Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಹೆಚ್. ಲಕ್ಷಣ್ ಅವರಿಗೆ ಸನ್ಮಾನ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ನವಂಬರ್, 03 : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಹೆಚ್. ಲಕ್ಷಣ್ ಅವರನ್ನು ಶುಕ್ರವಾರ ಸನ್ಮಾನಿಸಲಾಯಿತು.

ಹೆಚ್. ಲಕ್ಷಣ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದ ಖುಷಿಯನ್ನು ಹಂಚಿಕೊಳ್ಳಲು ನಗರದ ಗಾಂಧಿ ವೃತ್ತದಲ್ಲಿ ಬಾಲಾಜಿ ಬೇಕರಿಯ ಫಣಿರಾಜ್ ಅವರ ನೇತೃತ್ವದಲ್ಲಿ ಕೆಲವು ಪತ್ರಿಕಾ ವಿತರಕರು ಹಾಗೂ ಸ್ನೇಹಿತರ ಬಳಗದಿಂದ ಹೆಚ್. ಲಕ್ಷ್ಮಣ್ ಅವರನ್ನು ಶುಕ್ರವಾರ ಬೆಳಿಗ್ಗೆ ಗೌರವಿಸಿದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಪತ್ರಿಕೋದ್ಯಮ ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹೆಚ್. ಲಕ್ಷಣ ಅವರನ್ನು ನವೆಂಬರ್ 01 ರಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಅವರಿಂದ ಸನ್ಮಾನಿಸಲಾಗಿತ್ತು.

ಈ ಸಂದರ್ಭದಲ್ಲಿ ಬಾಲಾಜಿ ಬೇಕರಿ ಮಾಲೀಕರಾದ ಫಣಿರಾಜ್, ಕಿಶೋರ್, ಪತ್ರಿಕಾ ವಿತರಕರಾದ ಕುಬೇರಪ್ಪ, ರಾಜಪ್ಪ, ಪಿ. ನಾಗರಾಜ ಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.

ಲಕ್ಷ್ಮಣ ಹೆಚ್. ಅವರ ಹಿನ್ನೆಲೆ :

01-06-1965 ರಂದು ಜನಿಸಿದರು.
ವಿದ್ಯಾಭ್ಯಾಸ : ಪ್ರಾಥಮಿಕ ಶಿಕ್ಷಣ, ಹುಟ್ಟೂರಾದ ಬಂಡ್ಲಾರಹಟ್ಟಿ. ಪ್ರೌಢಶಾಲೆ, ಮರಡಿಹಳ್ಳಿ.
ಪದವಿಪೂರ್ವ ಶಿಕ್ಷಣ, ಎಸ್.ಜೆ.ಎಂ. ಸಂಜೆ ಕಾಲೇಜು.

ದೈಹಿಕ ಶಿಕ್ಷಣ, ಶ್ರೀ ಕಬೀರಾನಂದಸ್ವಾಮಿ ದೈಹಿಕ ಶಿಕ್ಷಣ ಕಾಲೇಜು, ಚಿತ್ರದುರ್ಗ. ಪದವಿ, ಎಸ್.ಜೆ.ಎಂ. ಕಾಲೇಜು, ಚಿತ್ರದುರ್ಗ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಹತ್ತು ಹಲವು ಕಾರ್ಯಗಳಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಪತ್ರಕರ್ತರ ಶಿಬಿರಗಳಲ್ಲಿ ಸಂಘಟಿಸಿ, ನೂರಾರು ಪತ್ರಕರ್ತರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ.

ಅನುಭವ : 1983 ರಿಂದ ಪ್ರಜಾವಾಣಿ ಪತ್ರಿಕೆಯ ಮೂಲಕ ವಿತರಕರಾಗಿ ವಿದ್ಯಾಭ್ಯಾಸ ಮುಂದುವರಿಕೆ. ಸ್ಥಳೀಯ ಪತ್ರಿಕೆಗಳಲ್ಲಿ ಸುದ್ಧಿ ಬರೆಯುವ ಮೂಲಕ ಪ್ರಾರಂಭವಾದ ಅವರ ವೃತ್ತಿ ಜೀವನ ಪತ್ರಿಕೆ ವಿತರಕರಾಗಿ, ಏಜೆಂಟರಾಗಿ, ವರದಿಗಾರರಾಗಿ, ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳ ಸುದ್ಧಿ ಬರೆಯುವ ಮೂಲಕ ಅನುಭವ ಹೊಂದಿದ್ದಾರೆ.

ಪ್ರಜಾವಾಣಿ, ಕೊಡಗಿನನಾರಾಯಣರಾವ್ ರವರ ಆಪ್ತ ಸಹಾಯಕನಾಗಿ 1986 ರಿಂದ 1990ರವರೆಗೆ ಸೇವೆ ಸಲ್ಲಿಸಿದ್ದರು. ಸಂಯುಕ್ತ ಕರ್ನಾಟಕ ವರದಿಗಾರರಾದ ಟಿ.ಕೆ.ಬಸವರಾಜ್‍ರವರ ಅನುಯಾಯಿಯಾಗಿ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ಚಿತ್ರದುರ್ಗ ಪ್ರತಿನಿಧಿಯಾಗಿ ಸೇವೆ. ಕನ್ನಡ ಪ್ರಭಾ ಏಜೆಂಟರು, ಸುದ್ಧಿ ಸಂಗ್ರಹಣಗಾರರು, ಸೇವೆಮಾಡಿದ ಅನುಭವ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಹೊಂದಿದ್ದಾರೆ.

ಲಕ್ಷ್ಮಣ್‍ವಾಯ್ಸ್ ಪತ್ರಿಕೆಯ ಸಂಪಾದಕರಾಗಿ 20 ವರ್ಷಗಳ ಅನುಭವ. ಹೊಯ್ಸಳ ಕನ್ನಡ ದಿನಪತ್ರಿಕೆಯಲ್ಲಿ 5 ವರ್ಷಗಳ ಅನುಭವ. ಜನಮಿಡಿತ ಸುದ್ಧಿ ಸಂಪಾದಕರಾಗಿ 4 ವರ್ಷಗಳ ಅನುಭವ. ಬಳ್ಳಾರಿ ಬೆಳಗಾಯಿತು ವರದಿಗಾರರಾಗಿ ಕರ್ತವ್ಯ ನಿರ್ವಹಣೆ. ಕ್ರಾಂತಿ ದೀಪ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಣೆ. (ಕರ್ನಾಟಕ ಸರ್ಕಾರದ ಮಾನ್ಯತಾ ಕಾರ್ಡ್ ಪಡೆದ ವರದಿಗಾರರು).

ಸಂಘ ಸಂಸ್ಥೆಗಳಲ್ಲಿ ಅನುಭವ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ

1) ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಮತ್ತು ಪ್ರಧಾನಕಾರ್ಯದರ್ಶಿಯಾಗಿ 20 ವರ್ಷಗಳ ಸೇವೆ.
2) ಅಧಿಕಾರ ಅವಧಿಯಲ್ಲಿ ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣ.
3) ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಿ ನೆರವೇರಿಸಿದ್ದು,
4) ಮಧ್ಯಕರ್ನಾಟಕ ಪತ್ರಕರ್ತರ ಕಾರ್ಯಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು.
5) ಚಿತ್ರದುರ್ಗ ಜಿಲ್ಲಾಮಟ್ಟದ ಸಮ್ಮೇಳನಗಳು, ಸಮಾವೇಶಗಳನ್ನು 20 ವರ್ಷಗಳ ಅವಧಿಯಲ್ಲಿ ಹಲವು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ ಅನುಭವ.
6) ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪತ್ರಕರ್ತರ ಸಮ್ಮೇಳನಗಳಲ್ಲಿ ಭಾಗವಹಿಸಿ, ವಿಚಾರ ವಿನಿಮಯ ಮಾಡುವುದರೊಂದಿಗೆ ಪತ್ರಕರ್ತರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ.
7) ಪತ್ರಕರ್ತರ ರಾಜ್ಯ ಮತ್ತು ಜಿಲ್ಲಾ ಸಂಘಟನೆಗಳ ಜೊತೆಗೆ ಸಮನ್ವಯತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ ರಾಜ್ಯಮಟ್ಟದ ಪದಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ.
8) ಚಿತ್ರದುರ್ಗ ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರ ಸಂಘದ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಯಶಸ್ಸು ಕಂಡಿದ್ದು, ನೀರಾವರಿ, ರೈಲ್ವೇ, ಸಾಮಾಜಿಕ ಹೋರಾಟಗಳ ಜೊತೆಗೆ ಗುರುತಿಸಿಕೊಂಡು ಪತ್ರಿಕೋದ್ಯಮದ ಮಹತ್ವವನ್ನು ಹೆಚ್ಚಿಸಲಾಗಿದೆ.
9) ಪತ್ರಕರ್ತರಿಗೆ ಕಾರ್ಯಗಾರಗಳು ತಿಳುವಳಿಕೆ ಶಿಬಿರಗಳು, ಕಾನೂನು ಶಿಬಿರಗಳು, ಸಾಮಾಜಿಕ ನಾಯಕತ್ವದ ಶಿಬಿರಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

