ಚಿಕ್ಕಮಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರೋದು ಬಿಜೆಪಿನೆ. ತಾನೂ ಕಳ್ಳ ಪರರನ್ನು ನಂಬಿದ ಎಂಬುದು ಕಾಂಗ್ರೆಸ್ ಗೆ ಅನ್ವಯವಾಗುತ್ತದೆ. ಈ ಹಿಂದೆ ಸಿದ್ದರಾಮಯ್ಯ ಮೇಲೆ ಹ್ಯೂಬ್ಲೋ ವಾಚ್ ಪ್ರಕರಣ ಬಂತು. ಕಳ್ಳತನ, ಅಕ್ರಮದ ವಾಚ್. ಆದರೆ ಮುಖ್ಯಮಂತ್ರಿ ಕೈಗೆ ಹೇಗೆ ಬಂತು ಅನ್ನೋದು ಇನ್ನು ತನಿಖೆಯಾಗಲೇ ಇಲ್ಲ. ತಿಪ್ಪೆ ಸಾರಿಸುವ ಕೆಲಸ ಮಾಡಿದರು ಎಂದು ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಕ್ರೋಶ ವ್ಯಕ್ಯಪಡಿಸಿದ್ದಾರೆ.
ಏನಾದರೂ ಮಾಡಲಿ ನಮ್ಮ ವೋಟ್ ಬ್ಯಾಂಕ್ ಆಗಬೇಕು ಅಂತ ಕಾಂಗ್ರೆಸ್ ಮಾಡುತ್ತಿದೆ. ವೋಟ್ ಬ್ಯಾಂಕ್ ಹಿಂದೆ ಬಿದ್ದಿರೋ ಕಾಂಗ್ರೆಸ್ ನಡೆ ದೇಶಕ್ಕೆ ಅಪಾಯಕಾರಿ. ಕೋಮುಖ ವ್ಯಾಘ್ರಗಳ ರೀತಿಯಲ್ಲಿ ಒಳಗಿರುವವರು ತುಂಬಾ ಅಪಾಯಕಾರಿ. ಹೊರಗಡೆ ಶತ್ರುಗಳು ಕಣ್ಣಿಗೆ ಗೋಚರವಾಗುತ್ತಾರೆ. ಅದನ್ನು ನಿಗ್ರಹಿಸುವುದು ಕಷ್ಟವಲ್ಲ. ಆದರೆ ಒಳಗಡೆಯ ಶತ್ರುಗಳು ಹಾನಿ ಮಾಡುತ್ತಾರೆ ಅವರನ್ನು ನಿಗ್ರಹಿಸಬೇಕು ಅಂತ ಚಾಣುಕ್ಯ ಹೇಳುತ್ತಾನೆ. ಹೀಗಾಗಿ ಈ ದೇಶಕ್ಕೆ ಕಾಂಗ್ರೆಸ್ ಎಷ್ಟು ಅಪಾಯಕಾರಿ ಅನ್ನೋದು ಈ ಎಲ್ಲಾ ಘಟನೆಯಿಂದ ಗೊತ್ತಾಗುತ್ತೆ.
ಗಲಭೆ ಎಬ್ಬಿಸಿ ಸಂಚು ಮಾಡಿ, ಗಲಭೆಯಿಂದ ಗೋಲಿಬಾರ್ ಆದಾಗ ಇಡೀ ಕಾಂಗ್ರೆಸ್ ನವರು ವೈಧವ್ಯ ಪ್ರಾಪ್ತಿಯಾದವರಂತೆ ಆಡಿದಿರಿ. ಒಡೆಯುವುದರಲ್ಲೆ ಆಸಕ್ತಿ ಇರುವುದು, ಒಡೆಯುವವರಿಗೆ ಅವರ ಬೆಂಬಲವಿರುವುದು. ಇವತ್ತಿನ ಕಾಂಗ್ರೆಸ್ ನ ನೀತಿಯಾಗುದೆ, ಅದೇ ರೀತಿ ಅವರು ನಡೆದುಕೊಳ್ಳುತ್ತಿದ್ದಾರೆ. ಜಮೀರ್ ಅಹ್ಮದ್ ಸುದ್ದಿ ಕೇಳುತ್ತಿದ್ದರೆ ಅದಕ್ಕೆ ಪುಷ್ಟಿ ನೀಡುವಂತಿದೆ ಎಂದು ಜಮೀರ್ ಅಹ್ಮದ್ ಆರೋಪಿಗಳ ಕುಟುಂಬಕ್ಕೆ ಕಿಟ್ ನೀಡಿದರ ಬಗ್ಗೆ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.