ಸುದ್ದಿಒನ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ತಾತ್ಕಾಲಿಕ ಒತ್ತಡ ಉಂಟಾಗಿದ್ದು, ಕೆಲವೆಡೆ ಸಿಲಿಂಡರ್ ಬುಕ್ಕಿಂಗ್ ಮತ್ತು ಡೆಲಿವರಿಯಲ್ಲಿ ವಿಳಂಬ ಕಂಡುಬರುತ್ತಿದೆ.ಬಹಳ ಮಂದಿ ಗ್ರಾಹಕರು ಸಿಲಿಂಡರ್ ಬುಕ್ ಮಾಡಲು ತೊಂದರೆ ಅನುಭವಿಸುತ್ತಿರುವುದಾಗಿ ದೂರುತ್ತಿದ್ದಾರೆ. ಇನ್ನು ಸಿಲಿಂಡರ್ ದರದಲ್ಲೂ ಏರಿಕೆ ಕಂಡುಬಂದಿದ್ದು, ಬುಕ್ಕಿಂಗ್ ಮಾಡಿದರೂ ಸಮಯಕ್ಕೆ ಸರಿಯಾಗಿ ವಿತರಣೆ ಆಗದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಭವಿಷ್ಯದ ಕೊರತೆ ಭೀತಿಯಿಂದ ಅನಗತ್ಯವಾಗಿದ್ದರೂ ಜನರು ಮುಂಗಡವಾಗಿ ಸಿಲಿಂಡರ್ ಬುಕ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಬೇಡಿಕೆ ತಾತ್ಕಾಲಿಕವಾಗಿ ಹೆಚ್ಚುತ್ತಿದ್ದು, ಪೂರೈಕೆ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತಿದೆ.ಈ ಕುರಿತು Indian Oil Corporation ಸಂಸ್ಥೆ ಸಲಹೆ ಪ್ರಕಟಿಸಿ, ಅಗತ್ಯವಿದ್ದಾಗ ಮಾತ್ರ ಎಲ್‌ಪಿಜಿ ಬುಕ್ಕಿಂಗ್ ಮಾಡಲು ಗ್ರಾಹಕರಿಗೆ ಮನವಿ ಮಾಡಿದೆ. “ದೇಶಾದ್ಯಂತ ಎಲ್‌ಪಿಜಿ ಲಭ್ಯತೆ ಸ್ಥಿರವಾಗಿದೆ. ಆದರೆ ಮುಂಗಡ ಬುಕ್ಕಿಂಗ್ ಹೆಚ್ಚಾದರೆ ತಾತ್ಕಾಲಿಕವಾಗಿ ಬೇಡಿಕೆ ಏರಿಕೆ ಕಾಣಿಸಿ, ಡೆಲಿವರಿ ವಿಳಂಬವಾಗುವ ಸಾಧ್ಯತೆ ಇದೆ” ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ, ಕಳೆದ ಒಂದು ವರ್ಷದಲ್ಲಿ ಮೊದಲ ಬಾರಿಗೆ ಗೃಹಬಳಕೆಯ ಅಡುಗೆ ಅನಿಲದ ದರದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, 14.2 ಕೆ.ಜಿ ಸಿಲಿಂಡರ್‌ಗೆ ₹60 ಏರಿಕೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಸಿಲಿಂಡರ್ ದರ ₹915.50ಕ್ಕೆ ಏರಿಕೆಯಾಗಿದೆ.ಭಾರತಕ್ಕೆ ಅಗತ್ಯವಿರುವ ಹೆಚ್ಚಿನ ಎಲ್‌ಪಿಜಿ ಮೂಲಕವೇ ಹಾರ್ಮುಜ್ ಜಲಸಂಧಿ ಸಾಗಾಟವಾಗುತ್ತಿರುವುದರಿಂದ, ಅಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದ್ರಲ್ಲೂ ಕೆಲವು ಎಲ್‌ಪಿಜಿ ಟ್ಯಾಂಕರ್‌ಗಳು ಈಗಾಗಲೇ ಭಾರತ ತಲುಪಿದ್ದು, ಇನ್ನಷ್ಟು ಟ್ಯಾಂಕರ್‌ಗಳನ್ನು ತರಲು ಪ್ರಯತ್ನ ಮುಂದುವರಿದಿದೆ.
ಗಲ್ಫ್ ರಾಷ್ಟ್ರಗಳಿಂದ ಹೊರಟ ಕೆಲವು ನೌಕೆಗಳು ಇನ್ನೂ ಹಾರ್ಮುಜ್ ಜಲಸಂಧಿಯಲ್ಲಿ ತಂಗಿದ್ದು, ಅವುಗಳನ್ನು ಸುರಕ್ಷಿತವಾಗಿ ದೇಶಕ್ಕೆ ತರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಪರಿಸ್ಥಿತಿಯನ್ನು ಮನಗಂಡು ಭಾರತೀಯ ನೌಕಾಪಡೆಯ ಕಾರ್ಯಪಡೆಗಳನ್ನು ಪರ್ಷಿಯನ್ ಕೊಲ್ಲಿಯಲ್ಲಿ ನಿಯೋಜಿಸಲಾಗುತ್ತಿದೆ.ಒಟ್ಟಾರೆ, ಪೂರೈಕೆ ಸ್ಥಿತಿ ನಿಯಂತ್ರಣದಲ್ಲಿ ಇದ್ದರೂ, ಅನಗತ್ಯ ಬುಕ್ಕಿಂಗ್ ತಪ್ಪಿಸಿ ಸಹಕರಿಸುವಂತೆ ಅಧಿಕಾರಿಗಳು ನಾಗರಿಕರಿಗೆ ಮನವಿ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















