Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪತ್ರಕರ್ತ ಕಣ್ಣನ್ ಜನ್ಮದಿನ ಸಡಗರ

---Advertisement---

ಚಿತ್ರದುರ್ಗ, ಸುದ್ದಿಒನ್, ಫೆ.3: ಚಿತ್ರದುರ್ಗ ಜಿಲ್ಲೆಯಲ್ಲಿ ಕಣ್ಣನ್ ಎಂದೇ ಚಿರಪಚಿತರಾಗಿರುವ ಕೆ.ಎಂ.ಮುತ್ತುಸ್ವಾಮಿ ಜನ್ಮದಿನವನ್ನು ದಿಢೀರ್ ಆಗಿ ಆಚರಿಸಿ ಸಂಭ್ರಮಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಸೋಮವಾರ ಸುದ್ದಿಗೋಷ್ಠಿ ಆರಂಭದಲ್ಲಿ ಪತ್ರಕರ್ತರೊಬ್ಬರು, ಸರ್ ಇವತ್ತು ಕಣ್ಣನ್ ಜನ್ಮದಿನ ಎನ್ನುತ್ತಿದ್ದಂತೆ ಇಡೀ ಸುದ್ದಿಗೋಷ್ಠಿಯೇ ಜನ್ಮದಿನಾಚರಣೆ ಸಮಾರಂಭವಾಗಿ ಮಾರ್ಪಾಟ್ಟು ಆಯಿತು.

ಹಿಂದೆ ಕುಳಿತಿದ್ದ ಹಿರಿಯ ಪತ್ರಕರ್ತ ಕಣ್ಣನ್ ಅವರನ್ನು ಆಂಜನೇಯ ತಮ್ಮ ಬಳಿ ಕರೆದು ಜನ್ಮದಿನದ ಶುಭಾಷಯ ಕೋರಿದರು. ಮಾಜಿ ಸಚಿವರ ಧ್ವನಿಗೆ ಸುದ್ದಿಗೋಷ್ಠಿಯಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಶುಭಾಯ ಕೋರಿದರು.
ಬಳಿಕ ಆಂಜನೇಯ ಅವರು ಸಿಹಿ ತರಿಸಿ ಕಣ್ಣನ್ ಅವರಿಗೆ ತಮ್ಮ ಕೈಯಾರೆ ತಿನ್ನಿಸುವ ಮೂಲಕ ಜನ್ಮದಿನದ ಶುಭಾಶಯ ಹೇಳಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿದ್ದವರೆಲ್ಲರೂ ಸಂಭ್ರಮಿಸಿದರು. ನಂತರ ಎಲ್ಲರೂ ಕಣ್ಣನ್ ಅವರ ಕೈಕುಲುಕುವ ಮೂಲಕ ಶುಭಾಶಯ ಹೇಳಿದರು.

ಜಿಲ್ಲಾ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಎಚ್.ಲಕ್ಷö್ಮಣ್, ಪತ್ರಕರ್ತರಾದ ಯೋಗೀಶ್, ಕಿರಣ್ ತೊಡರನಾಳ್, ಈ.ಮಹೇಶಬಾಬು, ದ್ವಾರಕನಾಥ್, ಸುರೇಶ್ ಪಟ್ಟಣ್, ತಿಪ್ಪೇಸ್ವಾಮಿ, ವಿನಾಯಕ, ವರದರಾಜ ಯಾದವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಎನ್.ಡಿ.ಕುಮಾರ್, ಮದಸೀರಾ, ಸೈಯದ್ ಖುದ್ದೂಸ್, ರಂಗಸ್ವಾಮಿ, ಪ್ರಕಾಶ್, ಖಾಸೀಂ ಆಲಿ ಇತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...