ಬೆಂಗಳೂರು: ಮೊದಲಿನಿಂದಾನೂ ಶಾಸಕ ಯತ್ನಾಳ್, ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಲೆ ಇದ್ದಾರೆ. ಇದರ ಮಧ್ಯೆ ಯಡಿಯೂರಪ್ಪ ಅವರಿಗೆ ಜೈ ಎಂದಿದ್ದ ಯತ್ನಾಳ್ ಅವರು ಮತ್ತೆ ವಿಜಯೇಂದ್ರ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಅದರಲ್ಲೂ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೆಲ್ಲವನ್ನು ಗಮನಿಸಿದ್ದ ಹೈಕಮಾಂಡ್ ದೆಹಲಿ ರಿಸಲ್ಟ್ ಗಾಗಿ ಕಾಯುತ್ತಿತ್ತು. ಇದೀಗ ದೆಹಲಿ ರಿಸಲ್ಟ್ ಬಂದಿದ್ದು, ಬೆನ್ನಲ್ಲೇ, ಬಿಜೆಪಿ ಕೇಂದ್ರಿಯ ಶಿಸ್ತು ಸಮಿತಿಯು ಶೋಕಾಸ್ ನೋಟೀಸ್ ಜಾರಿ ಮಾಡಿದೆ.
![](https://suddione.com/content/uploads/2024/10/gifmaker_me-5-1.gif)
ಪಕ್ಷದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವುದಕ್ಕೆ ಬ್ರೇಕ್ ಹಾಕುವುದಕ್ಕೆ ಈ ಶೋಕಾಸ್ ನೋಟೀಸ್ ಅನ್ನು ಜಾರಿ ಮಾಡಿದೆ. ಆದರೆ ಈ ನೋಟೀಸ್ ನೀಡುತ್ತಿರುವುದು ಮೊದಲ ಬಾರಿಯಲ್ಲ ಎರಡನೇ ಸಲ. ಈ ಬಾರಿಯೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟೀಸ್ ನಲ್ಲಿ ತಿಳಿಸಿದೆ. ಜೊತೆಗೆ ನೋಟೀಸ್ ನೀಡಿದ 72 ಗಂಟೆಯ ಒಳಗೆ ಉತ್ತರಿಸಬೇಕೆಂದು ಸಹ ಹೇಳಿದೆ.
ನಿಗದಿತ ಕಾಲಮಿತಿಯೊಳಗೆ ಉತ್ತರ ನೀಡದೆ ಇದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇಂದು ದೆಹಲಿಗೆ ಹೋಗಿದ್ದ ಯತ್ನಾಳ್ ಅವರು ಅಲ್ಲಿಂದ ಹೈದ್ರಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಶಿಸ್ತು ಸಮಿತಿ ನೀಡಿದ ನೋಟೀಸ್ ಇನ್ನು ಅವರ ಕೈಸೇರಿಲ್ಲ. ಇವತ್ತೆ ವಿಜಯೇಂದ್ರ ಅವರು ಕೂಡ ದೆಹಲಿಗೆ ಪಯಣ ಬೆಳೆಸಿದ್ದರು. ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ದೆಹಲಿಯಲ್ಲಿದ್ದು, ಅವರು ದೆಹಲಿಯಲ್ಲಿರುವಾಗಲೇ ಯತ್ನಾಳ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಈ ಬಾರಿಯ ನೋಟೀಸ್ ಗಾದರೂ ಯತ್ನಾಳ್ ಅವರು ಉತ್ತರಿಸುತ್ತಾರಾ ನೋಡಬೇಕಿದೆ.
![](https://suddione.com/content/uploads/2025/02/site.webp)