಾವ್ಯಾ ಅವರನ್ನು ಅಂದ್ರೆ ನಾಲ್ಕನೇ ಸ್ಥಾನದ ಸ್ಪರ್ಧಿಯನ್ನು ಹೊರಗೆ ಕರೆದುಕೊಂಡು ಬರುವುದಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಗೆಸ್ಟ್ ಆಗಿ ಕಳುಹಿಸಲಾಗಿತ್ತು. ರವಿಚಂದ್ರನ್ ಅವರು 15 ಲಕ್ಷದ ಸೂಟ್ ಕೇಸ್ ಹಿಡಿದುಕೊಂಡು ಹೋಗಿದ್ದರು. ಆದರೆ ಆ ಸೂಟ್ ಕೇಸನ್ನ ಯಾರೂ ತೆಗೆದುಕೊಳ್ಳಲಿಲ್ಲ. ಬಳಿಕ ಕಾವ್ಯಾನೇ ಮನೆಯಿಂದ ಹೊರಗೆ ಬಂದರು.

ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಕಾವ್ಯಾ, ಗಿಲ್ಲಿ ಜೊತೆಗಿನ ಸ್ನೇಹದಿಂದ ಇಷ್ಟು ದಿನ ಮನೆಯಲ್ಲಿ ಉಳಿದುಕೊಂಡಿದ್ದರು. ಅದರಲ್ಲೂ ಗಿಲ್ಲಿ ಕಾವು ಕಾವು ಅಂತಾನೇ ಖ್ಯಾತಿ ಬರುವಂತೆ ಮಾಡಿದ್ದರು. ಮನೆಯೊಳಗಿಂದ ವಾಪಾಸ್ ಬಂದ ಸ್ಪರ್ಧಿಗಳು ಕೂಡ ಅದನ್ನೇ ಹೇಳ್ತಾ ಇದ್ದರು. ಗಿಲ್ಲಿಯಿಂದ ಕಾವ್ಯಾ ಅಷ್ಟೇ ಅಂತ. ನೋಡುಗರಿಗೂ ಅದು ಸತ್ಯ ಎನಿಸುವಂತೆಯೇ ಮನೆಯೊಳಗೆ ನಡೆಯುತ್ತಾ ಇತ್ತು. ಇದೀಗ ಕಾವ್ಯಾ ಮನೆಯಿಂದ ಹೊರಗೆ ಬಂದಿದ್ದಾರೆ. ಅಷ್ಟೇ ಅಲ್ಲ ನನ್ನ ಜೊತೆಗೆ ಸುದೀಪ್ ಸರ್ ಜೊತೆಗೆ ಕಾವ್ಯಾ ಕೈ ಕೂಡ ಇರುತ್ತೆ ಅಂತ ಗಿಲ್ಲಿನೇ ಹೇಳಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...