ಹಲಾಲ್ ಆಯ್ತು ಈಗ ಆಜಾನ್ ಏನಿದು ಅಂದ್ರೆ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಅಂದ್ರು ಗೃಹ ಸಚಿವರು..!

1 Min Read

ಬೆಂಗಳೂರು: ಮಸೀದಿಗಳಲ್ಲಿನ ಮೈಕ್ ಗಳನ್ನು ನಿಷೇಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಡ ಹಾಕುತ್ತಿವೆ. ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಆಜಾನ್ ಮಾತ್ರ ಅಲ್ಲ ಬಸ್ ಓಡಿಸುವುದಕ್ಕೂ ಎಷ್ಟು ಡೆಸಿಬಲ್ ಸೌಂಡ್ ಇರಬೇಕು ಅನ್ನೋದು ಗೊತ್ತಿರಬೇಕು. ಶಬ್ಧ ಮಾಲಿನ್ಯದ ಬಗ್ಗೆ ಕೋರ್ಟ್ ಆದೇಶವಿದೆ. ಅದನ್ನು ಎಲ್ಲರೂ ಫಾಲೋ ಮಾಡಬೇಕು. ಪೊಲೀಸರಿಗೆ ನಾವೂ ಹೇಳಿದ್ದೀವಿ. ಎಲ್ಲೆಲ್ಲಿ ಎಷ್ಟೆಷ್ಟು ಡೆಸಿಬಲ್ ಇದೆ ಅನ್ನೋದನ್ನ ತಿಳಿದುಕೊಂಡು ವಿಶ್ವಾಸದಲ್ಲಿಯೇ ಅದನ್ನ ಸರಿ ಮಾಡಬೇಕು, ಯಾವುದೇ ಘರ್ಷಣೆಗೆ ಲಾ ಅಂಡ್ ಆರ್ಡರ್ ಗೂ ಆದೇಶವಿಲ್ಲ.

ಮಸೀದಿ ಅಥವಾ ದೇವಸ್ಥಾನ ಎಲ್ಲಿಯೇ ಮೈಕ್ ಹಾಕುದ್ರು ಎಲ್ಲರಿಗೂ ಹೇಳಬೇಕು. ಮೈಕ್ ಅನ್ನು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಉಪಯೋಗಿಸಬೇಕೆಂಬುದು ಇದೆ. ಹೈಕೋರ್ಟ್ ಆದೇಶವನ್ನ ಎಲ್ಲರೂ ಫಾಲೋ ಮಾಡಿದ್ರೆ ಶಾಂತಿ ಸೌಹಾರ್ದತೆ ಲಭಿಸುತ್ತೆ. ಯಾರು ಅದಕ್ಕೆ ಚ್ಯುತಿ ತರಬಾರದು.

ಸಿದ್ದರಾಮಯ್ಯ ಅವರು ಮತ್ತು ಅವರ ಪಕ್ಷದ ವೋಟ್ ಬ್ಯಾಂಕ್ ಇದಕ್ಕೆ ನೇರ ಕಾರಣ. ಈ ದೇಶದಲ್ಲಿ ಒಂದೊಂದು ಕೋಮು ಎತ್ತಿಕಟ್ಟಿನೇ ಇವ್ರು ಸ್ವತಂತ್ರ ಬಂದಾಗ ಸಿಂಹಾಸನದ ಮೇಲೆ ಕೂತಿದ್ದಾರೆ. ಅದು ಬ್ರೇಕ್ ಆದರೆ ಇವರು ಕೆಳಗೆ ಬಿದ್ದು ಹೋಗ್ತಾರೆ. ಭಯದಿಂದಲೇ ಇದ್ದಾರೆ. ಯಾವುದೇ ಸಂದರ್ಭದಲ್ಲೂ ಗಟ್ಟಿಯಾಗಿ‌ ಮಾತಾಡಲಿಲ್ಲ. ಹಿಜಾಬ್ ಇರಬಹುದು, ಹಲಾಲ್ ಇರಬಹುದು ಬಾಯಿಬಿಡಲ್ಲ. ಡಿಕೆ ಶಿವಕುಮಾರ್ ಅವರು ಹೇಳಿದ್ರು ಹಿಜಾಬ್ ಬಗ್ಗೆ ಯಾರು ಬಾಯಿ ಬಿಡಬೇಡಿ ಅಂತ. ಸತ್ಯ ಹೇಳಲಿಕ್ಕೆ ಆಗಲ್ಲ ಅನ್ನೋದು ಇವರಿಗೆ ಆಗಲಿಲ್ಲ ಅಂದ್ರೆ ಹೇಗೆ ಅದು. ಇವರದ್ದೇ ಕುಮ್ಮಕ್ಕು ಇದು ಎಂದು ಆರೋಪ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *