ಜಾರಕಿಹೊಳಿಗೆ ಧನ್ಯವಾದ ತಿಳಿಸಿದ ಹೆಚ್ಡಿಕೆ : ಕಾರಣ ಏನ್ ಗೊತ್ತಾ..?

suddionenews
1 Min Read

ರಾಮನಗರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಜೆಡಿಎಸ್ ಪರವಾಗಿ ಹೇಳಿಕೆಯೊಂದನ್ನ ನೀಡಿದ್ದರು. ನಾವೂ ಕಾಂಗ್ರೆಸ್ ನಿಂದ 16 ಜನರನ್ನ ರೆಡಿ ಮಾಡಿದ್ದೀವಿ. ಆದ್ರೆ ಜೆಡಿಎಸ್ ಗೆ ಕೈ ಹಾಕೋದಿಲ್ಲ ಎಂದು ಹೇಳಿದ್ದರು. ಆ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ.

 

ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ಮೇಲೆ ಇಷ್ಟೊಂದು ಕನಿಕರ ಇಟ್ಟಿದ್ದಕ್ಕೆ ಧನ್ಯವಾದಗಳು. ನಮ್ಮ ಪಕ್ಷದ ಕಾರ್ಯಕರ್ತರ ಪರ ನಾನು ಧನ್ಯವಾದ ತಿಳಿಸುತ್ತೇನೆ. ಜೆಡಿಎಸ್ ಪಕ್ಷವನ್ನ ನಾವೂ ಕದಲಿಸುವುದಿಲ್ಲ ಎಂದಿದ್ದಾರೆ. ಅಷ್ಟು ಗೌರವ ಕೊಟ್ಟಿದ್ದಕ್ಕೆ ಖುಷಿ ಇದೆ.

ಇನ್ನು ಇದೆ ವೇಳೆ ಸಿದ್ದರಾಮಯ್ಯ ಅವರುಗೆ ಟಾಂಗ್ ಕೊಟ್ಟಿದ್ದು, ಅವರು ನಮ್ಮ ಪಕ್ಷದಲ್ಲಿ ಅಧ್ಯಕ್ಷರಾಗಿ ದುಡಿದಿದ್ದರ ಹಿಂದೆ ನನ್ನ ಪರಿಶ್ರಮವೂ ಇದೆ. ಇವತ್ತು ಅವರು ಅದನ್ನ ಮರೆತಿದ್ದಾರೆ. ನಮ್ಮಂತ ಕಾರ್ಯಕರ್ತರು ದುಡಿದ ಹಣವನ್ನ ಪಕ್ಷದ ಕಾರ್ಯಕ್ರಮಕ್ಕೆ ಉಪಯೋಗಿಸುತ್ತೇವೆ. ಇವರು ಅಧ್ಯಕ್ಷರಾಗಿದ್ದಾಗ ಜನರನ್ನ ನಾವೇ ಸೇರಿಸಿ, ಕಾರ್ಯಕ್ರಮವನ್ನು ನಾವೇ ಮಾಡಬೇಕಾಗಿತ್ತು. ಕಾಂಗ್ರೆಸ್ ನಲ್ಲೂ ನಿಷ್ಠಾವಂತ ಸದಸ್ಯರಿದ್ದರು. ಆದ್ರೆ ಅವರನ್ನ ಮೂಲೆಗುಂಪು ಮಾಡಿದ್ದಾರೆ. ಜೆಡಿಎಸ್ ನಲ್ಲಿ ಇದ್ದಾಗಲೂ ಹಾಗೆಯೇ ಆಗ್ತಾ ಇತ್ತು ಎಂದಜದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *