Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

5 ಕೋಟಿಗೂ ಹೆಚ್ಚು ಜನರ ಮನಸ್ಸು ಗೆದ್ದ ಹನುಮಂತು : ಬಿಗ್ ಬಾಸ್ ವಿನ್ನರ್

---Advertisement---

 

ಬಿಗ್ ಬಾಸ್ ಸೀಸನ್ 11ಗೆ ತೆರೆ ಬಿದ್ದಿದೆ. ಸುದೀಪ್ ಅವರ ಕಡೆಯ ಸೀಸನ್ ಇದಾಗಿತ್ತು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರೇ ಈ ಬಾರಿ ಬಿಗ್ ಬಾಸ್ ನಲ್ಲಿ ರಂಜಿಸಿದರು. ಫಿನಾಲೆ ವೇದಿಕೆ ತಲುಪಿದರು. ಅದಷ್ಟೇ ಅಲ್ಲ ವಿನ್ನರ್ ಕೂಡ ಆದರು. ಇದು ಕನ್ನಡ ಬಿಗ್ ಬಾಸ್ ನಲ್ಲಿ ಇತಿಹಾಸವನ್ನೇ ನಿರ್ಮಿಸಿದೆ. ಇಷ್ಟು ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಂದವರು ಗೆದ್ದಿರಲಿಲ್ಲ.

ಹಳ್ಳಿ ಹೈದ ಹನುಮಂತು ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆದ್ದು ಬೀಗಿದ್ದಾರೆ. 5 ಕೋಟಿಗೂ ಹೆಚ್ಚು ಮತಗಳನ್ನ ಪಡೆದು 50 ಲಕ್ಷ ಕ್ಯಾಶ್ ಪ್ರೈಸ್ ಗೆದ್ದು ಬೀಗಿದ್ದಾರೆ. ಹನುಮಂತು ಗೆಲ್ಲಬೇಕೆಂದು ಐದು ಕೋಟಿ ಮನಸ್ಸುಗಳು ಬಯಸಿದ್ದವು‌. ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರು, ಹನುಮಂತು ಕೈ ಎತ್ತಿದ ಕೂಡಲೇ ಸಂತಸ, ಸಂಭ್ರಮ ಹೆಚ್ಚಾಗಿತ್ತು.

ಹನುಮಂತು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದು 21 ದಿನಗಳ ಬಳಿಕ. ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯೇ ಇರಲಿಲ್ಲ. ಹನುಮಂತು ಬಂದ ಮೇಲೆ ನಗುವೇ ತುಂಬಿತ್ತು. ಹನುಮಂತು ಹಾಡುಗಳು, ಮಾಡುವ ತಲೆ ಹರಟೆ, ಆ ಮುಗ್ದತೆ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಅದರಲ್ಲೂ ಧನರಾಜ್ ಹಾಗೂ ಹನುಮಂತು ಸೇರಿಕೊಂಡು ನೋಡುಗರಿಗೆ ಮನರಂಜನೆ ನೀಡಿದರು. ಒಮ್ಮೆ ಬಟ್ಟೆ ಇಲ್ಲ ಎಂದಿದ್ದಕ್ಕೆ ಕಿಚ್ಚ ಸುದೀಪ್ ಬ್ರಾಂಡೆಂಡ್ ಬಟ್ಟೆಗಳನ್ನೇ ಕಳುಹಿಸಿಕೊಟ್ಟಿದ್ದರು. ಆದರೂ ಹನುಮಂತು ಶೋಕಿ ಮಾಡಲಿಲ್ಲ. ಆರಂಭದಲ್ಲಿ ಕಿಚ್ಚನಿಗೆ ಗೌರವ ಕೊಟ್ಟು ಒಂದೆರಡು ಬಾರಿ ಹಾಕಿದ. ಆಮೇಲೆ ತನ್ನದೇ ಬಟ್ಟೆ ಹಾಕಿದ. ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ತನ್ನ ಲುಂಗಿಯನ್ನ ಬಿಟ್ಟಿರಲಿಲ್ಲ ಹನುಮಂತು. ಇವರ ಈ ಸರಳತೆಗೂ ಜನ ಮನ ಸೋತಿದ್ದರು. 5 ಕೋಟಿ ಕನ್ನಡಿಗರ ಮನಸ್ಸು ಗೆಲ್ಲೋದು ಅಂದ್ರೆ ಸುಲಭವಾ..?

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...