Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಸೆಂಬರ್ ನಲ್ಲಿ ಮನೆ ಗೃಹಪ್ರವೇಶ, ಮೀಡಿಯಾದವ್ರನ್ನ ಕರೆಯಲ್ಲ : ಸಿದ್ದರಾಮಯ್ಯ ಹೀಂಗೇಳಿದ್ಯಾಕೆ..?

---Advertisement---

ಮೈಸೂರು: ಸಿಎಂ ಸಿದ್ದರಾಮಯ್ಯ ಹೊಸ ಮನೆಯ ಗೃಹ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಮಾಧ್ಯಮದವರನ್ನ ಗೃಹ ಪ್ರವೇಶಕ್ಕೆ ಕರೆಯುವುದಿಲ್ಲ ಎಂಬ ಮಾತನ್ನ ಹೇಳಿದ್ದಾರೆ. ಹೊಸ ಮನೆ ಬಗ್ಗೆ ಏನೆಲ್ಲಾ ಹೇಳಿದ್ರು ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ಡಿಸೆಂಬರ್ ನಲ್ಲಿ ಹೊಸ ಮನೆ ಗೃಹ ಪ್ರವೇಶವಿದೆ. ಯಾರನ್ನೂ ಗೃಹ ಪ್ರವೇಶಕ್ಕೆ ಆಹ್ವಾನಿಸುವುದಿಲ್ಲ. ಮಾಧ್ಯಮದವರನ್ನು ಆಹ್ವಾನಿಸುವುದಿಲ್ಲ. ನೀವೂ ಬಂದರೂ ಬೇಡ ಎಂದು ಕಳುಹಿಸುತ್ತೇನೆ. ಮನೆಯ ಕೆಲಸ ಬಹುತೇಕ ಸಂಪೂರ್ಣವಾಗಿದೆ. ಬರೀ ಕುಟುಂಬಸ್ಥರಷ್ಟೇ ಸೇರಿ ಗೃಹಪ್ರವೇಶ ಮಾಡಿಕೊಳ್ಳುತ್ತೇವೆ. ನಾನು ಈಗ ಇರುವ ಮನೆ ನನ್ನದಲ್ಲ, ಮರಿಸ್ವಾಮಿ ಅವರದ್ದು. ಮರಿಸ್ವಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ. ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇವೆ. ಈ ಮನೆಯನ್ನು ಮರಿಸ್ವಾಮಿ ಖಾಲಿ ಇಟ್ಟರೆ ಜನರನ್ನು ಭೇಟಿ ಮಾಡಲು ಬಳಸಿಕೊಳ್ಳುತ್ತೇವೆ. ಇಷ್ಟು ದಿನ ಅನ್ನದಾತನಾಗಿದ್ದರು ಎಂದು ಹೇಳಿದ್ದಾರೆ.

ಇದೆ ವೇಳೆ ವಿಪಕ್ಷ ನಾಯಕ ಆರ್ ಅಶೋಕ್ ಮಾತಿಗೆ ತಿರುಗೇಟು ನೀಡಿದ್ದು, ಪ್ರತಿ ನಿತ್ಯ ಆರ್ ಎಸ್ ಎಸ್ ಬರೆದುಕೊಡುವುದನ್ನಿ ಹೇಳುವ ಅಶೋಕನಿಗೆ ರಾಜ್ಯದ ಸಮಸ್ಯೆ ಏನು ಗೊತ್ತು. ಆರ್ ಎಸ್ ಎಸ್ ಏನು ಬರೆದುಕೊಡುತ್ತದೆಯೋ ಅದನ್ನೇ ಅಶೋಕ ಹೇಳುತ್ತಾನೆ. ಅವನಿಗೆ ರೈತನ ಸಮಸ್ಯೆ, ನಾಡಿನ ಸಮಸ್ಯೆ ಏನು ಗೊತ್ತು? ಸುಮ್ನೆ ವಿಪಕ್ಷ ನಾಯಕನನ್ನಾಗಿ ಮಾಡಿದ್ದಾರೆ, ಆಗಿದ್ದಾನೆ ಅಷ್ಟೇ ಎಂದು ಆರ್ ಅಶೋಕ್ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಗಿ ಮಾತನಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now