Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

---Advertisement---

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ಮೃತನನ್ನು ನಗರ ನಿವಾಸಿ ಕಾರ್ತಿಕ್ (25) ಎಂದು ಗುರುತಿಸಲಾಗಿದೆ. ಸ್ಕೂಟಿ ಹಿಂಬದಿ ಮತ್ತು ಬೈಕ್ ನಲ್ಲಿ ಕುಳಿತಿದ್ದವರಿಗೆ ಗಾಯಯವಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದ್ದು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಕೂಟಿ ಮತ್ತು ಬೈಕ್ ಮುಖಾಮುಖಿಯಾದ ರಭಸಕ್ಕೆ ನಾಲ್ವರು ರಸ್ತೆಗೆ ಬಿದ್ದಿದ್ದಾರೆ. ಅಪಘಾತ ರಭಸಕ್ಕೆ ಸ್ಕೂಟಿಯ ಮುಂಭಾಗ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join WhatsApp

Join Now

Join Telegram

Join Now

Leave a Comment