Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಳಲ್ಕೆರೆ : ಕೊಳಾಳು ಗ್ರಾಮದ ಪುರಾತನ ಬಯಲು ಶಿವಲಿಂಗಕ್ಕೆ ಮಂಡಲ ಪೂಜೆ ಸಂಪನ್ನ: ಉತ್ತಮ ಮಳೆಗಾಗಿ ವಿಶೇಷ ಪ್ರಾರ್ಥನೆ

---Advertisement---

ಸುದ್ದಿಒನ್, ಹೊಳಲ್ಕೆರೆ, ಸೆಪ್ಟೆಂಬರ್. 29 : ತಾಲ್ಲೂಕಿನ ಗಡಿಕೊಳಾಳು ಗ್ರಾಮದ ಕೆರೆ ಹಿಂಭಾಗದಲ್ಲಿರುವ ಅತ್ಯಂತ ಪುರಾತನ ಬಯಲು ಶಿವಲಿಂಗಕ್ಕೆ ಉತ್ತಮ ಮಳೆ-ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ 48 ದಿನಗಳ ‘ಮಂಡಲ ಪೂಜೆ’ಯು ಮಂಗಳವಾರ ತೇಕಲವಟ್ಟಿ ಶ್ರೀ ಸಂಗಮೇಶ್ವರ ಸ್ವಾಮಿಗಳ ಅಮೃತ ಹಸ್ತದಿಂದ ಭಕ್ತಿಭಾವದೊಂದಿಗೆ ಸುಸಂಪನ್ನವಾಯಿತು.

