ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್
ಎಲ್‍ನಿನೋ ಮತ್ತು ಲಾನಿನಾ ಎಂಬುದು ಪೆಸಿಫಿಕ್ ಮಹಾಸಾಗರದ ತಾಪಮಾನ ಮತ್ತು ವಾತಾವರಣದಲ್ಲಿ ಉಂಟಾಗುವ ಪ್ರಮುಖ ಬದಲಾವಣೆಗಳಾಗಿವೆ. ಇವು ಜಾಗತಿಕ ಹವಮಾನದ ಮೇಲೆ ವಿಶೇಷವಾಗಿ ಭಾರತದ ಮಾನ್ಸೂನ್ ಮೇಲೆ ಬಾರಿ ಪ್ರಭಾವ ಬೀರುತ್ತದೆ. ಇವುಗಳನ್ನು ಒಟ್ಟಾಗಿ ಎನ್‍ಸೋ (ENSO-EL NINO Southern Osullation) ಎಂದು ಕರೆಯಲಾಗುತ್ತದೆ.
ಎಲ್‍ನಿನೋಗೆ ವಿರುದ್ಧವಾದ ಹವಮಾನ ಸ್ಥಿತಿಯನ್ನು ಲಾನಿನಾ (LANINA) ಎಂದು ಕರೆಯುತ್ತಾರೆ. ಇವರೆಡರ ನಡುವಿನ ಸಾಕಷ್ಟು ವ್ಯತ್ಯಾಸಗಳು ಇವೆ. ಎಲ್‍ನಿನೋ ಇದು ಪೆಸಿಫಿಕ್ ಸಾಗರದಲ್ಲಿನ ಬೆಚ್ಚಗಿನ ಹಂತವಾಗಿದೆ. ಪೂರ್ವ ಮತ್ತು ಮಧ್ಯ ಉಷ್ಟ ವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಬೆಚ್ಚಗಿರುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ವ್ಯಾಪಾರ ಮಾರುತಗಳು ದುರ್ಬಲಗೊಳ್ಳುತ್ತವೆ. ಅಥವಾ ದಿಕ್ಕು ಬದಲಿಸುತ್ತವೆ. ಭಾರತದ ಮುಂಗಾರು ಮಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮಳೆ ಕಡಿಮೆಯಾಗಿ ಬರಗಾಲದ ಪರಿಸ್ಥಿತಿ ಉಂಟಾಗಬಹುದು. ಆಸ್ಟ್ರೇಲಿಯ ಮತ್ತು ಇಂಡೋನೇಷ್ಯಾದಲ್ಲಿ ಬರ, ಪೆರು ಮತ್ತು ಈಕ್ವೇಡಾರ್‍ನಲ್ಲಿ ಅತಿಯಾದ ಮಳೆ ಮತ್ತು ಪ್ರವಾಹ ಉಂಟಾಗುತ್ತದೆ. ಸಾಮಾನ್ಯವಾಗಿ 9-12 ತಿಂಗಳುಗಳ ವರೆಗೆ ಇರುತ್ತದೆ. ಆದರೆ ಕೆಲವೊಮ್ಮೆ ಸುಧೀರ್ಘವಾಗಿ ಇರಬಹುದು.
ಲಾನಿನಾ ಎಂದರೆ ಇದನ್ನು ಎಲ್‍ನಿನೋ “ವಿರೋಧಿ” ಅಥವಾ “ಶೀತ ಘಟನೆ” ಎಂದು ಕರೆಯುತ್ತಾರೆ. ಪೂರ್ವ ಮತ್ತು ಮಧ್ಯ ಉಷ್ಠವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ತಂಪಾಗಿರುತ್ತದೆ. ವ್ಯಾಪಾರ ಮಾರುತಗಳು ಸಾಮಾನ್ಯಕ್ಕಿಂತ ಹೆಚ್ಚು ಬಲಗೊಳ್ಳುತ್ತವೆ. ಭಾರತದ ಮಾನ್ಸೂನ್‍ಗೆ ಇದು ಒಳ್ಳೆಯದು. ಲಾನಿನಾ ವರ್ಷದಲ್ಲಿ ಉತ್ತಮ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಪ್ರವಾಹ, ಆಗ್ನೇಯ ಏಷ್ಯಾದಲ್ಲಿ ಹೆಚ್ಚಿನ ಮಳೆ ಮತ್ತು ಅಮೇರಿಕದ ದಕ್ಷಿಣ ಭಾಗಗಳಲ್ಲಿ ಬರಪರಿಸ್ಥಿತಿ ಕಂಡುಬರುತ್ತದೆ. ಲಾನಿನಾ ಸಾಮಾನ್ಯವಾಗಿ ಎಲ್‍ನಿನೋ ಕ್ಕಿಂತ ಹೆಚ್ಚು ಕಾಲ ಎಂದರೆ ಸುಮಾರು 1 ರಿಂದ 3 ವರ್ಷಗಳವರೆಗೆ ಎಲ್‍ನಿನೋ ಭಾರತೀಯ ಕೃಷಿಗೆ ಕೆಟ್ಟ ಸುದ್ಧಿಯಾದರೆ, ಲಾನಿನೋ ಒಳ್ಳೆಯ ಸುದ್ಧಿಯಾಗಿದೆ. ಇವರೆಡೂ ಪ್ರಕೃತಿಯ ಸಮತೋಲನದ ವಾತಾವರಣ ಅನಿಶ್ಚಿತತೆಯನ್ನು ತರುತ್ತವೆ.
ಹವಾಮಾನ ತಜ್ಞರು ಮತ್ತು ಅಂತರಾಷ್ಟ್ರೀಯ ಹವಮಾನ ಸಂಸ್ಥೆಗಳ ಪ್ರಕಾರ 2026 ಮಧ್ಯಭಾಗದಲ್ಲಿ (ಜೂನ್-ಆಗಸ್ಟ್) ಎಲ್‍ನಿನೋ ಪರಿಸ್ಥಿತಿಗಳು ಮತ್ತೆ ಸಕ್ರಿಯಗೊಳ್ಳುವ ಸಾಧ್ಯತೆ 60% ರಿಂದ 62% ಕ್ಕಿಂತ ಹೆಚ್ಚು ಇದೆ. 2023-24 ರಲ್ಲಿ ತೀವ್ರವಾದ ಎಲ್‍ನಿನೋ ಇದ್ದು, ನಂತರ ಲಾನಿನಾದ ಪರಿಸ್ಥಿತಿ ಕಂಡುಬಂದಿತು. ಈಗ ಲಾನಿನಾ ಕ್ಷೀಣಿಸುತ್ತಿದ್ದು, ಎಲ್‍ನಿನೋ ಕಡೆಗೆ ವಾತಾವರಣ ಬದಲಾಗುತ್ತದೆ.
ಎಲ್‍ನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದ ಸಮಭಾಜನಕದ ಬಳಿ ಸಮುದ್ರದ ಮೇಲ್ಮೈ ತಾಪಮಾನವು ಅಸಾಮಾನ್ಯವಾಗಿ ಬೆಚ್ಚಗಾಗುವುದು. ಇದು ಜಾಗತಿಕ ಹವಮಾನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಇದು ಮಳೆ ಕೊರತೆ ಮತ್ತು ಬರಗಾಲಕ್ಕೆ ಕಾರಣವಾಗುತ್ತದೆ. ಇದು ಪ್ರತಿ 2-7 ವರ್ಷಕ್ಕೊಮ್ಮೆ ಸಂಭವಿಸುತ್ತದೆ. ಮತ್ತು ಸಾಮಾನ್ಯವಾಗಿ 9 ರಿಂದ 12 ತಿಂಗಳುಗಳವರೆಗೆ ಇರುತ್ತದೆ.
2026 ರಲ್ಲಿ ಎಲ್‍ನಿನೋದಾ ಪ್ರಭಾವವು ಭಾರತ ಮತ್ತು ಕರ್ನಾಟಕದ ಮೇಲೆ ಪರಿಣಾಮ ಬೀಳಬಹುದು. ಈ ವರ್ಷ ಭಾರತದಲ್ಲಿ ತೀವ್ರವಾದ ಬೇಸಿಗೆ ಮತ್ತು ಬಿಸಿಗಾಳಿಯ ಸಾಧ್ಯತೆ ಹೆಚ್ಚಾಗಿದೆ. ಎಲ್‍ನಿನೋ ಭಾರತದ ನೈಋತ್ಯ ಮುಂಗಾರು ಮಳೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮಳೆಕಡಿಮೆಯಾಗಬಹುದು. ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಮಳೆ ಕೊರತೆಯಾಗುವ ಭೀತಿ ಇದ್ದು, ಕರ್ನಾಟಕದಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು. 2023-24 ದಾಖಲೆಯ ಬಿಸಿ ವರ್ಷಗಳಾಗಿದ್ದವು. 2026 ರಲ್ಲಿ ಎಲ್‍ನಿನೋ ಬಂದರೆ ಆ ದಾಖಲೆಗಳು ಮುರಿಯಬಹುದು.
2026ರ ಆರಂಭದಲ್ಲಿ (ಫೆಬ್ರವರಿ-ಏಪ್ರಿಲ್) ಪರಿಸ್ಥಿತಿ ತಟಸ್ಥವಾಗಿರಬಹುದು. ಆದರೆ ಬೇಸಿಗೆಯ ನಂತರ, ಅಂದರೆ ಮುಂಗಾರು ಮಳೆಯ ಸಮಯದಲಿ ಎಲ್‍ನಿನೋ ಸಕ್ರಿಯವಾಗಿ ಮಳೆ ಕಡಿಮೆಯಾಗುವ ಸಾಧ್ಯತೆ ಇರಬಹುದೆಂದು ಹವಮಾನ ತಜ್ಞರ ಅಭಿಪ್ರಾಯವಾಗಿದೆ.


ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್