Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತೊಗರಿ ಬೆಳೆಗಾರರಿಗೆ ಅಧಿಕ ನಷ್ಟ : ಕೇಂದ್ರ ಸರ್ಕಾರದ ಆ ಒಂದು ನಿರ್ಧಾರ ಮುಳುವಾಯ್ತಾ..?

---Advertisement---

ತೊಗರಿ ಬೆಳೆಯನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದಿಂದ ರಾಜ್ಯದ ತಿಗರಿ ಬೆಳೆಗಾರರು ತೀವ್ರ ಸಂಕಷ್ಟ ಎದುರಾಗಿದೆ. ಈ ವಿಚಾರವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಅತಿ ಹೆಚ್ಚು ತೊಗರಿ ಬೆಳೆಗಾರರಿದ್ದಾರೆ. ಅದರಲ್ಲೂ ಕಲಬುರಗಿಯಲ್ಲಿ ಹೆಚ್ಚು ಗುಣಮಟ್ಟದ ತೊಗರಿಬೇಳೆಯನ್ನು ಬೆಳೆಯುತ್ತಾರೆ. ನಮ್ಮ ರೈತರನ್ನು ಮೋದಿ ಸರ್ಕಾರವು ಸಂಕಷ್ಟಕ್ಕೆ ಸಿಲುಕಿಸಿದೆ ಎಂಬ ಅಂಶವನ್ನು ಪ್ರಿಯಾಂಕ್ ಖರ್ಗೆ ಅವರು ಒತ್ತಿ ಹೇಳಿದ್ದಾರೆ.

2024-25ರಲ್ಲಿ ಭಾರತವು 35 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಉತ್ಪಾದಿಸಿತ್ತು. ಆದರೆ ಮೋದಿ ಸರ್ಕಾರವು ಅದರಲ್ಲಿ 10%ಕ್ಕಿಂತ ಕಡಿಮೆ ಸಂಗ್ರಹ ಮಾಡಿತ್ತು. ಕರ್ನಾಟಕ ಮಾತ್ರ 10 ಲಕ್ಷ ಕ್ವಿಂಟಾಲ್ ಉತ್ಪಾದಿಸಿತ್ತು. ಆದರೆ ರೈತರು ಕ್ವಿಂಟಾಲ್ ಗೆ 6 ಸಾವಿರಕ್ಕೆ ಮಾರಾಟ ಮಾಡಲು ಒತ್ತಾಯಿಸಲಾಯಿತು. ಇದು 7,550ರ ಎಂಎಸ್ಪಿಗಿಂತ ಕಡಿಮೆಯಾಗಿದೆ. ಇದರಿಂದಾಗಿ ನಮ್ಮ ರೈತರಿಗೆ 1,550 ಕೋಡಿ ನಷ್ಟವಾಯೊತು. ಈ ವರ್ಷದ ಎಂಎಸ್ಪಿ 8 ಸಾವಿರ. ಆದರೆ ಬೆಲೆಗಳು 6,250ಕ್ಕೆ ಕುಸಿದಿದೆ. ಇದು ಕಳೆದ ವರ್ಷದ ದರಗಳ ಅರ್ಧದಷ್ಟಿದೆ. ಯಾಕಂದ್ರೆ ಕೇಂದ್ರವು ನಮ್ಮ ಸ್ವಂತ ರೈತರನ್ನು ಕೈಬಿಟ್ಟು ಇತರ ದೇಶಗಳಿಂದ ಅಗ್ಗದ, ಕಡಿಮೆ ಗುಣಮಟ್ಟದ ತೊಗರಿಯನ್ನ ಮಾರುಕಟ್ಟೆಗೆ ತರಲು ಆಯ್ಕೆ ಮಾಡಲಾಗಿದೆ.

ಈ ಮೂಲಕ ಒಂದು ದಶಕದ ಹಿಂದೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಆತ್ಮನಿರ್ಭರ ಭಾರತ್ ನಿರ್ಮಿಸುವ ಭವ್ಯ ಭರವಸೆಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇಂದು ಕೃಷಿ ಆರ್ಥಿಕತೆಯು ನಿರ್ಲಕ್ಷ್ಯ ಮತ್ತು ದುರುಪಯೋಗಕ್ಕೆ ಒಳಗಾಗಿರುವುದರಿಂದ ಆ ಭರವಸೆಗಳು ನಾಶವಾಗಿವೆ. ಕರ್ನಾಟಕದ ಬಿಜೆಪಿಯ ಕೇಂದ್ರ ಸಚಿವರು ತಾವು ಪ್ರತಿನಿಧಿಸುವ ರಾಜ್ಯದ ಸರಿಯಾದ ಹಿತಾಸಕ್ತಿಗಳಿಗಾಗಿ ನಿಲ್ಲುವ ಬದಲು ದ್ವೇಷವನ್ನು ಹರಡುವುದರ ಮೇಲೆ ಹೆಚ್ಚು ಗಮನಹರಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...