Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊನ್ನಾಳಿ ಪಟ್ಟಣದ ರಸ್ತೆ ವಿಚಾರ : ಸರ್ಕಾರದ ವಿರುದ್ಧ ರೇಣುಕಾಚಾರ್ಯ ಆಕ್ರೋಶ

---Advertisement---

ದಾವಣಗೆರೆ: ಹೊನ್ನಾಳಿ ಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಪರ – ವಿರೋಧ ಚರ್ಚೆ ಶುರುವಾಗಿದ್ದು, ಕಾಮಗಾರಿಗಾಗಿ ಬಡವರ ಮನೆಯ ಮನೆಗಳನ್ನ ಒಡೆದು ಶ್ರೀಮಂತರ ಮನೆಗಳನ್ನ ಹಾಗೆ ಬಿಡಲಾಗಿದೆ ಎಂದು ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ. ರಾಜಕೀಯ ಪ್ರಭಾವ ಇರುವವರ ಕೆಲವು ಅಂಗಡಿಗಳನ್ನು, ಮನೆಗಳನ್ನು ಹಾಗೆ ಬಿಡಲಾಗಿದೆ. ಬಡವರ ಅಂಗಡಿ ಮುಂಗಟ್ಟು, ಮನೆ ಒಡೆಯಲಾಗಿದೆ.

ಸರಿಯಾದ ಯೋಜನೆ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ. ಹೊನ್ನಾಳಿ ಅಮನದ ಹೆಚ್ಚಿಸಲು ರಸ್ತೆ ಅಗಲೀಕರಣಕ್ಕೆ ಕೆಶಿಪ್ ಕಾಮಗಾರಿ ಮಹತ್ವದ್ದಾಗಿದೆ. ಸರಿಯಾಗಿ ರಸ್ತೆ ಅಗಲೀಕರಣ ಮಾಡದೇ ಹಾಗೇ ಬಿಡಲಾಗುತ್ತಿದೆ. ಕೆಶಿಪ್‌ನಿಂದ (KSHIP) 902 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಗದಗನಿಂದ ಹೊನ್ನಾಳಿವರೆಗೆ ಈ ರಸ್ತೆ ಕಾಮಗಾರಿಗೆ ಯೋಜನೆ ರೂಪುಗೊಂಡಿದೆ. ರಸ್ತೆಗೆ ಗುರುತಿಸಿದ ಎಲ್ಲಾ ಕಟ್ಟಡ ಒಡೆದು ಕಾಮಗಾರಿ ಮಾಡಬೇಕು. ಬಡವರಿಗೆ ಒಂದು ರೀತಿ, ಪ್ರಭಾವಿಗಳಿಗೆ ಒಂದು ರೀತಿ ಮಾಡಬಾರದು ಎಂದು ಸ್ಥಳೀಯರು ಸೇರಿದಂತೆ ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now