ಚಿಕ್ಕಮಗಳೂರು: ದೈವ ನುಡಿದಂತೆ ಅಲ್ಲೊಂದು ಅಚ್ಚರಿ ನಡೆದಿದೆ. ಗುಳಿಗ ಕ್ಷೇತ್ರದ ಮೂಲ ವಿಗ್ರಹ ಮರದ ಕೆಳಗಡೆ ಸಿಕ್ಕಿದೆ. ಇದು ಜನರಿಗೆ ಅಚ್ಚರಿ ಮೂಡಿಸಿದ್ದಲ್ಲದೆ, ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.
ಏಪ್ರಿಲ್ 24ರಂದು ನಡೆದಿದ್ದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ದೈವ ವಿಗ್ರಹದ ವಿಚಾರವನ್ನು ನುಡಿದಿತ್ತು. ಅಲೆಖಾನ್ ರಸ್ತೆಯಲ್ಲಿ ದೇವಸ್ಥಾನದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ವಿಗ್ತಹ ಇರುವುದರ ಸೂಚನೆ ನೀಡಿತ್ತು. ಅದರಂತೆ ಸ್ಥಳೀಯರು ಅದನ್ನು ಹುಡುಕಲು ಹೊರಟಾಗ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಹೊರಟ್ಟಿ ಸಮೀಪದ ಇತಿಹಾಸ ಪ್ರಸಿದ್ಧ ಗುಳಿಗ ಕ್ಷೇತ್ರದ ವಿಗ್ರಹ ಪತ್ತೆಯಾಗಿದೆ.
ದೈವ ಹೇಳಿದ ಬಳಿಕ ದೇವಸ್ಥಾನದ ಆಡಳಿತ ಮಂಡಳಿ, ಭಕ್ತಾಧಿಗಳು ಎಲ್ಲೆಡೆ ಹುಡುಕಾಟ ಶುರು ಮಾಡಿದರು. ಯಾಕೆಂದರೆ ಈ ದೇವರು ಸುತ್ತಮುತ್ತಲಿನ ಜನರ ಆರಾಧ್ಯದೈವವಾಗಿತ್ತು. ಇದೀಗ ದೈವದ ಮಾತಿನಂತೆ ವಿಗ್ರಹ ಪತ್ತೆಯಾಗಿರುವುದು ಸ್ಥಳೀಯರಿಗೆ ಸಂತಸ ಉಕ್ಕಿ ಬಂದಿದೆ.