ಹಿರಿಯೂರು: ನಗರದ ಪ್ರಸಿದ್ಧ ಬಂಗಾರದ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಹಿರಿಯೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 5.76 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿರಿಯೂರು ಟೌನ್‌ನ ಭಾಗ್ಯಲಕ್ಷ್ಮಿ ಜ್ಯುವೆಲರ್ಸ್ ಅಂಡ್ ಬ್ಯಾಂಕರ್ಸ್ ಅಂಗಡಿಯಲ್ಲಿ ಮೇ 25ರಿಂದ ಜೂನ್ 1ರ ಅವಧಿಯಲ್ಲಿ ಕಳ್ಳತನ ನಡೆದಿತ್ತು. ಅಂಗಡಿಯಿಂದ ₹1,01,000 ಮೌಲ್ಯದ 7 ಗ್ರಾಂ ತೂಕದ ಬಂಗಾರದ ಕಿವಿ ಓಲೆ ಹಾಗೂ ₹6,25,000 ಮೌಲ್ಯದ 2.5 ಕೆ.ಜಿ ತೂಕದ 28 ಜೊತೆ ಬೆಳ್ಳಿಯ ಕಾಲು ಚೈನುಗಳು ಕಳುವಾಗಿದ್ದವು. ಈ ಬಗ್ಗೆ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ ಸಂಖ್ಯೆ: 152/2026 ಕಲಂ: 303(2) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜೀತ್ ಕುಮಾರ್ ಬಂಡಾರು (IPS) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಆರ್. ಶಿವಕುಮಾರ್ (KSPS) ಅವರ ಮಾರ್ಗದರ್ಶನದಲ್ಲಿ, ಹಿರಿಯೂರು ಉಪ ವಿಭಾಗದ ಡಿವೈಎಸ್‌ಪಿ ಟಿ. ಎಂ ಶಿವಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಜೂನ್ 5ರಂದು ಕಾರ್ಯಾಚರಣೆ ನಡೆಸಿದ ಹಿರಿಯೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಸಿರಾಜ್ ಮತ್ತು ಸಿಬ್ಬಂದಿ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ಹುಣಸಮಾರನಹಳ್ಳಿ ಮೂಲದ, ಸದ್ಯ ಹಿರಿಯೂರು ಟೌನ್ ನ ಅವಧಾನಿ ನಗರದಲ್ಲಿ ವಾಸವಿದ್ದ ಕಾರ್ ಚಾಲಕ ಪ್ರವೀಣ್ ಕುಮಾರ್ ಸಿ.ಆರ್ (33) ಎಂದು ಗುರುತಿಸಲಾಗಿದೆ.
ಆರೋಪಿಯು ಕಳವು ಮಾಡಿದ್ದ ಮಾಲನ್ನು ಚಳ್ಳಕೆರೆಯ ‘ಸಪ್ತಗಿರಿ ಜ್ಯುವೆಲರ್ಸ್’ ಅಂಗಡಿಯಲ್ಲಿ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನ ಮಾಹಿತಿಯ ಮೇರೆಗೆ ಪೊಲೀಸರು ಸದರಿ ಅಂಗಡಿಯಿಂದ ₹5,00,000 ಮೌಲ್ಯದ 1 ಕೆ.ಜಿ 913 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ₹76,902 ಮೌಲ್ಯದ ಬಂಗಾರದ ಜಮುಕಿ ಸೇರಿದಂತೆ ಒಟ್ಟು ₹5,76,902 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಕ್ಷತೆಯಿಂದ ಕಾರ್ಯನಿರ್ವಹಿಸಿ ಆರೋಪಿ ಹಾಗೂ ಕದ್ದ ಮಾಲನ್ನು ಪತ್ತೆಹಚ್ಚಿದ ಹಿರಿಯೂರು ನಗರ ಠಾಣೆಯ ಹೆಚ್.ಸಿ-1336 ಸಿ. ಸುರೇಶ್ ನಾಯ್ಕ, ಹೆಚ್.ಸಿ-1253 ಮಂಜುನಾಥ್, ಪಿಸಿ-2187 ಶಿವಪ್ಪ, ಪಿಸಿ-2186 ಸುದರ್ಶನ್ ಗೌಡ ಮತ್ತು ಪಿಸಿ-2709 ಶರಣಬಸಪ್ಪ ಅವರನ್ನೊಳಗೊಂಡ ತಂಡದ ಕಾರ್ಯವನ್ನು ಚಿತ್ರದುರ್ಗದ ಪೊಲೀಸ್ ಅಧೀಕ್ಷಕರಾದ ರಂಜೀತ್ ಕುಮಾರ್ ಬಂಡಾರು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















