ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 : ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುರುವಾರ (ಡಿಸೆಂಬರ್ 25, 2025) ಬೆಳಗಿನ ಜಾವ ಕಂಟೇನರ್ ಟ್ರಕ್, ಐಷಾರಾಮಿ ಸ್ಲೀಪರ್ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಐದು ವರ್ಷದ ಬಾಲಕಿ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 06 ಮಂದಿ ಸಾವನ್ನಪ್ಪಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸ್ಪಷ್ಟಪಡಿಸಿದ್ದಾರೆ.
ಮೃತರ ಸಂಪೂರ್ಣ ಮಾಹಿತಿ :
1. ಎ ಎಂ ನವ್ಯಾ (26 ವರ್ಷ)
ತಂದೆ : ಎ ಎನ್ ಮಂಜಪ್ಪ,
ಮಹಾಲಕ್ಷ್ಮಿ ಲೇಔಟ್,
ಚನ್ನರಾಯಪಟ್ಟಣ, ಹಾಸನ ಜಿಲ್ಲೆ.
2. ಎಚ್ ಸಿ ಮಾನಸ (27 ವರ್ಷ)
ತಂದೆ : ಚಂದ್ರೇಗೌಡ ಸಿ ವಿ,
ಚನ್ನರಾಯಪಟ್ಟಣ, ಹಾಸನ ಜಿಲ್ಲೆ
3. ರಶ್ಮಿ ಆರ್ ಮಹಾಲೆ, (24 ವರ್ಷ)
ತಂದೆ : ರತ್ನಾಕರ್ ಮಹಾಲೆ, ಶಿರಾಲಿ ಗ್ರಾಮ,
ಭಟ್ಕಳ ತಾ. ಉತ್ತರ ಕನ್ನಡ ಜಿಲ್ಲೆ
4.ಬಿಂದು, ಗೃಹಿಣಿ, (29 ವರ್ಷ)
ಗಂಡ : ದರ್ಶನ್, ಗಿರಿನಗರ ಬೆಂಗಳೂರು
5. ಗ್ರೇಯಾ, (05 ವರ್ಷ)
ಬಿಂದು ಮತ್ತು ದರ್ಶನ್ ದಂಪತಿಗಳ ಮಗಳು, ಗಿರಿನಗರ ಬೆಂಗಳೂರು.
6. ಕುಲದೀಪ್ – ಟ್ರಕ್ ಚಾಲಕ, ಉತ್ತರ ಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಡಪಡಿಸಿವೆ.
ಅಪಘಾತಕ್ಕೆ ಒಳಗಾದ ಬಸ್ ಸೀಬರ್ಡ್ ಟೂರಿಸ್ಟ್ ಗೆ ಸಂಬಂಧಿಸಿದ ಬಸ್ಸಿನಲ್ಲಿ ಓರ್ವ ಡ್ರೈವರ್, ಓರ್ವ ಕ್ಲೀನರ್ ಸೇರಿದಂತೆ ಒಟ 33 ಜನರು ಪ್ರಯಾಣಿಸುತ್ತಿದ್ದು, ಈ ಅಪಘಾತದಿಂದಾಗಿ ಐವರು ಪ್ರಯಾಣಿಕರು ಮೃತಪಟ್ಟಿದ್ದು, 28 ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆ, ಶಿರಾ ಸರ್ಕಾರಿ ಆಸ್ಪತ್ರೆ, ಶಿರಾ ಖಾಸಗಿ ಆಸ್ಪತ್ರೆ ಮತ್ತು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





