ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ಈ ಮನೆ ಮದ್ದು ಟ್ರೈ ಮಾಡಿ

1 Min Read

ನಮ್ಮ ದೇಹದಲ್ಲಿ ಕಬ್ಬಿಣಾಂಶ ಕೊರತೆ ಅನೇಕ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಚರ್ಮ, ಕೂದಲು, ಜೀವಕೋಶಗಳು ಮತ್ತು ಇತರೆ ಆರೋಗ್ಯಕ ಬೆಳವಣಿಗೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆಯಾಸವನ್ನು ನಿವಾರಿಸಲು ದೇಹದಲ್ಲಿ ಕಬ್ಬಿಣಾಂಶ ಅತ್ಯವಶ್ಯಕ. ಇದರ ಕೊರತೆಯಿಂದಾಗಿ ಉಸಿರಾಟದ ತೊಂದರೆ, ದೌರ್ಬಲ್ಯ, ತಲೆನೋವು, ತಲೆತಿರುಗುವಿಕೆ, ಹಸಿವು ಕಡಿಮೆಯಾಗುವುದು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

* ಕರಿಬೇವಿನಲ್ಲಿ ಕಬ್ಬಿಣ ಅಂಶ ಇದೆ. ಹೀಗಾಗಿ ಕರಿಬೇವನ್ನ ಹೆಚ್ಚಾಗಿ ಬಳಸುವಿದರಿಂದ ದೇಹಕ್ಕೆ ಕಬ್ಬಿಣದಂಶ ಸಿಗಲಿದೆ.

* ಪ್ರತಿದಿನ ಬೆಲ್ಲ ತಿನ್ನುವುದರಿಂದ ಹಿಮೊಗ್ಲೊಬಿನ್ ಮತ್ತು ಕಬ್ಬಿಣಾಂಶ ಸಿಗುತ್ತೆ.

* ನುಗ್ಗೆ ಸೊಪ್ಪು, ಬಾಳೆ ಕಾಯಿ, ಸೇಬು, ಬದನೆಕಾಯಿಯಂತಹ ತರಕಾರಿಗಳಲ್ಲಿ ಹೇರಳ ಐರನ್ ಇರುತ್ತೆ.

* ಬೀಟ್ರೂಟ್ ಜ್ಯೂಸ್, ದಾಳಿಂಬೆ, ಖರ್ಜೂರ, ಕರಿಬೇವಿನ ಸೊಪ್ಪನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ರಸ ಸೇವಿಸಬೇಕು. ಎಲ್ಲಾ ತರಹದ ಹಸಿರು ಸೊಪ್ಪು ಸೇವಿಸಿರಿ. ರಾಗಿ ಗಂಜಿಗೆ ನಾತಿಬೆಲ್ಲ ಹಾಕಿ ಕುಡಿಯಿರಿ.

* ಪಾಲಾಕ್ ಸೊಪ್ಪು, ಗಣಿಕೆ ಸೊಪ್ಪು, ಬಾಳೆಕಾಯಿ ಸಾಂಬಾರ್ ಮಾಡಿ ತಿನ್ನಿರಿ.

* ಹಸಿರು ಸೊಪ್ಪು ಹಾಗೂ ಮೈಸೂರು ಬದನೆ ಹೆಚ್ಚು ಉಪಯೋಗಿಸಿ.

* 10 ರಿಂದ 15 ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಕಿವುಚಿ ಬರಿ ಹೊಟ್ಟೆಯಲ್ಲಿ ಸೇವಿಸಬೇಕು. ಕನಿಷ್ಠ 15 ದಿನ ಸೇವಿಸಬೇಕು.

* ರಾತ್ರಿ ಮಲಗುವ ವೇಳೆ 1 ಲೋಟ ಕಾಯಿಸಿ ಆರಿಸಿದ ಹಸುವಿನ ಹಾಲಿಗೆ ಒಳ್ಳೆಯ ಜೇನು ತುಪ್ಪವನ್ನು ಬೆರೆಸಿ ಕುಡಿಯಬೇಕು.

* ಬೆಳಿಗ್ಗೆ ತಿಂಡಿಗೆ ಮೊದಲು 1 ಲೋಟ ಬೀಟ್ ರೂಟ್ ಜ್ಯೂಸ್ ಬಹಳ ಒಳ್ಳೆಯ ಪರಿಹಾರ.

* ಆಗಾಗ ಪಾಲಕ್ ಸೊಪ್ಪಿನ ಸೇವನೆ ಬಹಳ ಉಪಯೋಗ.

* ನುಗ್ಗೆ ಸೊಪ್ಪಿನ ಸೇವನೆ ಬಹಳ ಉಪಯೋಗ ನಿಮ್ಮ ಸಮಸ್ಯೆಗೆ.

Share This Article
Leave a Comment

Leave a Reply

Your email address will not be published. Required fields are marked *