ಪುರಿಯ ಶಂಕರಾಚಾರ್ಯರ ಪ್ರಕಾರ ಹಿಂದು ಎಂದರೆ ಏನು..? ವಿಡಿಯೋದಲ್ಲಿದೆ ಒಂದಷ್ಟು ಮಾಹಿತಿ..!

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಎಂಬ ಪದ ನಮ್ಮದಲ್ಲ. ಆ ಪದದ ಅರ್ಥ ಕೇಳಿದರೆ ಶಾಕ್ ಆಗುತ್ತೀರಿ ಎಂದೆಲ್ಲಾ ಹೇಳಿದ ಮೇಲೆ ಬಿಜೆಪಿ ನಾಯಕರು ಸೇರಿದಂತೆ ಹಲವು ಸಂಘಟನೆಗಳು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರನ್ನು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿವೆ. ಈ ಮಧ್ಯೆ ಪುರಿಯ ಶಂಕರಾಚಾರ್ಯ ಅವರ ವಿಡಿಯೋವೊಂದು ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಹಿಂದು ಪದದ ಅರ್ಥವನ್ನು ತಿಳಿಸಿದ್ದಾರೆ. 2017ರಲ್ಲಿ, ಪುರಿಯ ಶಂಕರಾಚಾರ್ಯರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದು, ಹಿಂದೂ ಶಬ್ದಕ್ಕೆ ಭಾರತೀಯ ಮೂಲವಿದೆ. ಮುಸ್ಲಿಮರ ಮುಹಮ್ಮದ್ ಪೈಗಂಬರ್ ಮತ್ತು ಕ್ರಿಶ್ಚಿಯನ್ನರ ಏಸುಕ್ರಿಸ್ತ ಬರುವ ಮುನ್ನವೇ ಹಿಂದೂ ಶಬ್ದದ ಬಳಕೆ ಇತ್ತು. ಇದು ಸೌಮ್ಯ, ಸುಂದರ, ಸ್ನೇಹಪರ, ಅಲಂಕೃತ, ನ್ಯಾಯಸಮ್ಮತ, ಮತ್ತು ಶತ್ರುಗಳನ್ನು ಕೊಲ್ಲುವ ಅರ್ಥದಲ್ಲಿ ಬಳಕೆ ಮಾಡಲಾಗುತ್ತಿತ್ತು ಎಂದಿದ್ದಾರೆ. ಶಂಕರಾಚಾರ್ಯರ ಪ್ರತಿಕ್ರಿಯೆಯ ವಿಡಿಯೋವನ್ನು ಪುರಿಯ ಗೋವರ್ಧನ ಮಠವು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ.

ಇನ್ನು ಹಿಂದೂ ಪದದ ಅರ್ಥದ ಬಗ್ಗೆ ಇತಿಹಾಸಕಾರರು ಹೇಳುವ ಪ್ರಕಾರ, ಹಿಂದು ಪದವನ್ನು ಬಳಸಲು ಆರಂಭಿಸಿದ್ದು ಪರ್ಶಿಯನ್ನರು. ಸಿಂಧು ಪದವೇ ಮುಂದಕ್ಕೆ ಹಿಂದು ಪದವಾಗಿ ಬದಲಾಗಿದೆ. ತಮಿಳುನಾಡಿನ ರಾಜ್ಯ ಶಿಕ್ಷಣದಲ್ಲೂ ಹಿಂದೂ ಪದ ಪರ್ಶಿಯನ್ ನಿಂದ ಬಂದಿದ್ದು ಎಂದೇ ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!