Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉತ್ತಮವಾದ ಪರಿಸರ ಹೊಂದುವುದು ನಮ್ಮೆಲ್ಲರ ಜವಾಬ್ದಾರಿ‌: ಪರಿಸರ ಅಧಿಕಾರಿ ಪ್ರಕಾಶ್

Facebook
Twitter
Telegram
WhatsApp

ವರದಿ ಮತ್ತು ಫೋಟೋ
        ಸುರೇಶ್ ಪಟ್ಟಣ್                  
ಮೊ : 87220 22817

ಚಿತ್ರದುರ್ಗ(ಅ.22) :  ಪಟಾಕಿ ಸುಡುವುದರಿಂದ ಹಣ, ವಾಯು ಮತ್ತು ಶಬ್ಬ ಮಾಲಿನ್ಯವಾಗಲಿದೆ. ಇದರಿಂದ ಯಾವ ರೀತಿಯ ಸಂತೋಷ ಸಿಗುವುದಿಲ್ಲ ಎಂದು ಮಾಲಿನ್ಯ ನಿಯಂತ್ರಣ ಇಲಾಖೆಯ ಪರಿಸರ ಅಧಿಕಾರಿ ಪ್ರಕಾಶ್ ತಿಳಿಸಿದರು.

ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಲಾ ಚೈತನ್ಯ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಉತ್ತಮವಾದ ಪರಿಸರವನ್ನು ಹೊಂದುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕೆ ಯಾವುದೇ ರೀತಿಯ ಪರಿಸರವನ್ನು ಹಾಳು ಮಾಡಬಾರದು, ಸಂವಿಧಾನ ನಮೆಗ ಹಲವಾರು ಹಕ್ಕುಗಳನ್ನು ನೀಡಿದೆ ಇದರಲ್ಲಿ ಉತ್ತಮವಾದ ಪರಿಸರವನ್ನು ಹೊಂದುವುದು ಸಹಾ ಒಂದಾಗಿದೆ. ನಮ್ಮ ಸುತ್ತಾ-ಮುತ್ತಲಿನ ಪರಿಸರವನ್ನು ಹಾಳು ಮಾಡಲು ನಮಗೆ ಯಾವುದೇ ರೀತಿಯ ಅಧಿಕಾರ ಇಲ್ಲ, ಅದರ ರಕ್ಷಣೆಯನ್ನು ಮಾಡಬೇಕಿದೆ ಹಾಳು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದರು.

ದೇಶದಲ್ಲಿ ಇತ್ತೀಚಿನ ದಿನದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲಿನ್ಯವೂ ಸಹಾ ಹೆಚ್ಚಾಗಿದೆ. ಪರಿಸರ ಸ್ನೇಹದಿಂದ ಎಲ್ಲವನ್ನು ನಾವು ಪಡೆಯಬಹುದಾಗಿದೆ. ಮಳೆಯಿಂದ ಬಿದ್ದ ನೀರನ್ನು ಹರಿಯಲು ಬಿಡದೇ ಅದರ ಸಂಗ್ರಹಣೆ ಮಾಡುವುದರ ಮೂಲಕ ಉಪಯೋಗ ಮಾಡಬೇಕಿದೆ. ಇದರೊಂದಿಗೆ ಸೋಲಾರ ಬಳಕೆ ಮಾಡುವುದರ ಮೂಲಕ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ. ಇದಲ್ಲದೆ ಪ್ಲಾಸ್ಟಿಕ್ ಬಳಕೆಯನ್ನು  ಸರ್ಕಾರ ನಿಷೇಧಿಸಿದೆ ಇದರ ಬಗ್ಗೆಯೂ ಸಹಾ ನಾವುಗಳು ಗಮನ ನೀಡಬೇಕಿದೆ.

ಮನೆಯಲ್ಲಿ ಕಸವನ್ನು ನೀಡುವಾಗ ಒಣ ಮತ್ತು ಕಸಿ ಎಂದು ಬೇರೆ ಮಾಡುವುದರ ಮೂಲಕ ವಿಂಗಡಿಸಿ ಕಸದವರಿಗೆ ನೀಡಿ, ಅನುಪಯುಕ್ತವಾದ ಎಲೆಕ್ಟಾನಿಕ್ ವಸ್ತುಗಳನ್ನು ಎಲ್ಲಿ ಅದರೆ ಅಲ್ಲಿ ಬಿಸಾಡಬೇಡಿ, ಇದರಿಂದ ಪರಿಸರ ಹಾಳಾಗುತ್ತದೆ ಎಂದು ಪ್ರಕಾಶ್ ತಿಳಿಸಿದರು.
ಇತ್ತೀಚಿನ ದಿನದಲ್ಲಿ ದೇಶದಲ್ಲಿ ಎಲೆಕ್ರ್ಟಾನಿಕ್ ಅನುಪಯುಕ್ತವಾದ ವಸ್ತುಗಳು ಹೆಚ್ಚಾಗುತ್ತಿದೆ. ಇದರಿಂದ 13 ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗಲಿದೆ.

ರಾಜ್ಯದಲ್ಲಿಯೂ ಸಹಾ ಈ ರೀತಿಯಾದ ಅನುಪಯುಕ್ತವಾದ ವಸ್ತುಗಳು ಹೆಚ್ಚಾಗಿದ್ದು, ಇದರ ಪುನರ್ ಬಳಕೆ ಮಾಡಲು ರಾಜ್ಯದಲ್ಲಿ 70 ಯೂನಿಟ್‍ಗಳಿವೆ, ಪಟಾಕಿಯನ್ನು ಸುಡುವುದರಿಂದ ನಮೆಗ ಯಾವುದೇ ರೀತಿಯ ಸಂತೋಷ ಸಿಗುವುದಿಲ್ಲ, ಇದರ ಬದಲಾಗಿ ಹಣ, ಪರಿಸರ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯವಾಗಲಿದೆ ಇದರಿಂದ ಈ ಬಾರಿ ದೀಪಾವಳಿಯನ್ನು ಬರೀ ಮಣ್ಣಿನ ದೀಪಗಳನ್ನು ಹಚ್ಚುವುದರ ಮೂಲಕ ಆಚರಣೆಯನ್ನು ಮಾಡುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಪರಿಸರ ಆಧಿಕಾರಿ ರಾಜೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ನಾಜಿಮ ಸ್ವಾಲೇಹಾ ಪೌಢಶಾಲೆ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ, ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಈ ಭಾರಿ ದೀಪಾವಳಿಯನ್ನು ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಣೆ ಮಾಡುವುದಾಗಿ ಮಕ್ಕಳಿಂದ ಪ್ರತಿಜ್ಞೆಯನ್ನು ಮಾಡಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!