Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹಿರಿಯೂರು : ಐಮಂಗಲ ಕೆರೆಗಳಿಗೆ ನೀರು ತುಂಬಿಸುವ ರೈತರ ಪ್ರತಿಭಟನೆ

---Advertisement---

ಸುದ್ದಿಒನ್, ಹಿರಿಯೂರು, ಜೂನ್. 30 : ತಾಲ್ಲೂಕಿನ ಐಮಂಗಲ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಐಮಂಗಲ ಹೋಬಳಿ ನೀರಾವರಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಸಿ ರಾಜೇಶ್ ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಐಮಂಗಲ ಗ್ರಾಮದ ಶ್ರೀ ಕಲ್ಕುಂಟೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಐಮಂಗಲ ಹೋಬಳಿಯ ಎಲ್ಲಾ ಕೆರೆಗಳಿಗೆ ಶಾಶ್ವತ ನೀರಿಗಾಗಿ ರೈತರ ಹೋರಾಟ ನಡೆಸಿದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖಂಡರುಗಳು ಮಾತನಾಡಿ ಭದ್ರಾ ಮೇಲ್ಕಂಡೆ ಯೋಜಯಡಿಲ್ಲಿ ೨೯.೯ ಟಿ.ಎಂ.ಸಿ. ನೀರು ಬಳಸಿಕೊಂಡು ಮಧ್ಯ ಕರ್ನಾಟಕ ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯ ವಿವಿಧ ಭೂಪ್ರದೇಶಗಳ ಸೂಕ್ಷ್ಮ ನೀರಾವರಿ ಪದ್ಧತಿ ಮೂಲಕ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.

ಭದ್ರ ಮೇಲ್ದಂಡೆ ಯೋಜನೆಯನ್ನು ೨೦೦೭-೦೮ ರಲ್ಲಿ ಆರಂಭಿಸಲಾಗಿದ್ದು, ಸುಮಾರು ೧೭ ವರ್ಷಗಳು ಕಳೆದರು ಸರ್ಕಾರದ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಂಗಾ ನದಿಯಿಂದ ಭದ್ರಾ ನದಿಗೆ ನೀರು ಹರಿಸುವ ಕಾಮಗಾರಿ ಶೇ.೮೦ ರಷ್ಟು ಸಂಪೂರ್ಣಗೊಂಡಿದೆ ಎನ್ನಲಾಗಿದೆ. ಸರ್ಕಾರದ ಕಳೆದ ೧೭ ವರ್ಷಗಳಿಂದ ಕಾಮಗಾರಿಯನ್ನು ಮಂದಗತಿಯಲ್ಲಿ ನಡೆಸುತ್ತಾ ಬಂದಿದೆ ಅದು ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ.
ಅಜಂಪುರ ಬಳಿಯ ವೈ ಜಂಕ್ಷನ್‌ನಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಶಾಖಾ ಕಾಲುವೆಗಳಾಗಿ ಮಾರ್ಪಡಿಸಲಾಗಿದೆ.

ಚಿತ್ರದುರ್ಗ ಶಾಖಾ ಕಾಲುವೆ ಬಹುತೇಕ ಪೂರ್ಣಗೊಂಡಿದೆ ಆದರೆ ಐಮಂಗಲ ಹೋಬಳಿಯ ಯಾವುದೇ ಶಾಖಾ ಕಾಲುವೆಗಳು ಇನ್ನು ಆರಂಭಗೊಂಡಿಲ್ಲ. ಈ ಶಾಖಾ ಕಾಲುವೆಯಿಂದ ಸೂಕ್ಷ್ಮ ನೀರಾವರಿ ಯೋಜನೆಯಡಿ ಹೋಬಳಿಯಲ್ಲಿರುವ ಸಣ್ಣ ಹಾಗೂ ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಇನ್ನು ಚಾಲನೆ ದೊರೆತಿಲ್ಲ. ಇದರಿಂದ ನೀರಾವರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ವಿಶೇಷವಾಗಿ ಕಳೆದ ೪೦-೫೦ ವರ್ಷಗಳಿಂದ ಐಮಂಗಲ ಹೋಬಳಿಗೆ ಭದ್ರ ನೀರಿಗಾಗಿ ಹೋರಾಟ ಮಾಡಿದರು ಯಾವುದೇ ಫಲ ದೊರೆತಿಲ್ಲ. ಐಮಂಗಲ ಭಾಗದಲ್ಲಿ ಕಡಿಮೆ ಮಳೆಯಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ.

ಈ ಸಂದರ್ಭದಲ್ಲಿ ಅಧ್ಯಕ್ಷ ಎನ್.ತಿಪ್ಪೀರಯ್ಯ, ಉಪಾಧ್ಯಕ್ಷ ಹೆಚ್.ಜೆ.ಕಾಂತರಾಜ್, ಖಜಾಂಚಿ ಜಿ.ಡಿ.ರಾಮಮೋಹನ್, ಸಮಿತಿಯ ನಿರ್ದೇಶಕರಾದ ಕೃಷ್ಣಮೂರ್ತಿ.ಟಿ, ಹನುಮಂತರೆಡ್ಡಿ.ಹೆಚ್, ಸಿದ್ದಪ್ಪ.ಎನ್, ಟಿ.ಹನುಮನಾಯಕ, ಸಿ.ತಿಪ್ಪೇಸ್ವಾಮಿ, ಓ.ಜಿ.ಬಸಣ್ಣ, ಸಮಿತಿಯ ಪದಾಧಿಕಾರಿಗಳು, ಶಶಿಕಲಾ, ಕಂದಿಕೆರೆ ಸುರೇಶ್‌ಬಾಬು, ಗಿಡೋಬನಹಳ್ಳಿ ಅಶೋಕ್, ಕಲ್ಲಹಟ್ಟಿ ಆರ್.ಹರೀಶ್, ಚಂದ್ರಪ್ಪ, ಟಿ.ಆರ್.ರಾಜೇಶ್ವರಿ ಹಾಗೂ ವಿವಿಧ ಗ್ರಾಮದ ನೂರಾರು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...