Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಐತಿಹಾಸಿಕ ಚಿತ್ರದುರ್ಗದ ಕೋಟೆ ವಿಶ್ವಭೂಪಟದಲ್ಲಿ ಸೇರಬೇಕು : ಸಾಹಿತಿ ಮೃತ್ಯುಂಜಯಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.15 : ಚಿತ್ರದುರ್ಗದ ಕೋಟೆಯನ್ನು 211 ವರ್ಷಗಳ ಕಾಲ ಆಳ್ವಿಕೆ ನಡೆಸಿದ 11 ಪಾಳೆಯಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕರು ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆಂದು ಸಾಹಿತಿ ಮೃತ್ಯುಂಜಯಪ್ಪ ಹೇಳಿದರು.

ಬಿಚ್ಚುಗತ್ತಿ ಭರಮಣ್ಣನಾಯಕರ 333 ನೇ ಪಟ್ಟಾಭಿಷೇಕ ಮಹೋತ್ಸವ ಪ್ರಯುಕ್ತ ಉಚ್ಚೆಂಗೆಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಬಿಚ್ಚುಗತ್ತಿ ಭರಮಣ್ಣನಾಯಕರು ಕೆರೆ, ಕಟ್ಟೆ, ಗುಡಿ, ಗೋಪುರ, ಮಠಗಳನ್ನು ಕಟ್ಟಿಸಿದ್ದಾರೆ.

ಐತಿಹಾಸಿಕ ಚಿತ್ರದುರ್ಗದ ಕೋಟೆ ವಿಶ್ವಭೂಪಟದಲ್ಲಿ ಸೇರಬೇಕು. ಬಾದಾಮಿ, ವಿಜಯನಗರ ಇವುಗಳೆಲ್ಲಾ ಸೇರಿರುವುದರಿಂದ ಉತ್ಖನನ ಆಗಬೇಕು. ಇದರಿಂದ ಮುಂದಿನ ಪೀಳಿಗೆಗೆ ಪಾಳೆಯಗಾರರ ಇತಿಹಾಸವನ್ನು ತಿಳಿಸಿದಂತಾಗುತ್ತದೆ. ತ.ರಾ.ಸು. ತಮ್ಮ ಕಾದಂಬರಿಗಳಲ್ಲಿ ಚಿತ್ರದುರ್ಗದ ಕೋಟೆಯ ಮೇಲೆ ಅಪಾರವಾದ ಬೆಳಕು ಚೆಲ್ಲಿದ್ದಾರೆಂದರು.

ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಬಿಚ್ಚುಗತ್ತಿ ಭರಮಣ್ಣನಾಯಕರು ಯದ್ದದಲ್ಲಿ ತೆಗೆದ ಕತ್ತಿಯನ್ನು ಮತ್ತೆ ಒಳಗೆ ಇರಿಸದೆ ಶತ್ರುಗಳ ವಿರುದ್ದ ಹೋರಾಡಿದರು. ಅಣಜಿ ಕೋಟೆ, ನೆಲ್ಲಿಕಾಯಿ ಸಿದ್ದಪ್ಪನಬೆಟ್ಟ, ಆಲೂರು ಕೋಟೆ, ಆನೆಬಾಗಿಲು, ಸಂತೆಹೊಂಡ, ಹಿಡಂಬೇಶ್ವರಿ, ಹನುಮನ ಬಾಗಿಲು, ಮುರುಘಾಮಠ, ಒನಕೆ ಓಬವ್ವನ ಕಿಂಡಿ, ಅರಸನ ಕೆರೆ, ಭರಮಸಾಗರ ಕೆರೆ ಮುರುಘಾಮಠದ ಎದುರು ಹಾಗೂ ಹಿಂಭಾಗದಲ್ಲಿರುವ ಕೆರೆಗಳನ್ನು ಕಟ್ಟಿಸಿದರು. ಗುಡಿ ಗೋಪುರ, ಗತ ವೈಭವದ ದೇವಸ್ಥಾನಗಳನ್ನು ಕಟ್ಟಿಸಿ ಚಿತ್ರದುರ್ಗದ ಪಾಳೆಯಗಾರರಲ್ಲಿ ಯಾರೂ ಕೂಡ ಮಾಡದಂತೆ ಅಭಿವೃದ್ದಿ ಕೆಲಸಗಳನ್ನು ಮಾಡಿ ಅಜರಾಮರವಾಗಿ ಉಳಿದಿದ್ದಾರೆಂದು ಗುಣಗಾನ ಮಾಡಿದರು.

