ಸುದ್ದಿಒನ್ ವೆಬ್ ಡೆಸ್ಕ್
ಗಾಂಧಿನಗರ: ಗುಜರಾತ್‌ನ ಮೋರ್ಬಿ ತೂಗು ಸೇತುವೆ ಕುಸಿದು 140 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ
ಓರೆವಾ ಕಂಪನಿಯ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ
2 ವ್ಯವಸ್ಥಾಪಕರು,
2 ಗುತ್ತಿಗೆದಾರರು,
3 ಭದ್ರತಾ ಸಿಬ್ಬಂದಿ ಮತ್ತು
2 ಗುಮಾಸ್ತರು ಇದ್ದಾರೆ.
ಸೇತುವೆ ಅಪಘಾತದ ನಂತರ, ಕಂಪನಿಯ ಉನ್ನತ ಹುದ್ದೆಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#WATCH | An injured survivor in the #MorbiBridgeCollapse recounts the harrowing moment when the suspension bridge collapsed and how he saved himself pic.twitter.com/MWX3HpwqmT
— ANI (@ANI) October 31, 2022
ಸೇತುವೆ ವಿಚಾರದಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್‌ನಿಂದ ಹಿಡಿದು ಸೇತುವೆ ಪುನರಾರಂಭದವರೆಗೆ ಹಲವು ತಪ್ಪುಗಳು ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.