ಬೆಂಗಳೂರು: ಕಳದ ಕೆಲವು ತಿಂಗಳ ಹಿಂದೆ ಗೋಕರ್ಣದ ಕಾಡೊಂದರ ಗುಹೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಿಕ್ಕಿದ್ದರು. ಅವರನ್ನ ವಾಪಾಸ್ ರಷ್ಯಾಗೆ ಕಳುಹಿಸುವಂತೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ. ಗೋಕರ್ಣದಲ್ಲಿ ತಾಯಿ ಮಕ್ಕಳು ಸಿಕ್ಕಾದ ಮೇಲೆ ತುಮಕೂರು ಹೊರವಲಯದ ದಿಬ್ಬೂರಿನಲ್ಲಿರುವ ವಿದೇಶಿ ಡಿಟೆನ್ಷನ್ ಕೇಂದ್ರಕ್ಕೆ ಸೇರಿಸಿದ್ದರು. ಇದೀಗ ಹೈಕೋರ್ಟ್ ಸೂಚನೆ ನೀಡಿದೆ.
ಹೈಕೋರ್ಟ್ ನ ಜಸ್ಟೀಸ್ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠವು ಇಸ್ರೇಲ್ ನಾಗರಿಕ ಡ್ರೋರ್ ಶಲೋಮೋ ಗೋಲ್ಡ್ ಸ್ಟೀನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಡ್ರೋರ್ ಶೆಲೋಮೋ ಗೋಲ್ಡ್ ಸ್ಪೀನ್ ಭಾರತಕ್ಕೆ ಬಂದು ಕರ್ನಾಟಕ ಹೈಕೋರ್ಟ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳನ್ನು ರಷ್ಯಾ ದೇಶಕ್ಕೆ ಕಳುಹಿಸಬಾರದೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಮಹಿಳೆ ನೀನಾಪ ಕುಟಿನಾ ಪತಿ ಹಾಗೂ ಇಬ್ಬರು ಮಕ್ಕಳಿಗೆ ತಾನು ತಂದೆ. ಹೀಗಾಗಿ ತಾಯಿ ಮತ್ತು ಮಕ್ಕಳನ್ನು ರಷ್ಯಾ ದೇಶಕ್ಕೆ ಕಳುಹಿಸಬಾರದು ಎಂದು ಡ್ರೋರ್ ಶಲೋಮೋ ಗೋಲ್ಡ್ ಸ್ಟೀನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಹಾಗೆ ನೀನಾ ಕುಟಿನಾ ಹಾಗೂ ತನ್ನಿಬ್ಬರ ಮಕ್ಕಳ ಖರ್ಚಿಗೆ ಹಣ ಕಳುಹಿಸುತ್ತಿದ್ದನ್ನು ಹೈಕೋರ್ಟ್ ಗಮನಕ್ಕೆ ತಂದಿದ್ದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ರಷ್ಯಾಗೆ ಆ ಮಹಿಳೆಯನ್ನು ಹಾಗೂ ಮಕ್ಕಳನ್ನು ವಾಪಾಸ್ ಕಳುಹಿಸುವಂತೆ ಸೂಚನೆ ನೀಡಿದೆ. ಸರ್ಕಾರದ ಪರ ವಕೀಲ ಅಡಿಷನಲ್ ಸಾಲಿಸಿಟರ್ ಜನರಲ್ ಅರವಿಂದ್ ಕಾಮರ್, ಕೇಂದ್ರ ಸರ್ಕಾರಕ್ಕೆ ವಿದೇಶದಿಂದ ಬಂದು ಅವಧಿ ಮೀರಿ ವಾಸ ಮಾಡಿದ ಯಾವುದೇ ವ್ಯಕ್ತಿಯನ್ನಾಗಲೀ, ಗಡೀಪಾರು ಮಾಡುವ ಅಧಿಕಾರ ಇದೆ ಎಂದಿದೆ.










