Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಂಗ್ರೆಸ್ ನಲ್ಲಿಯೇ ನಡೆಯುತ್ತಿದೆ ಕುದುರೆ ವ್ಯಾಪಾರ : ಬಿಜೆಪಿ ನಾಯಕರ ಆರೋಪಕ್ಕೆ ಲಕ್ಷ್ಮಣ ಸವದಿ ಹೇಳಿದ್ದೇನು..?

---Advertisement---

ದೇವನಹಳ್ಳಿ: ಸಿಎಂ ಖುರ್ಚಿ ಕದನದ ನಡುವೆ ಕುದುರೆ ವ್ಯಾಪಾರದ ವಿಚಾರದ ಆರೋಪವು ಜೋರಾಗಿದೆ. ಈ ಹಿಂದೆಲ್ಲ ಬೇರೆ ಪಕ್ಷದವರ ನಡುವೆ ವ್ಯಾಪಾರ ನಡೆಯುತ್ತಾ ಇತ್ತು. ಆದರೆ ಈಗ ಅವರವರ ಪಕ್ಷದಲ್ಲಿಯೇ ಕುದುರೆ ವ್ಯಾಪಾರ ನಡೆಯುತ್ತಾ ಇದೆ. ಅದರಲ್ಲೂ 50, 75, 100 ಕೋಟಿ ಡೀಲ್ ಆಗ್ತಾ ಇದೆ ಎಂಬ ಮಾಹಿತಿ ಇದೆ ಎಂದು ಬಿಜೆಪಿ ನಾಯಕರು ಆರೋಪ ಮಾಡ್ತಾ ಇದ್ದಾರೆ. ಈ ಆರೋಪಕ್ಕೆ ಶಾಸಕ ಲಕ್ಷ್ಮಣ ಸವದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯವರು ತಮ್ಮ ಹಳೆಯ ದಿನಗಳನ್ನು, ಅಂದ್ರೆ 2019ರ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಸವದಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಪಕ್ಷದಲ್ಲಿ ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆಗಳನ್ನು ರಾಷ್ಟ್ರೀಯ ನಾಯಕರು ಶೀಘ್ರ ಇತ್ಯರ್ಥಪಡಿಸಬೇಕು. ಇಲ್ಲವಾದರೆ ಇದು ಪಕ್ಷಕ್ಕೆ ಮುಜುಗರ ಮತ್ತು ಹಾನಿ ಉಂಟುಮಾಡುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಖುರ್ಚಿ ಕದನಕ್ಕೆ ವಿರಾಮ ಘೋಷಣೆ ಯಾವಾಗ ಅನ್ನೋದು ಮಾತ್ರ ಗೊತ್ತಿಲ್ಲ. ಜೊತೆಗೆ ಡಿಕೆ ಶಿವಕುಮಾರ್ ಹಠ ಮಾಡಿದಂತೆ ಸಿಎಂ ಆಗ್ತಾರಾ ಎಂಬುದನ್ನು ನೋಡುವುದಕ್ಕೆ ಎಲ್ಲರು ಕಾಯ್ತಾ ಇದ್ದಾರೆ. ಈಗಾಗಲೇ ಈ ಖುರ್ಚಿ ಕದನ ದೆಹಲಿವರೆಗೂ ತಲುಪಿದೆ. ಹೈಕಮಾಂಡ್ ನಾಯಕರು ಯಾವ ತೀರ್ಮಾನಕ್ಕೆ ಬರ್ತಾರೆ ಅನ್ನೋದರ ಕುತೂಹಲ ರಾಜ್ಯದ ಜನತೆಗೆ ಇದೆ. ಹೀಗಾಗಿಯೇ ಎಲ್ಲರ ಚಿತ್ತ ಕಾಂಗ್ರೆಸ್ ನತ್ತ ಇದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ ಎಂದಿದ್ದಾರೆ. ಅದಕ್ಕೆ ಹೈಕಮಾಂಡ್ ಸಾಥ್ ನೀಡುತ್ತಾ ಎಂಬುದನ್ನು ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now