ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಗೆದ್ದವರೆಷ್ಟು..? ಸೋತವರೆಷ್ಟು..? ಇಲ್ಲಿದೆ ಮಾಹಿತಿ

 

ಇಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಕೆಲವೊಂದು ನಿರೀಕ್ಷಿತ ಕ್ಷೇತ್ರಗಳಲ್ಲಿಯೇ ಅಭ್ಯರ್ಥಿಗಳು ಸೋತಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 17 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದೆ. ಜೆಡಿಎಸ್ 2 ಸ್ಥಾನ ಗೆದ್ದಿದೆ. ಯಾವ್ಯಾವ ಕ್ಷೇತ್ರದಲ್ಲಿ ಯಾರ್ಯಾರು ಗೆದ್ದರು..? ಎದುರಾಳಿಗಳು ಯಾರಿದ್ದರು ಎಂಬ ಡಿಟೈಲ್ ಇಲ್ಲಿದೆ.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷ ಒಟ್ಟು 19 ಕ್ಷೇತ್ರ ಗೆದ್ದಿದೆ. ಮಂಡ್ಯದಲ್ಲಿ ಈ ಬಾರಿ ಕುಮಾರಸ್ವಾಮಿ ಭರ್ಜರಿ ಗೆಲುವು ಕಂಡಿದ್ದಾರೆ. ಲಕ್ಷಕ್ಕೂ ಅಧಿಕ ಅಂತರದಿಂದ ಗೆದ್ದು ಬೀಗಿದ್ದಾರೆ. ಅವರ ಎದುರು ನಿಂತಿದ್ದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸೋತಿದ್ದಾರೆ. ಇನ್ನು ಟಿಕೆಟ್ ಸಿಗದೆ‌ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸೋತಿದ್ದ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಎಂಪಿ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಸೋಲು‌ ಕಂಡಿದ್ದಾರೆ. ಹಾವೇರಿಯಿಂದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಗೆಲುವಿನ ನಗೆ ಬೀರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸೋತಿದ್ದ ವಿ.ಸೋಮಣ್ಣ ಅವರನ್ನು ತುಮಕೂರಿನ ಜನತೆ ಕೈಹಿಡಿದಿದ್ದಾರೆ. ವಿಶ್ವೇಶ್ಚರ ಕಾಗೇರಿ ಅವರು ಕಾಂಗ್ರೆಸ್ ನ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಸೋಲಿಸಿದ್ದಾರೆ. ಸುಧಾಕರ್ ಕೂಡ ಸಂಸತ್ ಪ್ರವೇಶ ಮಾಡುತ್ತಿದ್ದಾರೆ.

 

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನಿಂದ ಪ್ರಿಯಾಂಕಾ ಜಾರಕಿಹೊಳಿ ಗೆದ್ದಿದ್ದು, ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಸೋತಿದ್ದಾರೆ. ವಿಜಯಪುರದಲ್ಲಿ ಬಿಜೆಪಿಯ ರಮೇಶ್ ಜಿಗಜಿಣಗಿ ಗೆದ್ದಿದ್ದು, ಕಾಂಗ್ರೆಸ್ ನ ಎಚ್‌ಆರ್ ರಾಜು ಆಲಗೂರ ಸೋತಿದ್ದಾರೆ. ಬೀದರ್ ನಲ್ಲಿ ಕಾಂಗ್ರೆಸ್ ಸಾಗರ್ ಖಂಡ್ರೆ ಗೆಲುವು ಕಂಡಿದ್ದು, ಬಿಜೆಪಿಯ ಭಗವಂತ ಖೂಬಾ ಸೋತಿದ್ದಾರೆ.

ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ್ ಎದುರು ಕಾಂಗ್ರೆಸ್ ಸಂಯುಕ್ತಾ ಪಾಟೀಲ್ ಸೋತಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಇ. ತುಕಾರಾಂ ಗೆಲುವು ಕಂಡಿದ್ದಾರೆ. ಬಿಜೆಪಿಯ ಬಿ. ಶ್ರೀರಾಮುಲು ಸೋಲುಂಡಿದ್ದಾರೆ. ಕೊಪ್ಪಳದಲ್ಲಿ ಕಾಂಗ್ರೆಸ್ ರಾಜಶೇಖರ್ ಹಿಟ್ನಾಳ್ ಎದುರು ಬಿಜೆಪಿಯ ಡಾ. ಬಸವರಾಜ ಕವಟೂರು ಸೋತಿದ್ದಾರೆ. ರಾಯಚೂರಿನಲ್ಲಿ ಕಾಂಗ್ರೆಸ್ ನ ಜಿ. ಕುಮಾರ ನಾಯಕ್ ಗೆದ್ದಿದ್ದು, ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಸೋತಿದ್ದಾರೆ. ಕಲಬುರಗಿಯಲ್ಲಿ ಕಾಂಗ್ರೆಸ್ ನ ಡಾ. ರಾಧಾಕೃಷ್ಣ ದೊಡ್ಡಮನಿ ಗೆಲುವು, ಬಿಜೆಪಿಯ ಡಾ. ಉಮೇಶ್ ಜಾಧವ್ ಸೋಲು. ಹಾವೇರಿಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಗೆಲುವು, ಕಾಂಗ್ರೆಸ್ ನ ಆನಂದಸ್ವಾಮಿ ಗಡ್ಡದೇವರಮಠ ಸೋಲು. ಧಾರವಾಡದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ ಗೆಲುವು, ಕಾಂಗ್ರೆಸ್ ನ ವಿನೋದ್ ಅಸೂಟಿ ಸೋಲು.

ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರಭಾ ಮಲ್ಲಿಕಾರ್ಜುನ್ ಗೆಲುವು, ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಸೋಲು. ತುಮಕೂರು ವಿ. ಸೋಮಣ್ಣ ಗೆಲುವು ಮುದ್ದಹನುಮೇ ಗೌಡ ಸೋಲು. ಶಿವಮೊಗ್ಗ ಬಿ. ವೈ. ರಾಘವೇಂದ್ರ (ಬಿಜೆಪಿ) ಗೆಲುವು ಗೀತಾ ಶಿವರಾಜ್ ಕುಮಾರ್ (ಕಾಂಗ್ರೆಸ್) ಸೋಲು, ಉಡುಪಿ-ಚಿಕ್ಕಮಗಳೂರುಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) ಗೆಲುವು, ಜಯಪ್ರಕಾಶ್ ಹೆಗಡೆ (ಕಾಂಗ್ರೆಸ್) ಸೋಲು, ದಕ್ಷಿಣ ಕನ್ನಡಕ್ಯಾಪ್ಟನ್ ಬ್ರಿಜೇಶ್ ಚೌಟಾ (ಬಿಜೆಪಿ)ಗೆಲುವು ಪದ್ಮರಾಜ್ (ಕಾಂಗ್ರೆಸ್) ಸೋಲು, ಚಾಮರಾಜನಗರಸುನೀಲ್ ಬೋಸ್ (ಕಾಂಗ್ರೆಸ್) ಗೆಲುವು, ಎಸ್. ಬಾಲರಾಜು (ಬಿಜೆಪಿ) ಸೋಲಿ, ಮೈಸೂರು-ಕೊಡಗುಯದುವೀರ್ ಒಡೆಯರ್ (ಬಿಜೆಪಿ) ಗೆಲುವು ಎಂ. ಲಕ್ಷ್ಮಣ (ಕಾಂಗ್ರೆಸ್) ಸೋಲು, ಬೆಂಗಳೂರು ಗ್ರಾಮಾಂತರಡಾ. ಸಿ. ಎನ್. ಮಂಜುನಾಥ್ (ಬಿಜೆಪಿ) ಗೆಲುವು ಡಿ. ಕೆ. ಸುರೇಶ್ (ಕಾಂಗ್ರೆಸ್) ಸೋಲು, ಬೆಂಗಳೂರು ಉತ್ತರಶೋಭಾ ಕರಂದ್ಲಾಜೆ (ಬಿಜೆಪಿ) ಗೆಲುವು ಪ್ರೊ. ರಾಜೀವ್ ಗೌಡ (ಕಾಂಗ್ರೆಸ್) ಸೋಲು, ಬೆಂಗಳೂರು ದಕ್ಷಿಣತೇಜಸ್ವಿ ಸೂರ್ಯ (ಬಿಜೆಪಿ) ಗೆಲುವು ಸೌಮ್ಯಾ ರೆಡ್ಡಿ (ಕಾಂಗ್ರೆಸ್) ಸೋಲು, ಬೆಂಗಳೂರು ಕೇಂದ್ರಪಿ. ಸಿ. ಮೋಹನ್ (ಬಿಜೆಪಿ) ಗೆಲುವು ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್) ಸೋಲು, ಹಾಸನ ಶ್ರೇಯಸ್ ಪಟೇಲ್ (ಕಾಂಗ್ರೆಸ್) ಗೆಲುವು ಪ್ರಜ್ವಲ್ ರೇವಣ್ಣ (ಜೆಡಿಎಸ್) ಸೋಲು, ಚಿಕ್ಕಬಳ್ಳಾಪುರಡಾ. ಕೆ. ಸುಧಾಕರ್ (ಬಿಜೆಪಿ) ಗೆಲುವು ರಕ್ಷಾ ರಾಮಯ್ಯ (ಕಾಂಗ್ರೆಸ್) ಸೋಕು, ಕೋಲಾರಮಲ್ಲೇಶ್ ಬಾಬು (ಜೆಡಿಎಸ್) ಗೆಲುವು ಕೆ. ವಿ. ಗೌತಮ್ (ಕಾಂಗ್ರೆಸ್) ಸೋಲು. ಚಿತ್ರದುರ್ಗಗೋವಿಂದ ಕಾರಜೋಳ ಗೆದ್ದಿದ್ದು, ಕಾಂಗ್ರೆಸ್ ನ ಬಿ.ಎನ್. ಚಂದ್ರಪ್ಲ ಸೋತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *