Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆಗಳು ದೊಡ್ಡದಾಗುತ್ತಿವೆ, ಮನಸ್ಸುಗಳು ಚಿಕ್ಕದಾಗುತ್ತಿವೆ : ಮನೋಹರ ಮಠದ್

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಜ. 29 : ಪುರಾತನವಾದ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ನಾವು ಮರೆಯುತ್ತಿದ್ದೇವೆ, ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದೇವೆ ಆದರೆ ವಿಪರ್ಯಾಸ ಎಂದರೆ ವಿದೇಶಿಯವರು ನಮ್ಮ ಸಂಸ್ಕøತಿಯನ್ನು ಅನುಸರಿಸುತ್ತಿದ್ದಾರೆ ನಮ್ಮಲ್ಲಿ ವೇಷ ಎನ್ನುವುದು ದಿಕ್ಕು ತಪ್ಪುತ್ತಿದೆ, ದೇವಾಲಯಗಳಲ್ಲಿ ಸರಿಯಾದ ಉಡುಪು ಧರಿಸಿಕೊಂಡು ಬನ್ನಿ ಎಂದು ಬೋರ್ಡ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕರಾದ ಮನೋಹರ ಮಠದ್ ವಿಷಾಧಿಸಿದರು.

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನೆಹರು ನಗರ ಇದರವತಿಯಿಂದ ಚಿತ್ರದುರ್ಗ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಭಗವಂತನಲ್ಲಿ ಸರ್ವಜನ ಸುಖೀನೋ ಭವತುಃ ಎಂದು ಬೇಡುವುದಕ್ಕಿಂತ ನನಗೆ, ನಮ್ಮ ಮನೆಯವರಿಗೆ, ನಮ್ಮ ಕುಟುಂಬದವರಿಗೆ ನೀಡುವಂತೆ ಬೇಡುವವರ ಸಂಖ್ಯೆ ಹೆಚ್ಚಾಗಿದೆ, ನಾವು ಎಷ್ಟೇ ಬೇಡಿದರು ಸಹಾ ಭಗವಂತ ನಮಗೆ ಎಷ್ಟು ನೀಡಬೇಕೂ ಅಷ್ಟೇ ಮಾತ್ರ ನೀಡುತ್ತಾನೆ. ನಾವುಗಳು ನಮ್ಮ ಪಾಲಿನ ಕೆಲಸವನ್ನು ಮಾಡಬೇಕು ಅದಕ್ಕೆ ತಕ್ಕಂತೆ ಫಲವನ್ನು ನೀಡುವುದು ಭಗವಂತನ ಕೆಲಸವಾಗಿದೆ ಹೆಚ್ಚಿನದಕ್ಕೆ ಆಸೆಯನ್ನು ಪಡಬಾರದು ಎಂದರು.

ಮುಸ್ಲಿಂರು ಬೇಡುತ್ತಾರೆ, ಕೈಸ್ತರು ಪ್ರಾರ್ಥನೆಯನ್ನು ಮಾಡುತ್ತಾರೆ, ಹಿಂದೂಗಳು ಪೂಜೆಯನ್ನು ಮಾಡುತ್ತಾರೆ. ಹೀಗೆ ಅವರ ಅವರ ಧರ್ಮಕ್ಕೆ ತಕ್ಕಂತೆ ನಡೆಯುತ್ತಾರೆ, ಆದರೆ ನಮ್ಮ ಬದುಕು ಮಾನತ್ವದಿಂದ ದೈವತ್ವದ ಕಡೆಗೆ ಹೋಗಬೇಕಿದೆ. ಇದರಿಂದ ಬದುಕು ಸಾರ್ಥಕತೆಯನ್ನು ಪಡೆಯಬೇಕಿದೆ. ಮಾನವ ಸತ್ತಾಗ ಹಲವಾರು ಜನತೆ ನಮ್ಮ ಸ್ಮರಣೆಯನ್ನು ಮಾಡುವಂತ ಸಾವು ನಮ್ಮದಾಗಬೇಕಿದೆ, ಯಾವಾಗ ಸಾಯುತ್ತಾನೆ ಎಂದು ಜನತೆ ಬೇಡುವಂತ ಪರಿಸ್ಥಿತಿ ಬರಬಾರದು. ನಮ್ಮ ಬದುಕು ಬೇರೆಯವರಿಗೆ ಮಾದರಿಯಾಗಿರಬೇಕು. ಹೆಗಡೆ ದಂಪತಿಗಳು ಯಾವುದೇ ಜಾತಿ, ಮತ, ಸಮುದಾಯ, ಜನಾಂಗ ಎಂದು ನೋಡದೇ ತಮ್ಮ ಸಂಘದ ಮೂಲಕ ಎಲ್ಲರಿಗೂ ಸಹಾ ಸಹಾಯವನ್ನು ಮಾಡುತ್ತಿದ್ದಾರೆ. 12ನೇ ಶತಮಾನದ ಬಸವಣ್ಣರವರ ರೀತಿಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಜೀವನದಲ್ಲಿ ಪ್ರಮಾಣಿಕತೆಯನ್ನು ರೂಢಿಸಿಕೊಂಡು ಬದುಕನ್ನು ನಡೆಸುವಂತಾ ದಾಗ ಮಾತ್ರ ನಿಜವಾದ ಅರ್ಥದಲ್ಲಿ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

