Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾನೇ ಸ್ಟ್ರಾಂಗು ಅಂತ ಮೆರಿತಿದ್ದ ರಜತ್ ಗೆ ಹನುಮಂತು ಕೊಟ್ರು ಸಖತ್ ಟಾಂಗ್..!

---Advertisement---

ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದೆ. ಇನ್ನೊಂದು ವಾರವಷ್ಟೇ. ಕಿಚ್ಚನ ಪಂಚಾಯ್ತಿ ಇದು ಕೊನೆಯ ಪಂಚಾಯ್ತಿ. ಮುಂದಿ‌ನ ಶನಿವಾರ, ಭಾನುವಾರಕ್ಕೆ ಬಿಗ್ ಬಾಸ್ ಮುಕ್ತಾಯಗೊಳ್ಳುತ್ತದೆ. ಇಂದು ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ಎಪಿಸೋಡ್ ಸಖತ್ ಮಜಾ ಕೊಟ್ಟಿದೆ.

ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಬಂದವರು ರಜತ್. ಬಂದ ದಿನದಿಂದ ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಅವರನ್ನ ಟಾರ್ಗೆಟ್ ಮಾಡಿಕೊಂಡರು. ಚೈತ್ರಾ ಇರುವ ತನಕ ನಮ್ಮ ಬಾಸ್ ಬಾಸ್ ಅಂತ ಆಡ್ತಾ ಇದ್ರು. ಈಗಂತು ಮಂಜು ಫುಲ್ ಟಾರ್ಗೆಟ್. ನಾನೇ ಸ್ಟ್ರಾಂಗ್, ನನ್ ಪ್ಲ್ಯಾನ್ ಮುಂದೆ ಯಾರು ಇಲ್ಲ ಎಂದೇ ರಜತ್ ಬೀಗುತ್ತಿದ್ದರು. ಅಂಥವರಿಗೇನೆ ಹನುಮಂತು ಸರಿಯಾಗಿ ತಿರುಗೇಟು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹನುಮಂತು ಬಗ್ಗೆ ಅಂಡರ್ ಎಸ್ಟಿಮೇಟ್ ಮಾಡುವಂತೆ ಇಲ್ಲ. ಹಾಗೇ ಮಾಡಿದರೆ ಅವರೇ ದಡ್ಡರು ಅಂತ ಅರ್ಥ. ಹಳ್ಳಿ ಹೈದ, ಕಡಿಮೆ ಓದಿದ್ದಾರೆ ಅಂದರು ತಲೆಯಲ್ಲಿರುವ ಬುದ್ದಿ ತುಂಬಾ ಚೆನ್ನಾಗಿದೆ. ಹೀಗಾಗಿಯೇ ಒಂದು ರಿಯಾಲಿಟಿ ಶೋ ಗೆದ್ದರು ಅಹಂ ಇಲ್ಲ, ಲೈಫ್ ಸ್ಟೈಲ್ ಬದಲಾವಣೆಯೂ ಇಲ್ಲ. ಸಾದಾ ಸೀದಾ ಮನುಷ್ಯ.

ಕಿಚ್ಚನ ಪಂಚಾಯ್ತಿಯಲ್ಲಿ ಹಿಟ್ ಯಾರೂ, ಪ್ಲಾಫ್ ಯಾರೂ ಎಂಬ ಅಭಿಪ್ರಾಯದ ಟಾಸ್ಕ್ ಕೊಟ್ಟಿದ್ದಾರೆ. ಆಗ ಹನುಮಂತು ರಜತ್ ಅವರನ್ನ ಪ್ಲಾಫ್ ಸ್ಥಾನಕ್ಕೆ ನಿಲ್ಲಿಸಿ, ಸಿಲ್ಲಿ ರೀಸನ್ ಕೊಡ್ತಾರೆ ಎಂದಿದ್ದಾರೆ. ತಕ್ಷಣ ರಿಯಾಕ್ಟ್ ಮಾಡಿದ ರಜತ್, ಮಾವ ಮಾವ ಅಂತ ಹೋಗಿ ಚುಚ್ಚಿಬಿಟ್ಟೆ. ನಿನ್ನ ಡವ್ ಗಳನ್ನ ನೋಡಿದ್ದೀವಿ ಅಂದಿದ್ದಾರೆ. ಅದಕ್ಕೆ ಮೊದಲು ಸಿಲ್ಲಿ ರೀಸನ್ ಅಂದ್ರೆ ಯಾವ್ದು ಅಂತ ಅರ್ಥ ಮಾಡ್ಕೊ. ಆಮೇಲೆ ಸ್ಟ್ರಾಂಗ್ ರೀಸನ್ ಕೊಡಿವಂತೆ ಅಂತ ಹೇಳಿ ಸುದೀಪ್ ಮುಂದೆಯೇ ತಿರುಗೇಟು ನೀಡಿದ್ದಾರೆ. ಸುದೀಪ್ ಅಂತು ಸಖತ್ ಎಂಜಾಯ್ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...