ಚಿತ್ರದುರ್ಗ. ಸೆ.09: ಹಿರಿಯೂರು ಉಪವಿಭಾಗ ವ್ಯಾಪ್ತಿಯ ಭರಂಗಿರಿ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಫ್-10 ಐಮಂಗಲ ವಾಟರ್ ಸಪ್ಲೆ 11 ಕೆವಿ ಮಾರ್ಗದ ಎಕ್ಸ್‍ಪ್ರೆಸ್ ಫೀಡರ್ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಭರಂಗಿರಿ 66/11 ವಿದ್ಯುತ್ ವಿತರಣಾ ಕೇಂದ್ರದ 11 ಕೆ.ವಿ. ಮಾರ್ಗಗಳಿಗೆ ಸೆ.10, 13 ಹಾಗೂ 16ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕುರುಬರಹಳ್ಳಿ, ಅಮ್ಮನಹಟ್ಟಿ, ವಿ.ವಿ.ಪುರ, ತಳವಾರಹಟ್ಟಿ, ಬೆಳಗಟ್ಟ, ಕೂನಿಕೆರೆ ಕಾವಲ್, ಎರಕೆನಾಗೇನಹಳ್ಳಿ, ಮೇಕೇನಹಳ್ಳಿ, ಕಕ್ಕಯ್ಯನಹಟ್ಟಿ, ಅಗಳೇರಹಟ್ಟಿ, ಕುಂಟಪ್ಪನಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಹಿರಿಯೂರು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್.ಪೀರ್‍ಸಾಬ್ ತಿಳಿಸಿದ್ದಾರೆ.