ಕಳೆದ ಆಗಸ್ಟ್ 13ರಂದು ಗುರುವಾರ ಆರಂಭಗೊಂಡಿದ್ದ ಈ ಮಂಡಲ ಮಹೋತ್ಸವದಲ್ಲಿ ನಿತ್ಯವೂ ಮುಂಜಾನೆ 4:30ರಿಂದ 6:00 ಗಂಟೆಯ ಅವಧಿಯಲ್ಲಿ ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಬಿಲ್ವಾರ್ಚನೆ, ನೈವೇದ್ಯ ಹಾಗೂ ಫಲಾಹಾರ ಮೊದಲಾದ ಧಾರ್ಮಿಕ ವಿಧಿವಿಧಾನಗಳನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ನೆರವೇರಿಸಿಕೊಂಡು ಬರಲಾಯಿತು. ಮಂಗಳವಾರ ಮುಕ್ತಾಯದ ಅಂಗವಾಗಿ ಮಹಾ ರುದ್ರಾಭಿಷೇಕ, ವಿಶೇಷ ಅಲಂಕಾರ, ಅಖಂಡ ಭಜನೆ ಹಾಗೂ ಅನ್ನದಾಸೋಹ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಈ ಸುದೀರ್ಘ ಮಂಡಲ ಕಾಲದ ಪೂಜಾ ಕೈಂಕರ್ಯಗಳನ್ನು ದೊಡ್ಡಮನೆ ಗದ್ದುಗೆಯ ಆರ್. ಸಿದ್ದಪ್ಪನವರು ನಿಷ್ಠೆಯಿಂದ ಮುನ್ನಡೆಸಿಕೊಟ್ಟರು. ಇವರಿಗೆ ಹೊಳೆಯಪ್ಪರ ಎಚ್. ಜಯಪ್ರಕಾಶ, ಆರ್. ಸಿದ್ಧಪ್ಪ, ಕೆ.ಎಸ್. ನಾಗರಾಜು, ಮಧುರೆ ಕೆ. ಕೆಂಚಪ್ಪ, ಗ್ರಾಮದ ಯಜಮಾನರಾದ ಮುತ್ತಜ್ಜರ ನಾಗಪ್ಪ, ಬಡಪ್ಪರ ಕೃಷ್ಣಮೂರ್ತಿ, ಜನಾರ್ದನಪ್ಪ, ಅಂಗಡಿ ಲೋಕೇಶ್, ತೇಕಲವಟ್ಟಿ ಶಿವಣ್ಣ, ಯಾದವರಹಟ್ಟಿ ನಿಂಗಪ್ಪ, ಮುಂದಲ ಮನೆ ರಾಮಣ್ಣ, ಗೋವಿಂದಪ್ಪ ಮೇಷ್ಟ್ರು, ಓಬಳೇಶಪ್ಪ ಮೇಷ್ಟ್ರು, ಪೂಜಾರಿ ಉಗ್ರಪ್ಪ, ಮಡಿವಾಳಿ ಶಿವಣ್ಣ, ಪೋಸ್ಟ್ ಕೆಂಚಪ್ಪ, ಗದ್ದಿಗೆ ಬಸವರಾಜ್ ಹಾಗೂ ಮ್ಯಾನೇಜರ್ ದಯಾನಂದ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದ ಯಶಸ್ಸಿಗೆ ಹೆಗಲುಕೊಟ್ಟರು. ಈ ಸಂದರ್ಭದಲ್ಲಿ 48 ದಿನಗಳ ಕಾಲ ಶ್ರಮಿಸಿದ ಎಲ್ಲ ಭಕ್ತರ ಹಾಗೂ ಸೇವಾಕರ್ತರ ಸೇವೆಯನ್ನು ಗೌರವಪೂರ್ವಕವಾಗಿ ಸ್ಮರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ರಾತ್ರಿ ನಡೆದ ಅಹೋರಾತ್ರಿ ಭಜನಾ ಕಾರ್ಯಕ್ರಮದಲ್ಲಿ ಕೆನ್ನೆಡಲು ಪರಶುರಾಮಣ್ಣ, ಮಲ್ಲರಸನಹಟ್ಟಿ ಮಲ್ಲಣ್ಣ, ಕೆ.ಸಿ. ರೊಪ್ಪದ ರಂಗಸ್ವಾಮಿ, ಕೊಳಾಳು ಭಜನೆ ನಿಂಗಪ್ಪ ಮುಂತಾದ ಖ್ಯಾತ ಭಜನಾ ಕಲಾವಿದರು ಶಿವನಾಮ ಸ್ಮರಣೆ ಗೀತೆಗಳನ್ನು ಪ್ರಸ್ತುತಪಡಿಸಿ ನೆರೆದಿದ್ದ ಭಕ್ತರನ್ನು ಭಕ್ತಿ ಸಾಗರದಲ್ಲಿ ತೇಲಿಸಿದರು. ಇಂದು ಮುಂಜಾನೆ ಮಹಾಮಂಗಳಾರತಿ ಹಾಗೂ ಭವ್ಯ ಅನ್ನದಾಸೋಹದೊಂದಿಗೆ ಪೂಜಾ ಮಹೋತ್ಸವಕ್ಕೆ ತೆರೆಬಿದ್ದಿತು. ಈ ಧಾರ್ಮಿಕ ಸಂಭ್ರಮದಲ್ಲಿ ಕೊಳಾಳು ಗ್ರಾಮಸ್ಥರು, ಮಹಿಳೆಯರು, ಮಕ್ಕಳು, ಎರಡೂ ಗೊಲ್ಲರಹಟ್ಟಿಯ ನಿವಾಸಿಗಳು ಹಾಗೂ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಪಿಯುಸಿ, ಡಿಗ್ರಿ ಪಾಸಾದವರಿಗೆ ಶುಭಸುದ್ದಿ : ಐಸಿಐಸಿಐ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ

6 ತಿಂಗಳು ರೇಷನ್ ಪಡೆಯದಿದ್ದರೆ  ಪಡಿತರ ಚೀಟಿ ತಾತ್ಕಾಲಿಕ ಸ್ಥಗಿತ : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಸೈಬರ್ ಕಳ್ಳರ ಕನ್ನ: ಅಮೆರಿಕ ರಕ್ಷಣಾ ಇಲಾಖೆಯ 30 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯ ಮಾಹಿತಿ ಸೋರಿಕೆ; 9 ತಿಂಗಳ ಬಳಿಕ ಬೆಳಕಿಗೆ

ವಿಶ್ವ ಹೃದಯ ದಿನದ ವಿಶೇಷ : ತಡರಾತ್ರಿ ಕೆಲಸ, ನಿದ್ರಾಹೀನತೆ : ಹೃದಯದ ಆರೋಗ್ಯಕ್ಕೆ ತಜ್ಞರ ಸಲಹೆ

ನನಗೂ ಜಮೀನಿಲ್ಲ, ಶಫೀಗೂ ಜಮೀನಿಲ್ಲ; ಆದ್ರೂ ರೈತರಿಗಾಗಿ ಹೋರಾಡಿದ್ವಿ: ಚಿತ್ರದುರ್ಗ ಭದ್ರಾ ಹೋರಾಟದ ದಿನಗಳನ್ನು ಮೆಲುಕು ಹಾಕಿದ ಟಿ.ಶಫಿವುಲ್ಲಾ