ಹುಬ್ಬಳ್ಳಿ: ಧರ್ಮದ ಹೆಸರಿನಲ್ಲಿ ಬೇರೆ ಬೇರೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದು ಕಡೆಗೆ ಅವರಿಗೆ ತಿರುಗುಬಾಣವಾಗುತ್ತದೆ. ಜನರಿಗೆ ಗೊತ್ತಾಗುತ್ತೆ. ಏನೆಲ್ಲಾ ಹುನ್ನಾರ ಮಾಡುತ್ತಾರೆ ಅಂತ. ಮಾವಿನಕಾಯಿ ವ್ಯಾಪಾರಕ್ಕೆ ಯಾರಾದ್ರು ಮಧ್ಯಪ್ರವೇಶ ಮಾಡುತ್ತಾರಾ..? ಜಾತ್ರೆಗಳಲ್ಲಿ ಎಷ್ಡೋ ವರ್ಷದಿಂದ ಮುಸ್ಲಿಂರು ಹಿಂದೂಗಳು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಇನ್ನು ಹಲಾಲ್ ಮಾಂಸ ತಗೊಳೋದನ್ನು ಸಾಕಷ್ಟು ವರ್ಷಗಳಿಂದ ಅವರು ಕಡ್ಟು ಮಾಡಿದ್ದನ್ನೆ ತೆಗೆದುಕೊಳ್ಳುತ್ತಿದ್ದೆವು. ತಿನ್ನದೆ ಇರುವ ಜನ ದಾರಿ ತಪ್ಪಿಸುತ್ತಿದ್ದಾರೆ. ಅವರವರ ನಂಬಿಕೆ ಅಲ್ವಾ. ಯಾರುಗೇನು ತೊಂದರೆಯಾಗುತ್ತೆ ಎಂದಿದ್ದಾರೆ.
ಬಾದಾಮಿಗೆ ಈಗ ಹೋಗುತ್ತಿದ್ದೇನೆ. ಅಸೆಂಬ್ಲಿ ಇತ್ತಲ್ವ,ಇದ್ದಿದ್ರಿಂದ ನಾನು ಹೋಗುವುದಕ್ಕೆ ಆಗಿರಲಿಲ್ಲ. ಬಾದಾಮಿಯಲ್ಲಿ ಇವತ್ತು ನಾಳೆ ಎರಡು ದಿನ ಇರುತ್ತೇನೆ. ಬಿಜೆಪಿ ಪಕ್ಷದವರು ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ಜನರ ಮುಂದೆ ಸಾಧನೆಗಳನ್ನು ಇಟ್ಟುಕೊಂಡು ಹೋಗಲು ಸಾಧನೆಗಳೇ ಇಲ್ಲ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನೆಲ್ಲಾ ಮುಚ್ಚಿಕೊಳ್ಳಬೇಕು ಅಲ್ವಾ. ಅದಕ್ಕೆ ಭಾವನಾತ್ಮಕ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ.
ಹಿಜಾಬ್, ಹಲಾಲ್, ಜಾತ್ರೆಯಲ್ಲಿ ನಿಷೇಧ, ಭಗವದ್ಗೀತೆ ವಿಚಾರ, ಈಗ ಮಸೀದಿಗಳಲ್ಲಿ ಮೈಕ್, ಮಾವಿನ ಹಣ್ಣಿನ ವಿಚಾರ ಈ ಎಲ್ಲವನ್ನು ಇಟ್ಟುಕೊಂಡು ಹೋಗುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಹಿಂದೂ ಮುಸ್ಲಿಂ ರು ಇಬ್ಬರು ಪರಸ್ಪರ ಹೊಂದಾಣಿಕೆಯಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಕಡೆ ಮಾವಿನ ತೋಟ ಇದ್ರೆ ವ್ಯಾಪಾರ ಮಾಡುತ್ತಿದ್ಧ್ದು ಯಾರಿಗೆ ಮುಸ್ಲಿಂ ವ್ಯಾಪಾರಿಗಳಿಗೆ. ಮುಸ್ಲಿಂ ರು ಸಂಪೂರ್ಣವಾಗಿ ತೋಟ ಕಾದು ಆಮೇಲೆ ಹಣ್ಣನ್ನು ತೆಗೆದುಕೊಳ್ಳುತ್ತಿದ್ದರು. ಇದೀಗ ಇಂಥದ್ದಕ್ಕೆಲ್ಲಾ ಯಾಕೆ ಅಡ್ಡ ಬರುತ್ತಾ ಇದ್ದಾರೆ. ಮತಗಳನ್ನು ವಿಭಜನೆ ಮಾಡಿ, ಸಮಾಜ ವಿಭಜನೆ ಮಾಡೋದು ಇವರ ಉದ್ದೇಶ ಚುನಾವಣೆ ಒಂದು ವರ್ಷವು ಇಲ್ಲ ಚುನಾವಣೆ ಹತ್ತಿರ ಬರುತ್ತಿದೆಯಲ್ಲ ಅದಕ್ಕೆ ಈ ರೀತ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.