ರಾಜಾವೀರ ಮದಕರಿನಾಯಕ ಮಾತನಾಡುತ್ತ ಯುವರಾಜನಾಗಿದ್ದ ಬಿಚ್ಚುಗತ್ತಿ ಭರಮಣ್ಣನಾಯಕನನ್ನು ಕೆಲವರು ದನ ಕಾಯುವ ಹುಡುಗ ಎಂದು ಅಪ ಪ್ರಚಾರ ಮಾಡಿದ್ದುಂಟು. ಹಾಗಾಗಿ ದಳವಾಯು ಮುದ್ದಣ್ಣ ಭರಮಣ್ಣನಾಯಕನಿಗೆ ಪಟ್ಟ ಕಟ್ಟಲಿಲ್ಲ. ಚಿತ್ರನಾಯಕ ಕಾಮಗೇತಿ ವಂಶಸ್ಥರಾಗಿದ್ದರು. ಚಿತ್ರದುರ್ಗದ ಇತಿಹಾಸದಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕ ಮಾಡಿದಷ್ಟು ಜನೋಪಕಾರಿ ಕೆಲಸಗಳು ಬೇರೆ ಯಾರಿಂದಲು ಆಗಿಲ್ಲ. 1512 ರಲ್ಲಿ ಚಿತ್ರದುರ್ಗದಲ್ಲಿ ಆಳ್ವಿಕೆ ಆರಂಭಗೊಂಡಿತು. ಚಿತ್ರದುರ್ಗ ಎಂದರೆ ನಾಯಕರ ರಾಜಧಾನಿ ಎಂದು ನೆನಪಿಸಿಕೊಂಡರು.

ಕಿರಣ್‍ಕುಮಾರ್, ನಿವೃತ್ತ ರೈಲ್ವೆ ಅಧಿಕಾರಿ ರಾಜಶೇಖರಪ್ಪ ಸಿ.ಎಂ. ಕೃಷ್ಣಮೂರ್ತಿ, ಸುರೇಶ್, ರಘು ಬಿ. ಅಜಯ್‍ಮದಕರಿ, ಗಿರಿಸಾಗರ್ ಮದಕರಿ, ಟಿ.ರಾಜಣ್ಣ, ಕೃಷ್ಣಮೂರ್ತಿ, ಪವನ್, ನಾಗರಾಜ್, ಮಂಜುನಾಥ್ ಬಿ.ಎನ್, ಕೆ.ಟಿ.ನಾಗರಾಜ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.
ಬಿಚ್ಚುಗತ್ತಿ ಭರಮಣ್ಣನಾಯಕನ 333 ಪಟ್ಟಾಭಿಷೇಕ ಮಹೋತ್ಸವದ ನೆನಪಿಗಾಗಿ ಸಿಹಿ ಹಂಚಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಮೇ 20: ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ

ಬೆಂಗಳೂರಿನಲ್ಲಿ ನಟ-ನಟಿಯರ ರೇವ್ ಪಾರ್ಟಿಯಲ್ಲಿ ಸಿಕ್ಕಿದ್ದೇನು..?

  ಬೆಂಗಳೂರು: ಇಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ತೆಲುಗು

ಸವಾಲುಗಳ ನಡುವೆಯೇ ಜಯಭೇರಿ ಬಾರಿಸಿದ ಸಿದ್ದರಾಮಯ್ಯ ಸರ್ಕಾರ : ಇಂದಿಗೆ ಒಂದು ವರ್ಷ

  2023 ಮೇ 20ರಂದು ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿತ್ತು, ಸಿದ್ದರಾಮಯ್ಯ ಅವರು ಸಿಎಂ ಆಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರು. ಇಂದಿಗೆ ಆ ಸಂಭ್ರಮದ ದಿನಕ್ಕೆ ವರ್ಷದ ಸಂಭ್ರಮ. ಸಿದ್ದರಾಮಯ್ಯ ಸರ್ಕಾರ

error: Content is protected !!