Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಐಶ್ವರ್ಯಾ ರೈ ಡಿವೋರ್ಸ್ ಪಡೆಯುವ ಹಂತ ತಲುಪಿಯೇ ಬಿಟ್ಟರಾ..?

---Advertisement---

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವರದಿ ನಿನ್ನೆ ಮೊನ್ನೆಯದ್ದಲ್ಲ. ಇಬ್ಬರು ದೂರ ದೂರ ಆಗಿದ್ದಾರೆ ಎಂಬ ವದಂತಿಗಳು ಆಗಾಗ ಕೇಳಿ ಬರುತ್ತಲೇ ಇದೆ. ಇದೀಗ ಮುಂಬೈ ಸಿಟಿಯಲ್ಲಿ ಮತ್ತೆ ಆ ಸುದ್ದಿ ಮುನ್ನೆಲೆಗೆ ಬಂದಿದ್ದು, ಡಿವೋರ್ಸ್ ಘೋಷಣೆ ಒಂದೇ ಬಾಕಿ ಎನ್ನಲಾಗುತ್ತಿದೆ.

ನಟಿ ಐಶ್ವರ್ಯಾ ರೈ ಹಾಗೂ ಜಯಾ ಬಚ್ಚನ್ ನಡುವೆ ಮನಸ್ತಾಪ ಇರುವುದು ಹೊಸದೇನು ಅಲ್ಲ. ಇಬ್ಬರು ಮನೆಯಲ್ಲಿ ಮಾತನಾಡುತ್ತಿಲ್ಲ, ಹಲವು ವರ್ಷಗಳಿಂದ ಇವರ ನಡುವೆ ಮಾತುಕತೆ ನಿಂತು ಹೋಗಿದೆ‌. ಆದರೆ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯಗೋಸ್ಕರ ಆ ಮನೆಯಲ್ಲಿ ಇದ್ದರು ಎನ್ನಲಾಗುತ್ತಿದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತಿಚೆಗೆ ಒಟ್ಟಿಗೆ ಕಾಣಿಸಿಕೊಂಡಿರುವುದು ಕಡಿಮೆ. ಈ ಎಲ್ಲವೂ ಏನೋ ಸರಿ ಇಲ್ಲ ಎಂಬುದಕ್ಕೆ ಪುಷ್ಠಿ ನೀಡುತ್ತಿವೆ.

ಬಿಟೌನ್ ನಲ್ಲಿ ಚರ್ಚೆಯಾಗುತ್ತಿರುವ ಸುದ್ದಿಯ ಪ್ರಕಾರ, ಈಗಾಗಲೇ ಐಶ್ವರ್ಯಾ ರೈ, ಬಚ್ಚನ್ ಕುಟುಂಬದಿಂದ ದೂರವಾಗಿದ್ದಾರೆ ಎನ್ನಲಾಗಿದೆ. ಅತ್ತೆಯ ಜೊತೆಗಿನ ಹೊಂದಾಣಿಕೆ ಕಷ್ಟವಾಗಿದ್ದು, ತವರು ಮನೆ ಸೇರಿದ್ದಾರೆ ಎನ್ನಲಾಗಿದೆ. ಇನ್ನು ಅಧಿಕೃತವಾಗಿ ಡಿವೋರ್ಸ್ ಘೋಷಣೆ ಮಾಡಿಲ್ಲ, ಅದೊಂದೇ ಬಾಕಿ ಅಂತಾನೂ ಸುದ್ದಿಯಾಗುತ್ತಿದೆ. ಬಾಲಿವುಡ್ ಕ್ಯೂಟ್ ಕಪಲ್ ಸಾಲಿನಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಕೂಡ ಸೇರ್ಪಡೆಯಾಗುತ್ತಾರೆ. ಇಬ್ಬರಿಗೆ ಮುದ್ದಾದ ಮಗಳು ಆರಾಧ್ಯ ಇದ್ದಾಳೆ. ಅಮ್ಮನ ಜೊತೆಗೆ ಆಗಾಗ ಕ್ಯಾಮರಾ ಕಣ್ಣಿಗೂ ಬೀಳುವ ಆರಾಧ್ಯ, ಮುಗ್ಧತೆಗೆ ಸಾಕಷ್ಟು ಫ್ಯಾನ್ಸ್ ಕೂಡ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...