Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಮೃತ ವ್ಯಕ್ತಿಯ ಪತ್ತೆಗೆ ಮನವಿ

---Advertisement---

 

ಸುದ್ದಿಒನ್, ಹಿರಿಯೂರು, ಫೆಬ್ರವರಿ.16 : ತಾಲ್ಲೂಕಿನ ಹರಿಯಬ್ಬೆ ಗ್ರಾಮದ ಭಾರತಮಾತಾ ಶಾಲಾ ಸಮೀಪ ಯಾವುದೋ ಅಪರಿಚಿತ ಕಾರೊಂದು ಅಪಘಾತಪಡಿಸಿದ್ದರಿಂದ 55ದಿಂದ 60 ವರ್ಷದ ವ್ಯಕ್ತಿಯೊಬ್ಬರು  ಮೃತಪಟ್ಟಿದ್ದಾರೆ.

ಅಪಘಾತದ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೃತನು ಅಪರಿಚಿತ ಗಂಡ್ಸಾಗಿದ್ದು, ಹೆಸರು ವಿಳಾಸ ಮತ್ತು ವಾರಸುದಾರರು ಬಂದಿರುವುದಿಲ್ಲ.  ಹಾಗಾಗಿ ಮೃತನ ಗುರುತು ಪತ್ತೆಯಾಗಿರುವುದಿಲ್ಲ. ಮೃತ ವ್ಯಕ್ತಿಯು ದುಂಡು ಮುಖ, ಗೋದಿ ಮೈಬಣ್ಣ ಬಿಳಿ ಕುರುಚಲು ಗಡ್ಡವಿರುತ್ತದೆ.

ತುಂಬು ತೋಳಿನ ಬಿಳಿ ಅಂಗಿ, ಬಿಳಿ ಬನಿಯನ್ ನೀಲಿ ಮತ್ತು ಕಾಫಿ ಬಣ್ಣದ ಚೌಕುಳಿಯ ಪಂಚೆ, ಆಕಾಶ ನೀಲಿ ಬಿಳಿ ಹಾಗೂ ಕಪ್ಪುಗೆರೆಯುಳ್ಳ ಟವಲ್, ಕಂದು ಬಣ್ಣದ ಡ್ರಾಯರ್ (ಚಡ್ಡಿ) ಧರಿಸಿರುತ್ತಾರೆ. ಪ್ರಕರಣದಲ್ಲಿ ವರಸುದಾರರ ಗುರುತು ಕಂಡಲ್ಲಿ ಐಮಂಗಳ ವೃತ್ತ ನಿರೀಕ್ಷಕರು 9480 80313 ಹಾಗೂ ಚಿತ್ರದುರ್ಗ ಕಂಟ್ರೋಲ್ ರೂಂ 9480803100 ನಂಬರ್ ಗೆ ಕರೆ ಮಾಡಿ ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆ ಪಿಎಸ್ಐ ಬಾಹುಬಲಿ ಪಡನಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...