1) ಪತ್ರಿಕೋದ್ಯಮ, ಸಾಹಿತ್ಯ, ಸಾಂಸ್ಕøತಿಕ, ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ.
2) ಕನ್ನಡ ಭಾಷೆ, ನೆಲ, ಜಲ, ಸಂಸ್ಕøತಿಯ ಉಳುವಿಗಾಗಿ ಮಾಧ್ಯಮಗಳ ಮೂಲಕ ಲೇಖನಗಳು, ಬರಹಗಳು ಮತ್ತು ಸಾಹಿತ್ಯ ರೂಪದಲ್ಲಿ ಜನರಲ್ಲಿ ಜಾಗೃತಿಮೂಡಿಸುವ ಕಾರ್ಯ.
3) ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಭಾಷೆ ಮತ್ತು ಭಾವನೆಗಳಿಗೆ ಅರ್ಥ ಬರುವ ಹಾಗೆ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಾಧ್ಯಮಗಳ ಮೂಲಕ ಸಮಾಜದ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಪುರಸ್ಕಾರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕೋದ್ಯಮದ ಸೇವೆಗಾಗಿ 2013 ರಲ್ಲಿ ಹೊಂಬಾಳೆ ಪ್ರಶಸ್ತಿ ಭಾಜನರಾಗಿದ್ದಾರೆ.

2020 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಅಭಿನಂದನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದ ಗೌರವಾಧ್ಯಕ್ಷರಾಗಿ ಚಿತ್ರದುರ್ಗದಲ್ಲಿ ಪ್ರಥಮ ಸಂಘಟನೆ ಮಾಡಿದ್ದಾರೆ.

ಸಂಪರ್ಕ : ಕನ್ನಡ ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಜೊತೆಗೆ ಅತ್ಯಂತ ಸಂಪರ್ಕಹೊಂದಿ ಸಾರ್ವಜನಿಕರಿಗೆ ನೇರವಾಗಿ ಮತ್ತು ಮಾಧ್ಯಮಗಳ ಮೂಲಕ ನೆರವು ಕೊಡಿಸುವಂತಹ ಕಾರ್ಯವನ್ನು ಕಳೆದ 40 ವರ್ಷಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

ಪಾಕ್ ಜಿಂದಾಬಾದ್ ಎಂದವನಿಗೆ ನಾವೇ ಗುಂಡಿಟ್ಟು ಸಾಯಿಸುತ್ತೇವೆ : ಸಚಿವ ಜಮೀರ್

ರಾಯಚೂರು: ಪಾಕಿಸ್ತಾನ ಘೋಷಣೆ ಕೂಗುವವರನ್ನು ಗುಂಡಿಟ್ಟು ಕೊಲ್ಲಬೇಕು. ಟಿಶ್ಕ್ಯಾಂ ಟಿಶ್ಕ್ಯಾಂ ಟಿಶ್ಕ್ಯಾಂ ಅಂತ ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ಭರ್ಜರಿ ಪ್ರಚಾರ

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

error: Content is protected !!