Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಐತಿಹಾಸಿಕ ಚಿತ್ರದುರ್ಗದ ಕೋಟೆ ವಿಶ್ವಭೂಪಟದಲ್ಲಿ ಸೇರಬೇಕು : ಸಾಹಿತಿ ಮೃತ್ಯುಂಜಯಪ್ಪ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.15 : ಚಿತ್ರದುರ್ಗದ ಕೋಟೆಯನ್ನು 211 ವರ್ಷಗಳ ಕಾಲ ಆಳ್ವಿಕೆ ನಡೆಸಿದ 11 ಪಾಳೆಯಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕರು ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆಂದು ಸಾಹಿತಿ ಮೃತ್ಯುಂಜಯಪ್ಪ ಹೇಳಿದರು.

ಬಿಚ್ಚುಗತ್ತಿ ಭರಮಣ್ಣನಾಯಕರ 333 ನೇ ಪಟ್ಟಾಭಿಷೇಕ ಮಹೋತ್ಸವ ಪ್ರಯುಕ್ತ ಉಚ್ಚೆಂಗೆಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಬಿಚ್ಚುಗತ್ತಿ ಭರಮಣ್ಣನಾಯಕರು ಕೆರೆ, ಕಟ್ಟೆ, ಗುಡಿ, ಗೋಪುರ, ಮಠಗಳನ್ನು ಕಟ್ಟಿಸಿದ್ದಾರೆ.

ಐತಿಹಾಸಿಕ ಚಿತ್ರದುರ್ಗದ ಕೋಟೆ ವಿಶ್ವಭೂಪಟದಲ್ಲಿ ಸೇರಬೇಕು. ಬಾದಾಮಿ, ವಿಜಯನಗರ ಇವುಗಳೆಲ್ಲಾ ಸೇರಿರುವುದರಿಂದ ಉತ್ಖನನ ಆಗಬೇಕು. ಇದರಿಂದ ಮುಂದಿನ ಪೀಳಿಗೆಗೆ ಪಾಳೆಯಗಾರರ ಇತಿಹಾಸವನ್ನು ತಿಳಿಸಿದಂತಾಗುತ್ತದೆ. ತ.ರಾ.ಸು. ತಮ್ಮ ಕಾದಂಬರಿಗಳಲ್ಲಿ ಚಿತ್ರದುರ್ಗದ ಕೋಟೆಯ ಮೇಲೆ ಅಪಾರವಾದ ಬೆಳಕು ಚೆಲ್ಲಿದ್ದಾರೆಂದರು.

ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಬಿಚ್ಚುಗತ್ತಿ ಭರಮಣ್ಣನಾಯಕರು ಯದ್ದದಲ್ಲಿ ತೆಗೆದ ಕತ್ತಿಯನ್ನು ಮತ್ತೆ ಒಳಗೆ ಇರಿಸದೆ ಶತ್ರುಗಳ ವಿರುದ್ದ ಹೋರಾಡಿದರು. ಅಣಜಿ ಕೋಟೆ, ನೆಲ್ಲಿಕಾಯಿ ಸಿದ್ದಪ್ಪನಬೆಟ್ಟ, ಆಲೂರು ಕೋಟೆ, ಆನೆಬಾಗಿಲು, ಸಂತೆಹೊಂಡ, ಹಿಡಂಬೇಶ್ವರಿ, ಹನುಮನ ಬಾಗಿಲು, ಮುರುಘಾಮಠ, ಒನಕೆ ಓಬವ್ವನ ಕಿಂಡಿ, ಅರಸನ ಕೆರೆ, ಭರಮಸಾಗರ ಕೆರೆ ಮುರುಘಾಮಠದ ಎದುರು ಹಾಗೂ ಹಿಂಭಾಗದಲ್ಲಿರುವ ಕೆರೆಗಳನ್ನು ಕಟ್ಟಿಸಿದರು. ಗುಡಿ ಗೋಪುರ, ಗತ ವೈಭವದ ದೇವಸ್ಥಾನಗಳನ್ನು ಕಟ್ಟಿಸಿ ಚಿತ್ರದುರ್ಗದ ಪಾಳೆಯಗಾರರಲ್ಲಿ ಯಾರೂ ಕೂಡ ಮಾಡದಂತೆ ಅಭಿವೃದ್ದಿ ಕೆಲಸಗಳನ್ನು ಮಾಡಿ ಅಜರಾಮರವಾಗಿ ಉಳಿದಿದ್ದಾರೆಂದು ಗುಣಗಾನ ಮಾಡಿದರು.

ರಾಜಾವೀರ ಮದಕರಿನಾಯಕ ಮಾತನಾಡುತ್ತ ಯುವರಾಜನಾಗಿದ್ದ ಬಿಚ್ಚುಗತ್ತಿ ಭರಮಣ್ಣನಾಯಕನನ್ನು ಕೆಲವರು ದನ ಕಾಯುವ ಹುಡುಗ ಎಂದು ಅಪ ಪ್ರಚಾರ ಮಾಡಿದ್ದುಂಟು. ಹಾಗಾಗಿ ದಳವಾಯು ಮುದ್ದಣ್ಣ ಭರಮಣ್ಣನಾಯಕನಿಗೆ ಪಟ್ಟ ಕಟ್ಟಲಿಲ್ಲ. ಚಿತ್ರನಾಯಕ ಕಾಮಗೇತಿ ವಂಶಸ್ಥರಾಗಿದ್ದರು. ಚಿತ್ರದುರ್ಗದ ಇತಿಹಾಸದಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕ ಮಾಡಿದಷ್ಟು ಜನೋಪಕಾರಿ ಕೆಲಸಗಳು ಬೇರೆ ಯಾರಿಂದಲು ಆಗಿಲ್ಲ. 1512 ರಲ್ಲಿ ಚಿತ್ರದುರ್ಗದಲ್ಲಿ ಆಳ್ವಿಕೆ ಆರಂಭಗೊಂಡಿತು. ಚಿತ್ರದುರ್ಗ ಎಂದರೆ ನಾಯಕರ ರಾಜಧಾನಿ ಎಂದು ನೆನಪಿಸಿಕೊಂಡರು.

ಕಿರಣ್‍ಕುಮಾರ್, ನಿವೃತ್ತ ರೈಲ್ವೆ ಅಧಿಕಾರಿ ರಾಜಶೇಖರಪ್ಪ ಸಿ.ಎಂ. ಕೃಷ್ಣಮೂರ್ತಿ, ಸುರೇಶ್, ರಘು ಬಿ. ಅಜಯ್‍ಮದಕರಿ, ಗಿರಿಸಾಗರ್ ಮದಕರಿ, ಟಿ.ರಾಜಣ್ಣ, ಕೃಷ್ಣಮೂರ್ತಿ, ಪವನ್, ನಾಗರಾಜ್, ಮಂಜುನಾಥ್ ಬಿ.ಎನ್, ಕೆ.ಟಿ.ನಾಗರಾಜ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.
ಬಿಚ್ಚುಗತ್ತಿ ಭರಮಣ್ಣನಾಯಕನ 333 ಪಟ್ಟಾಭಿಷೇಕ ಮಹೋತ್ಸವದ ನೆನಪಿಗಾಗಿ ಸಿಹಿ ಹಂಚಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...