ಚಿತ್ರದುರ್ಗ, ಸುದ್ದಿಒನ್, ಫೆ.3: ಚಿತ್ರದುರ್ಗ ಜಿಲ್ಲೆಯಲ್ಲಿ ಕಣ್ಣನ್ ಎಂದೇ ಚಿರಪಚಿತರಾಗಿರುವ ಕೆ.ಎಂ.ಮುತ್ತುಸ್ವಾಮಿ ಜನ್ಮದಿನವನ್ನು ದಿಢೀರ್ ಆಗಿ ಆಚರಿಸಿ ಸಂಭ್ರಮಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಸೋಮವಾರ ಸುದ್ದಿಗೋಷ್ಠಿ ಆರಂಭದಲ್ಲಿ ಪತ್ರಕರ್ತರೊಬ್ಬರು, ಸರ್ ಇವತ್ತು ಕಣ್ಣನ್ ಜನ್ಮದಿನ ಎನ್ನುತ್ತಿದ್ದಂತೆ ಇಡೀ ಸುದ್ದಿಗೋಷ್ಠಿಯೇ ಜನ್ಮದಿನಾಚರಣೆ ಸಮಾರಂಭವಾಗಿ ಮಾರ್ಪಾಟ್ಟು ಆಯಿತು.
ಹಿಂದೆ ಕುಳಿತಿದ್ದ ಹಿರಿಯ ಪತ್ರಕರ್ತ ಕಣ್ಣನ್ ಅವರನ್ನು ಆಂಜನೇಯ ತಮ್ಮ ಬಳಿ ಕರೆದು ಜನ್ಮದಿನದ ಶುಭಾಷಯ ಕೋರಿದರು. ಮಾಜಿ ಸಚಿವರ ಧ್ವನಿಗೆ ಸುದ್ದಿಗೋಷ್ಠಿಯಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಶುಭಾಯ ಕೋರಿದರು.
ಬಳಿಕ ಆಂಜನೇಯ ಅವರು ಸಿಹಿ ತರಿಸಿ ಕಣ್ಣನ್ ಅವರಿಗೆ ತಮ್ಮ ಕೈಯಾರೆ ತಿನ್ನಿಸುವ ಮೂಲಕ ಜನ್ಮದಿನದ ಶುಭಾಶಯ ಹೇಳಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿದ್ದವರೆಲ್ಲರೂ ಸಂಭ್ರಮಿಸಿದರು. ನಂತರ ಎಲ್ಲರೂ ಕಣ್ಣನ್ ಅವರ ಕೈಕುಲುಕುವ ಮೂಲಕ ಶುಭಾಶಯ ಹೇಳಿದರು.
ಜಿಲ್ಲಾ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಎಚ್.ಲಕ್ಷö್ಮಣ್, ಪತ್ರಕರ್ತರಾದ ಯೋಗೀಶ್, ಕಿರಣ್ ತೊಡರನಾಳ್, ಈ.ಮಹೇಶಬಾಬು, ದ್ವಾರಕನಾಥ್, ಸುರೇಶ್ ಪಟ್ಟಣ್, ತಿಪ್ಪೇಸ್ವಾಮಿ, ವಿನಾಯಕ, ವರದರಾಜ ಯಾದವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಎನ್.ಡಿ.ಕುಮಾರ್, ಮದಸೀರಾ, ಸೈಯದ್ ಖುದ್ದೂಸ್, ರಂಗಸ್ವಾಮಿ, ಪ್ರಕಾಶ್, ಖಾಸೀಂ ಆಲಿ ಇತರರಿದ್ದರು.