ಸುದ್ದಿಒನ್, ಹಿರಿಯೂರು, ಡಿಸೆಂಬರ್. 18 : ತಾಲೂಕಿನ ಐತಿಹಾಸಿಕ ವಾಣಿ ವಿಲಾಸ ಜಲಾಶಯದ ಕ್ರಾಸ್ ಬಳಿ ಇರುವ ಪ್ರವಾಸಿ ಮಂದಿರದಲ್ಲಿ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು 16 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.
ಭಾನುವಾರ ಸಂಜೆ ಠಾಣೆ ಹಿರಿಯೂರು ಗ್ರಾಮಾಂತರ ಪೋಲಿಸರು ಖಚಿತ ಮಾಹಿತಿ ಮೇರೆಗೆ ಪ್ರವಾಸಿ ಮಂದಿರದಲ್ಲಿ ಕಾರ್ಯಾಚರಣೆ ನಡೆಸಿ 16 ಮಂದಿ ಜೂಜುಕೋರರನ್ನು ಬಂಧಿಸಿ ಅವರಿಂದ 4 ಲಕ್ಷದ 37 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತರು :
ನಾಸೀರ್ ವಿವಿ ಪುರ (54), ರಾಜಪ್ಪ (50) ಹಿರಿಯೂರು ನಗರ, ಚಿತ್ರಲಿಂಗೇಶ (38) ಆಲಮರದಹಟ್ಟಿ, ಕೆ. ಮಂಜುನಾಥ್ ಯಾದವ್ (30) ಜಾನುಕೊಂಡ, ಟಿ. ಮಂಜುನಾಥ್ (49) ಹಿರಿಯೂರು ಟೌನ್, ಚಿಕ್ಕಣ್ಣ (45) ತಾವರೆಕೆರೆ, ಮಣಿಕಂಠ (25) ಜೆಜಿ ಹಳ್ಳಿ, ಬಾಬು (38) ಹಿರಿಯೂರು ಟೌನ್, ಧನರಾಜ್ (42) ಹಿರಿಯೂರು ಟೌನ್, ಮಾರುತಿ (35) ಹಿರಿಯೂರು ಟೌನ್, ಮುದಿಯಣ್ಣ ( 48) ಹಿರಿಯೂರು ಟೌನ್, ರವಿ ಅಲಿಯಾಸ್ (ಕಬ್ಬಡಿ ರವಿ), (36) ಹಿರಿಯೂರು ಟೌನ್ ಹಾಗೂ ನಗರಸಭೆ ಸದಸ್ಯರಾದ ಅಜೇಯ್ ಕುಮಾರ್ (ಅಜ್ಜಪ್ಪ), ಅನಿಲ್ ಕುಮಾರ್ ಬಂಧಿತರು.
ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.