ಹಿರಿಯೂರು, ಸೆಪ್ಟೆಂಬರ್. 20 : ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಕೃಷಿಕ ದಿವಂಗತ ಲಕ್ಷ್ಮಣಪ್ಪನ ಧರ್ಮಪತ್ನಿ ಹೆಚ್.ಆರ್. ಸಣ್ಣ ರಂಗಮ್ಮ (70) ವಯೋಸಹಜ ಅನಾರೋಗ್ಯದಿಂದ ಶನಿವಾರ ತವರು ಮನೆ ಹುಚ್ಚವ್ವನಹಳ್ಳಿಯಲ್ಲಿ ನಿಧನರಾದರು.
ಪತ್ರಕರ್ತ ಎಂಎಲ್. ಗಿರಿಧರ್ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ. ಅಂತ್ಯಕ್ರಿಯೆಯನ್ನು ಮೃತರ ಸ್ವಗ್ರಾಮದಲ್ಲಿ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.