 

ಗೊತ್ತಿಲ್ಲದೆ ಮಾಡಿದ ತಪ್ಪುಗಳಿಗೆ  ಪರಿಹಾರವಾಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವುದರ ಮೂಲಕ ಕಳೆದು ಕೊಳ್ಳಬಹುದಾಗಿದೆ ಆದರೆ ಪುಣ್ಯ ಕ್ಷೇತ್ರಗಳಲ್ಲಿಯೇ ತಪ್ಪು ಮಾಡಿದಾಗ ಅದಕ್ಕೆ ಪರಿಹಾರ ಸಿಗುವುದಿಲ್ಲ ಇಂದಿನ ದಿನದಲ್ಲಿ ಮನೆಗಳು ದೊಡ್ಡದಾಗುತ್ತಿವೆ ಆದರೆ ಮನಸ್ಸುಗಳು ಚಿಕ್ಕದಾಗುತ್ತಿವೆ, ಎಲ್ಲರಿ ಶಿಕ್ಷಣವನ್ನು ಪಡೆಯು ತ್ತಿದ್ದಾರೆ ಆದರೆ ಸಂಸ್ಕಾರ, ಸಂಸ್ಕøತಿ ವಿನಯ ಮರೆಯಾಗುತ್ತಿದೆ, ಹಣ ಬರುತ್ತದೆ ಗುಣ ಮಾಯವಾಗುತ್ತಿದೆ, ಮನೆಯಲ್ಲಿ ಮಹಿಳೆಯರು ಇದನ್ನು ತಮ್ಮ ಮಕ್ಕಳಿಗೆ ಕಲಿಸಿಕೊಡಬೇಕಿದೆ. ಹಿಂದಿನ ದಿನದಲ್ಲಿ ಪರಧನವನ್ನು ಬಯಸುತ್ತಿರಲಿಲ್ಲ ಆದರೆ ಈಗ ಪರಧನ ತರಲಿಲ್ಲ ಎಂದು ಮನೆಯಲ್ಲಿ ಕಲಹ ಉಂಟಾಗುತ್ತದೆ, ಕುಟುಂಬದಲ್ಲಿ ಒಟ್ಟಾಗಿ ದೇವಾಲಯಕ್ಕೆ ಹೋಗಿ ಮನೆಯಲ್ಲಿ ಒಟ್ಟಾಗಿ ಕುಳಿತು ಊಟ ಮಾಡಿ ಇದರಿಂದ ಮಕ್ಕಳಲ್ಲಿ ಸಂಸ್ಕಾರ ಬರುತ್ತದೆ ಎಂದು ಮನೋಹರ ಮಠದ್ ತಿಳಿಸಿದರು.

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್,ನ ಯೋಜನಾಧಿಕಾರಿಗಳಾದ ಬಿ.ಚಂದ್ರಹಾಸ್ ಮಾತನಾಡಿ, ನಮ್ಮ ಸಂಘ ಬರೀ ಸಾಲವನ್ನು ನೀಡುವುದು ಉಳಿತಾಯವನ್ನು ಮಾಡುವುದು ಅಷ್ಟೇ ಅಲ್ಲದೆ ಸಮಾಜ ಮುಖಿಯಾಗ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾ ಬಂದಿದೆ, ಜನರ ಆರ್ಥಿಕ ಸ್ಥಿತಿಯನ್ನು ಬದಲಾಯಿಸುವದರೊಂದಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವನ್ನು ಮಾಡಲಾಗುತ್ತಿದೆ, ಬಡವರಿಗೆ ಮಾಸಾಶನವನ್ನು ನೀಡಲಾಗುತ್ತಿದೆ, ಇದ್ದಲ್ಲದೆ ಶಾಲೆ, ಸಮುದಾಯ ಭವನ, ದೇವಾಲಯಗಳನ್ನು ಜೀಣೋದ್ದಾರ ಮಾಡಲಾಗುತ್ತಿದೆ ಕೆರೆಗಳನ್ನು ಪುನರೂಜ್ಜೀವನ ಮಾಡಲಾಗುತ್ತಿದೆ, ಮಹಿಳೆಯರಿಗೆ ಕಾನೂನಿನ ಅರಿವು ಆರೋಗ್ಯ ಶಿಬಿರಗಳನ್ನು ಎರ್ಪಡಿಸುವುದರ ಮೂಲಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜನತೆಯಲ್ಲಿ ಧಾರ್ಮಿಕ ಭಾವನೆಯನ್ನು ಮೂಡಿಸಲಾಗುತ್ತಿದೆ ಎಂದರು.

 

ಸಮಾರಂಭವನ್ನು ಬಡಾವಣೆ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ರೇಣುಕಾ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಕೆ.ಆರ್.ಮಂಜುನಾಥ್, ಭಾಗವಹಿಸಿದ್ದರು. , ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಕೆ.ಜಯಲಕ್ಷ್ಮೀ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮವನ್ನು ಸಂಘದ ಸದಸ್ಯರು ಪ್ರಾರ್ಥಿಸಿದರು, ಸಂಯೋಜನಾಧಿಕಾರಿ ಚಂದ್ರಮ್ಮ ಸ್ವಾಗತಿಸಿ, ವಂದಿಸಿ ದರು. ಕಾರ್ತಿಕ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂಘದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...